Recent Posts

Sunday, January 19, 2025
ಬೆಂಗಳೂರುರಾಜ್ಯವಾಣಿಜ್ಯಸುದ್ದಿ

ನಂದಿನಿ ಹಾಲು – ಮೊಸರಿನ ದರ ಏರಿಕೆಗೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಂದಿನಿ ಹಾಲು- ಮೊಸರಿನ ದರ ಏರಿಕೆಗೆ ಬ್ರೇಕ್ ಹಾಕಿದ ಸಿಎಂ.

ಬೆಂಗಳೂರು: ನಂದಿನಿ ಹಾಲು, ಮೊಸರಿನ ದರಗಳನ್ನು ಏರಿಸಿ ಕೆಎಂಎಫ್​ ಇಂದು ಮಧ್ಯಾಹ್ನ ಆದೇಶ ಹೊರಡಿಸಿತ್ತು. ಇವತ್ತೇ ಮಧ್ಯರಾತ್ರಿಯಿಂದ ಹೊಸ ದರ ಜಾರಿಗೆ ಬರುವುದಿತ್ತು. ಇದರಿಂದ ಬರುವ ಆದಾಯವನ್ನು ಪ್ರೋತ್ಸಾಹ ಧನ ರೂಪದಲ್ಲಿ ರೈತರಿಗೆ ನೀಡಲಾಗುವುದು ಎಂದು ಕೆಎಂಫ್​ ಹೇಳಿತ್ತು.

ಆದರೆ ಈಗ ಮುಖ್ಯಮಂತ್ರಿ ಸೂಚನೆ ಹಿನ್ನೆಲೆಯಲ್ಲಿ ಕೆಎಂಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಮ್ಮ ತೀರ್ಮಾನವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ.

ದರ ಏರಿಕೆ ಬಗ್ಗೆ ಇಂದು ಸೇಡಂ ನಲ್ಲಿ ಮುಖ್ಯಮಂತ್ರಿ ಪ್ರತಿಕ್ರಿಯಿಸಿ ‘ಹಾಲು ದರ ಹೆಚ್ಚಳ ಬಗ್ಗೆ ಆರು ತಿಂಗಳಿಂದ ಚರ್ಚೆ ನಡೆದಿದೆ. ಜನರಿಗೆ ಭಾರ ಆಗದಂತೆ, ರೈತರಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಲು ದರ ಏರಿಕೆ ಬಗ್ಗೆ 20 ರ ನಂತರ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಹೇಳಿದ್ದರು.

ಈಗ ಹಾಲಿನ ದರ ಹೆಚ್ಚಳ ಮಾಡುವ ತೀರ್ಮಾನವನ್ನು ತಡೆ ಹಿಡಿಯುವಂತೆ ಕೆಎಂಎಫ್ ಅಧ್ಯಕ್ಷರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ‘ಹಾಲಿನ ದರ ಪರಿಷ್ಜರಣೆ ಮಾಡುವ ಕುರಿತು ನ. 20ರ ನಂತರ ಸಭೆ ನಡೆಸಿ ತೀರ್ಮಾನ ಮಾಡೋಣ. ಸದ್ಯ ಹಾಲಿನ ದರ ಪರಿಷ್ಕರಣೆ ಮಾಡುವ ತೀರ್ಮಾನ ಹಿಂಪಡೆಯರಿ’ ಎಂದು ಸಿಎಂ ಹೇಳಿದ್ದಾರೆ. ಆದೇಶವನ್ನು ಪಾಲಿಸುವುದಾಗಿ ಕೆಎಂಎಫ್​ ತಿಳಿಸಿದೆ.