Wednesday, January 22, 2025
ಸುದ್ದಿ

ಇಬ್ಬರು ಮಕ್ಕಳೊಂದಿಗೆ ಜಲಾಶಯಕ್ಕೆ ಹಾರಿದ ತಾಯಿ-ಕಹಳೆ ನ್ಯೂಸ್

ಮಾಡಿಕೊಂಡ ಘಟನೆ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ಶಶಿಕಲಾ ಪರಸಪ್ಪ ಗೋಡಿ (32) ಹಾಗೂ ಮಕ್ಕಳಾದ ಸುದೀಪ್ (4) ಮತ್ತು ರಾಧಿಕಾ (3) ಮೃತ ದುರ್ದೈವಿಗಳು. ಸೌದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ವಟ್ನಾಳ ಗ್ರಾಮ ಹದ್ದಿಯಲ್ಲಿರುವ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಮಕ್ಕಳೊಂದಿಗೆ ಮಹಿಳೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಸಾರದಲ್ಲಿನ ಸಮಸ್ಯೆಯಿಂದಾಗಿ ನೊಂದು ಮಹಿಳೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೌದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದ್ದು, ತನಿಖೆ ಮುಂದುವರಿದಿದೆ.