Friday, November 22, 2024
ಸುದ್ದಿ

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಆ.6 ರಿಂದ ಸೆ. 24ರ ತನಕ ಕಾಣಿಯೂರು ಶ್ರೀಗಳ ಚಾತುರ್ಮಾಸ್ಯ ಮಹೋತ್ಸವ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ಸೀಮೆಗೆ ಸಂಬಂಧಿಸಿದ ಕಾಣಿಯೂರು ಮೂಲ ಮಠದ ಯತಿ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಈ ವರ್ಷದ ಚಾತುಮಾಸ್ಯ ಮಹೋತ್ಸವವನ್ನು ಪುತ್ತೂರು ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಜರುಗಲಿದ್ದು, ಅ.6 ರಿಂದ ಸೆ. 24 ರ ತನಕ 50 ದಿನಗಳ ಶ್ರೀಗಳ ಚಾತುರ್ಮಾಸ್ಯ ಮಹೋತ್ಸವ ನಡೆಯಲಿದೆ ಎಂದು ಚಾತುರ್ಮಾಸ್ಯ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಉಡುಪಿಯ ಅಷ್ಠಮಠಗಳ ಪೈಕಿ ಕಾಣಿಯೂರು ಮಠವೂ ಒಂದಾಗಿ ಕಾಣಿಯೂರು ಮಠಕ್ಕೂ ಪುತ್ತೂರು ಸೀಮೆಗೂ ವಿಶೇಷ ಸಂಬಂಧವಿದೆ. ಈ ನಿಟ್ಟಿನಲ್ಲಿ ಚಾತುರ್ಮಾಸ್ಯದ 50 ದಿನವೂ ಸ್ವಾಮೀಜಿಯವರು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿದ್ದು, ಬೆಳಗ್ಗಿನ ಅವಧಿಯಲ್ಲಿ ಪುತ್ತೂರು ತಾಲೂಕು ವ್ಯಾಪ್ತಿಯ ದೇವಸ್ಥಾನಗಳಿಗೆ ಭೇಟಿ ನೀಡಿ ಸಂಜೆ ವೇಳೆ ಶಿಷ್ಯ ವರ್ಗದವರ ಮನೆಗಳಿಗೆ ಹಾಗೂ ಬರ ಮಾಡಿಕೊಂಡವರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಲಿದ್ದಾರೆ. ಆಗಸ್ಟ್ 6ಕ್ಕೆ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಾಮೀಜಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆದು ಅಲ್ಲಿಂದ ಸಂಪ್ಯ ಅನ್ನಪೂರ್ಣೇಶ್ವರಿ ದೇವಸ್ಥಾನದ ತನಕ ಮೆರವಣಿಗೆ ನಡೆಯಲಿದೆ. ಅಂದು ವಿಶೇಷ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಲಿದೆ. 51ದಿನಗಳ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಬರುವ ನಾಗರಪಂಚಮಿ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಮಹಾಲಯ ಹಬ್ಬಗಳನ್ನು ವಿಶೇಷವಾಗಿ ಸ್ವಾಮಿಗಳ ಉಪಸ್ಥಿತಿಯಲ್ಲಿ ಆಚರಿಸಲಾಗುವುದು. ಮತ್ತು ಎಲ್ಲಾ ದಿನಗಳಲ್ಲೂ ಅನ್ನದಾನ, ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರೀತಂ ಪುತ್ತೂರಾಯರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಚಾತುರ್ಮಾಸ್ಯದ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಒಂದಷ್ಟು ಧಾರ್ಮಿಕ ಪರಂಪರೆ ಉಳಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮವನ್ನು ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದೇವೆ. ಉಡುಪಿಯ ಮಠದ ಶ್ರೀಗಳಿಂದ ಪುತ್ತೂರಿನಲ್ಲಿ ನಡೆಯುವ ಚಾತುರ್ಮಾಸ್ಯ ಪ್ರಥಮವಾಗಿದ್ದು, ಭಕ್ತರ ಸಹಕಾರ ಇಲ್ಲಿ ಅತೀ ಅಗತ್ಯ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಖಜಾಂಚಿ ಸೀತಾರಾಮ ಶೆಟ್ಟಿ ಕಂಬಳ್ತಡ್ಡ, ಲೊಕೇಶ್ ಗೌಡ ಬನ್ನೂರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಚಾತುರ್ಮಾಸ್ಯ ವಿಶೇಷತೆ:


50 ದಿನಗಳ ಚಾತುರ್ಮಾಸ್ಯ ಮಹೋತ್ಸವದಲ್ಲಿ ನಾಗರ ಪಂಚಮಿ, ಗಣೇಶ ಚತುರ್ಥಿ, ರಾಘವೇಂದ್ರ ಸ್ವಾಮಿ ಆರಾಧನೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ವಿಶೇಷತೆ ಪಡೆದು ಕೊಳ್ಳಲಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ದಿನ ವಿದ್ಯಾವಲ್ಲಭ ಸ್ವಾಮೀಜಿಯವರ ಮೂಲಕ ಭಕ್ತರಿಗೆ ಶ್ರೀ ಕೃಷ್ಣನಿಗ ಅಗ್ರ್ಯ ಹಾಕಲು ಅವಕಾಶವಿದೆ. ಅಂದು ರಾತ್ರಿ ಉಡುಪಿಯಲ್ಲಿ ಆಚರಣೆಯಲ್ಲಿರುವ ಹಾಗೆ ಕೊಟ್ಟಿಗೆ, ಚಕ್ಕುಲಿ ವಿಶೇಷತೆಯಾಗಿರುತ್ತದೆ. ಉಳಿದ ಆಯ್ದ ದಿನಗಳಲ್ಲಿ ಧನ್ವಂತರಿ ಹೋಮ, ಲಕ್ಷ ಗಾಯತ್ರಿ ಜಪ, ಲಕ್ಷ ಕುಂಕುಮಾರ್ಚಾನೆ, ಲಕ್ಷ ತುಳಸಿ ಅರ್ಚನೆ, ಶ್ರೀ ಚಕ್ರಪೂಜೆಯ ಪೂರ್ಣಮಂಡಲವನ್ನು ನೆರವೇರಿಸಲಾಗುತ್ತದೆ. ಶ್ರೀಗಳು ಬೆಳಿಗ್ಗೆ ಗಂಟೆ. 8.30 ರಿಂದ 9.30ರ ತನಕ ನಿತ್ಯ ದೇವಸ್ಥಾನ ಭೇಟಿ. ಸಂಜೆ ಶಿಷ್ಯ ವರ್ಗದ ಮತ್ತು ಭಕ್ತರ ಅಪೇಕ್ಷೆ ಮೇರೆಗೆ ಪಾದಪೂಜೆ, ಮನೆ ಸಂಪರ್ಕ ನಡೆಯಲಿದೆ. ಸಂಜೆ ನಿತ್ಯ ಸಭಾ ಕಾರ್ಯಕ್ರಮ ಮತ್ತು ತಳಮಟ್ಟದಿಂದ ಹಿಡಿದು ಸಾರ್ವಜನಿಕ ರಂಗದಲ್ಲಿ ವಿಶೇಷತೆಯನ್ನು ಗುರುತಿಸಿ 50 ದಿನವೂ ನಿತ್ಯ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ ಭಜನೆ, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದ್ದು ವಿಶೇಷತೆ ಎಂದರೆ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮ ಧಾರ್ಮಿಕ ಭಾವನೆಯುಳ್ಳವಾಗಿದ್ದು ಕಲಾವಿದರೆಲ್ಲರೂ ಪುತ್ತೂರಿನವರೇ ಆಗಿರುತ್ತಾರೆ. ಪ್ರೀತಂ ಪುತ್ತೂರಾಯ ಸಂಚಾಲಕರು