Monday, January 20, 2025
ಸುದ್ದಿ

ಪ್ರಣವ ವಿದ್ಯಾರ್ಥಿ ಸಂಘ ಹಾಗೂ ವಿವಿಧ 12 ಸಂಘಗಳ ಉದ್ಘಾಟನಾ ಸಮಾರಂಭ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪದವಿ ಮಹಾವಿದ್ಯಾಲಯದಲ್ಲಿ ಪ್ರಣವ ವಿದ್ಯಾರ್ಥಿ ಸಂಘ ಹಾಗೂ ವಿವಿಧ 12 ಸಂಘಗಳ (ಪ್ರತಾಪ ಕ್ರೀಡಾ ಸಂಘ, ಪ್ರಬೋಧ ವಾಣಿಜ್ಯ ಸಂಘ, ಪ್ರಭವ ವಿಜ್ಞಾನ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಪ್ರದೀಪ್ತ ಸಾಂಸ್ಕೃತಿಕ ಸಂಘ, ಪ್ರಜ್ಞಾನ ಸಾಹಿತ್ಯ ಸಂಘ, ಪ್ರಭಾಸ ಮಾನವಿಕ ಸಂಘ ಇತ್ಯಾದಿ.) ಉದ್ಘಾಟನಾ ಸಮಾರಂಭ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ದೀಪ ಪ್ರಜ್ವಲನ ಹಾಗೂ ಪರದೆ ಸರಿಸುವ ಮೂಲಕ ಸಂಘಗಳನ್ನು ಉದ್ಘಾಟಿಸಿದರು. ನಂತರ ಕೃಷ್ಣ ಫಲಕದ ಮೇಲೆ ಓಂಕಾರ ಬರೆಯುವ ಮೂಲಕ ಭವಿಷ್ ಘಟಕ, ಗಿಡಕ್ಕೆ ನೀರೆರೆದು ಪರಿಸರ ಸಂಘ, ಹೂಡಿಕೆಯ ಮೂಲಕ ವಾಣಿಜ್ಯ ಸಂಘ, ಚದುರಂಗದ ಮೂಲಕ ಕ್ರೀಡಾ ಸಂಘ, ಹಾಗೂ ಭಗವದ್ಗೀತೆಗೆ ಪುಷ್ಪಾರ್ಚನೆ ಮಾಡಿ ಸಾಹಿತ್ಯ ಸಂಘಗಳನ್ನು ಅತಿಥಿಗಳು ಉದ್ಘಾಟಿಸಿದರು. ಮಾನವಿಕ ಸಂಘದ ನಿರ್ದೇಶಕ ಗಂಧರ್ವ ಮತದಾನದ ವರದಿಯನ್ನು ವಾಚಿಸಿದರು.

ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಅವರು ವಿವಿಧ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ತರಗತಿ ಪ್ರತಿನಿಧಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟಕರಾದ ಡಾ. ಪ್ರಭಾಕರ ಭಟ್ ಅವರು ಮತದಾನ ಎಂಬುದು ಸಮಾಜದ ಹಿತವನ್ನು ಕಾಪಾಡಲು ಇರುವ ವ್ಯವಸ್ಥೆ, ವಿದ್ಯಾರ್ಥಿ ಸಂಘದ ಚುನಾವಣೆಯು ವಿದ್ಯಾರ್ಥಿ ಜೀವನದಲ್ಲಿ ಮತದಾನದ ಅನುಭವ ಪಡೆಯಲು ಇರುವ ಉತ್ತಮ ಅವಕಾಶ. ಇಲ್ಲಿ ಅಧಿಕಾರ ಪಡೆದವರು ಇತರರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಶ್ರೀಯುತ ಕೃಷ್ಣ ಪ್ರಸಾದ್ ಶ್ರೀಮಾನ್ ವಹಿಸಿದರೆ, ಅತಿಥಿಗಳಾಗಿ ಶ್ರೀಮತಿ ಸುಲೋಚನಾ ಜಿ ಕೆ ಭಟ್ (ನಗರ ನೀರು ಸರಬರಾಜು ಒಳ ಚರಂಡಿ ಮಂಡಳಿ, ರಾಜ್ಯ ನಿರ್ದೇಶಕರು), ದಿನೇಶ್ ಅಮ್ಟೂರು (ಭಾ.ಜ.ಪಾ ಎಸ್. ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು), ಶ್ರೀ ಗೋಪಾಲ ಶೆಣೈ ಕಂಚಿನ ( ಆಡಳಿತ ಮಂಡಳಿ ಸದಸ್ಯ, ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ) ಶೀ ನಾರಾಯಣ ಶೆಟ್ಟಿ ಕುಲ್ಯಾರು (ಅಧ್ಯಕ್ಷರು, ಶ್ರೀರಾಮ ಸೌಹಾರ್ದ ಸಹಕಾರಿ ನಿ.) ಹಾಗೂ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹಾವಿದ್ಯಾಲಯದ ಬೋಧಕ- ಬೋಧಕೇತರ ವೃಂದದವರು ಹಾಗೂ ಶ್ರೀಮತಿ ಲಕ್ಷ್ಮೀ ರಘುರಾಜ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು. ಹರ್ಷಿತಾ ನಿರೂಪಿಸಿ, ಕು. ಕೀರ್ತಿ ಸ್ವಾಗತಿಸಿ, ಶ್ರೀ ಜಯದೀಪ್ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿಯನ್ನು ಹಂಚಲಾಯಿತು.