ಶಬರಿಮಲೆ, ನ 17 : ವಿಶ್ವ ಪ್ರಸಿದ್ಧ ಭಾರತದ ಕೇರಳ ರಾಜ್ಯದ ಶಬರಿಮಲೆಯಲ್ಲಿ ಇಂದಿನಿಂದ ಮಂಡಲಂ ಮಕರವಿಳಕ್ಕು ಪೂಜೆ ಆರಂಭವಾಗಲಿದ್ದು, ಇದು ಇನ್ನು ಮುಂದಿನ ಎರಡು ತಿಂಗಳ ಕಾಲ ನಡೆಯಲಿದೆ.
ಇದಕ್ಕಾಗಿ ದೇಗುಲ ಬುಧವಾರ ಸಂಜೆಯೇ ತೆರೆಯಲಾಗಿದ್ದು, ಹೊಸ ತಂತ್ರಿಯಾಗಿ ಕೆ. ಜಯರಾಮ್ ನಂಬೂದಿರಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.ಕೊವಿಡ್-19ರ ನಿರ್ಬಂಧದ ಕಾರಣ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿತ್ತು. ಸಧ್ಯ ಕೊವೀಡ್ ಪೂರ್ವದಂತೆಯೇ ಸ್ಥಿತಿ ನಿರ್ಮಾಣವಾಗಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳಬಹುದು ಎಂಬ ನಿರೀಕ್ಷೆಯಿದೆ. ಶಬರಿಮಲೆ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ಸುಮಾರು 13,000 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.ಈ ಋತುವಿನಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಸ್ಥಳದಲ್ಲಿ ಎನ್ ಡಿ ಆರ್ ಎಫ್ ನ 2 ತಂಡಗಳನ್ನು ನಿಯೋಜಿಸಲಾಗಿದ್ದು , ಭದ್ರತೆಗಾಗಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.