Friday, September 20, 2024
ಸುದ್ದಿ

ನ. 26 ರಿಂದ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಖಾದಿ ಉತ್ಸವ-2022 ವಸ್ತು ಪ್ರದರ್ಶನ – ಕಹಳೆ ನ್ಯೂಸ್

ಮಂಗಳೂರು : ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ರಾಜ್ಯ ಮಟ್ಟದ ಖಾದಿ ಉತ್ಸವ-2022ರ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನ.26 ರಿಂದ ಡಿಸೆಂಬರ್ 10ರವರೆಗೆ ನಗರದ ಲಾಲ್ ಬಾಗ್ ನಲ್ಲಿರುವ ಕರಾವಳಿ ಮೈದಾನದಲ್ಲಿ ಆಯೋಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಆಯೋಗದಿಂದ ಮಾನ್ಯತೆ ಪಡೆದ ಘಟಕಗಳ ಫಲಾನುಭವಿ, ಸಂಘ-ಸಂಸ್ಥೆಗಳು ಭಾಗವಹಿಸಬಹುದು. ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಗ್ರಾಮ ಕೈಗಾರಿಕೆ (610 ಅಡಿ) ಮಳಿಗೆಗೆ 12,050 ರೂ.ಗಳು ಮತ್ತು ಖಾದಿ ಮಳಿಗೆಗೆ (1010 ) 14,410 ರೂ.ಗಳನ್ನು ಪಾವತಿಸಿ ಮಳಿಗೆ ಮುಂಗಡವಾಗಿ ಕಾಯ್ದಿರಿಸಲು ಡಿ.ಡಿ ಮೂಲಕ ಕರ್ನಾಟಕ ಸ್ಟೇಟ್ ಖಾದಿ ಆಂಡ್ ವಿಲೇಜ್ ಇಂಡಸ್ಟ್ರೀಸ್ ಬೋರ್ಡ್, ಮಂಗಳೂರು ಹಾಗೂ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಬೇಕು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂ.ಸಂಖ್ಯೆ : 9480825644, 0824-2454800 ಸಂಪರ್ಕಿಸಿ ಅಥವಾ ನಗರದ ಲಾಲ್ ಬಾಗ್ ನಲ್ಲಿರುವ ಮಹಾನಗರ ಪಾಲಿಕೆ ಕೆಳ ಮಹಡಿಯಲ್ಲಿರುವ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಜಿಲ್ಲಾ ಕಚೇರಿ ಸಂಪರ್ಕಿಸುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.