Sunday, January 19, 2025
ಸುದ್ದಿ

ಕಾದರ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತನ ಕೊಚ್ಚಿ ಕೊಲೆ,ಓರ್ವ ಗಂಭೀರ.

ಮಂಗಳೂರು : ಉಳ್ಳಾಲ ಸಂಜೆ ಸುಮಾರು 7 ರ ಹೊತ್ತಿಗೆ ಬಿಜೆಪಿ ಸಕ್ರಿಯ ಕಾರ್ಯಕರ್ತನನ್ನು ದುಷ್ಕರ್ಮಿಗಳ ಗ್ಯಾಂಗ್ ಒಂದು ಕೊಚ್ಚಿ ಕೊಲೆ ಮಾಡಲಾಗಿದ್ದು ಇನ್ನೋರ್ವ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎಂದು ವರದಿ ಆಗಿದೆ .ಹತ್ಯೆಗೊಳಗಾದ ವ್ಯಕ್ತಿಯನ್ನು ಮುಕ್ಕಚೇರಿ ನಿವಾಸಿ ಝುಬೈರ್ (೩೮) ಎಂದು ಗುರುತಿಸಲಾಗಿದ್ದು ಇರಿತಗೊಳಗಾದ ಇಲ್ಯಾಸ್ ಚಿಂತಾಜನಕವಾಗಿದ್ದು ಘಟನೆ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ .

ಘಟನೆ ಬಗ್ಗೆ  ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಮ್  ಉಚ್ಚಿಲ ಖಂಡನೆ ವ್ಯಕ್ತ ಪಡಿಸಿದ್ದು ಈ ಕೂಡಲೇ ಆರೋಪಿಗಳ ಬಂಧನ ನಡೆಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು