ಪತಂಜಲಿ ಸಂಸ್ಧೆಯ ವತಿಯಿಂದ ಯಕ್ಷಗಾನ ಕಲಾವಿದರಾದ ಪ್ರೇಮಾ ಕಿಶೋರ್ ಇವರನ್ನ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಧೆಯ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮ, ಶ್ರೀ ಕನಕದಾಸರ 535ನೇ ಜಯಂತಿ ಅಂಗವಾಗಿ ಹಾಗೂ ಸ್ವಾತಂತ್ರö್ಯದ 75ನೇ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ರಾಜ್ಯಮಟ್ಟದ ಕನಕ ಕಥಾಕೀರ್ತನ ಮಹೋತ್ಸವ ಸಮ್ಮೇಳನ ತರಬೇತಿ ಕಾರ್ಯಗಾರ ಕನಕ ಕಲಾ ವೈಭವ ಜಾನಪದ ಯುವಜನಮೇಳ ಇಂದು ಶಿವಮೊಗ್ಗ ನಗರದ ಕುವೆಂಪು ರಂಗ ಮಂದಿರದಲ್ಲಿ ನಡೆದಿದೆ.
ಕಾರ್ಯಕ್ರಮದಲ್ಲಿ ಸಮಾಜಸೇವೆ ಹಾಗು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಸಾಧನೆ ಮಾಡಿದ ಕಲಾವಿದರಿಗೆ ಸಾದಕರಿಗೆ ರಾಜ್ಯಮಟ್ಟದ ಕನಕಶ್ರೀಚೇತನ ರತ್ನ ರಾಜ್ಯ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗದೆ.
ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನ ಗುರುತಿಸಿ, ಯಕ್ಷಗಾನ ಕಲಾವಿದರಾದ ಪ್ರೇಮಾ ಕಿಶೋರ್ ಇವರನ್ನ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.