ಪುತ್ತೂರು: “ಗ್ರಂಥಾಲಯವು ಶಿಕ್ಷಣದ ಅವಿಭಾಜ್ಯ ಅಂಗ, ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ರೂಡಿಸುಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕೆಂದು” ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ| ಆಂಟನಿ ಪ್ರಕಾಶ್ ಮೊಂತೇರರವರು ಹೇಳಿದರು.
ನ.14 ರಿಂದ ನವಂಬರ್ 20 ರವರೆಗೆ ಭಾರತದಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಕಾಲೇಜು ಗ್ರಂಥಾಲಯ ವಿಭಾಗವು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಯೋಗದೊಂದಿಗೆ ಗ್ರಂಥಾಲಯದಲ್ಲಿ ನವಂಬರ್ 14 ರಿಂದ 19 ರವರೆಗೆ ಆಯೋಜಿಸಿದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತಾಡಿದರು.
ಕಾಲೇಜು ಆಯ್ಕೆ ಶ್ರೇಣಿ ಗ್ರಂಥಾಪಾಲಕರಾದ ಅಬ್ದುಲ್ ರಹ್ಮಾನ್ ಜಿ ಯವರು ಮಾತನಾಡಿ ಸುಮಾರು 550 ಕ್ಕೂ ಮಿಕ್ಕಿದ “ಮೌಲ್ಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ” ಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ, ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ (ಐಕ್ಯೂಎಸಿ) ನಿರ್ದೇಶಕರು ಮತ್ತು ಉಪ ಪ್ರಾಂಶುಪಾಲರದ ಡಾ| ಎ.ಪಿ. ರಾಧಾಕೃಷ್ಣರವರು ಸ್ವಾಗತಿಸಿದರು. ಸ್ನಾತಕೋತ್ತರ ಕೇಂದ್ರದ ಗ್ರಂಥಪಾಲಕ ಮನೋಹರ್ ಯಸ್.ಜಿ. ರವರು ವಂದಿಸಿದರು, ಕನ್ನಡ ವಿಭಾಗದ ಮುಖ್ಯಸ್ತರಾದ ಡಾ| ವಿಜಯಕುಮಾರ್ ಮೊಳೆಯಾರ್ ರವರು ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಂಥಾಲಯ ಸಲಹ ಸಮಿತಿಯ ಸದಸ್ಯರು, ಪ್ರಾಧ್ಯಾಪಕರು ಪಿ.ಯೂ. ಕಾಲೇಜಿನ ಗ್ರಂಥಪಾಲಕ ಸಂತೋಸ್ ಮೊರಾಸ್, ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಯಸ್, ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು