Wednesday, January 22, 2025
ಸುದ್ದಿ

ಸೋಲಾರ್ ದಾರಿದೀಪದ ಬ್ಯಾಟರಿ ಕಳವು ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್ -ಕಹಳೆ ನ್ಯೂಸ್

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಆರೂರು ಗ್ರಾಮದ ವಿವಿಧೆಡೆಗಳಲ್ಲಿ ಪಂಚಾಯತ್ ವತಿಯಿಂದ ಅಳವಡಿಸಿದ್ದ ಸೋಲಾರ್ ದಾರಿ ದೀಪಗಳ ಬ್ಯಾಟರಿ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಪ್ಪೂರು ಅಮ್ಮುಂಜೆ ನಿವಾಸಿ ಯಜ್ಞೇಶ್(24), ಉದ್ಯಾವರ ಮೂಲದ ಪೂರ್ಣೇಶ್ ಆಚಾರ್ಯ(22) ಬಂಧಿತ ಆರೋಪಿಗಳು.

ಆರೋಪಿಗಳು ಕಳವು ಮಾಡಿರುವ ಬ್ಯಾಟರಿಗಳನ್ನು ಮಾರಾಟ ಮಾಡಲು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಬೈಕ್ ಹಾಗೂ ಬ್ಯಾಟರಿ ಸಮೇತ‌ ಆರೋಪಿಗಳನ್ನು ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದು, ಮಾತ್ರವಲ್ಲದೆ ಅವರು ಬೇರೆ ಕಡೆ ಮಾರಾಟ ಮಾಡಲು ಇರಿಸಿದ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬ್ಯಾಟರಿಗಳ ಕಳವಿನ ಬಗ್ಗೆ ಆರೂರು ಪಂಚಾಯತ್ ಉಪಾಧ್ಯಕ್ಷ ಗುರುರಾಜ್ ಭಟ್ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು ಆರೋಪಿ ಹಾಗೂ ಸೊತ್ತು ಪತ್ತೆಯ ಬಗ್ಗೆ ಸಿಬ್ಬಂದಿಯನ್ನು ನೇಮಿಸಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷರಾದ ಅಕ್ಷಯ್ ಮಚೀಂದ್ರ ಹಾಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಉಡುಪಿ ಡಿವೈಎಸ್ಪಿ ಸುಧಾಕರ ಎಸ್.ನಾಯ್ಕ್ ಬ್ರಹ್ಮಾವರ ಸರ್ಕಲ್ ಇನ್ ಸ್ಪೆಕ್ಟರ್ ಅನಂತ ಪದ್ಮನಾಭ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಠಾಣಾ ಪಿಎಸ್ಸೈ ರಾಜಶೇಖರ ವಂದಲಿ, ಠಾಣಾ ತನಿಖೆ ಪಿಎಸ್ಸೈ ಮುಕ್ತಾಬಾಯಿ,

ಬ್ರಹ್ಮಾವರ ಠಾಣಾ ಅಪರಾಧ ಸಿಬ್ಬಂದಿಯಾದ ವೆಂಕಟ್ರಮಣ ದೇವಾಡಿಗ, ಪ್ರವೀಣ್ ಶೆಟ್ಟಿಗಾರ್, ರಾಘವೇಂದ್ರ ಕಾರ್ಕಡ, ಉದಯ ಅಮೀನ್, ಮುಹಮ್ಮದ್ ಅಜ್ಮಲ್, ಹಾಗೂ ದಿಲೀಪ್, ಪ್ರಸಾದ್, ಸಂತೋಶ್ ರಾಥೋಡ್ ಹಾಗೂ ಕಂಪ್ಯೂಟರ್ ಸಿಬ್ಬಂದಿ ಯೋಗೀಶ್ ಮತ್ತು ಜೀಪು ಚಾಲಕ ಅಣ್ಣಪ್ಪ ಪಾಲ್ಗೊಂಡಿದ್ದರು