Wednesday, January 22, 2025
ಸುದ್ದಿ

“ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಹಾಗೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು” : ವಂ| ಡಾ| ಆಂಟನಿ ಪ್ರಕಾಶ್‌ –ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜು, ವ್ಯವಹಾರ ಆಡಳಿತ ವಿಭಾಗ, ನಿರ್ವಹಣಾ ಸಂಘ ಹಾಗೂ ಇನ್ಸ್ಟಿಟ್ಯೂಶನ್‌ ಇನೊವೇಶನ್‌ ಕೌನ್ಸಿಲ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿರ್ವಹಣಾ ಸಂಘದ ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಉದ್ಯಮಶೀಲತೆ ಹಾಗೂ ಆವಿಷ್ಕಾರ ಎಂಬ ವಿಷಯದ ಕುರಿತು ಕಾರ್ಯಗಾರವು ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೊ ರವರು ಸೃಜನಶೀಲತೆ ಮತ್ತು ಕ್ರಿಯಾಶೀಲತೆಯನ್ನು ಮೈಗೂಡಿನಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪುತ್ತೂರಿನ ಶ್ರೀ ವರದರಾಜ ಟ್ರೇಡರ್ಸ್‌ ನ ಮಾಲಕರಾದ ಶ್ರೀ ಕೃಷ್ಣಾನಂದ ನಾಯಕ್‌ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಧನಾತ್ಮಕ ಚಿಂತನೆಗಳ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ತಮ್ಮಲ್ಲಿ ಸುಪ್ತವಾದ ಪ್ರತಿಭೆಯನ್ನು ಗುರುತಿಸಿ ಸಾಧನೆ ಮಾಡಲು ಪ್ರೇರೇಪಿಸಿದರು.

ನಂತರ ಉದ್ಯಮಶೀಲತೆ ಹಾಗೂ ಆವಿಷ್ಕಾರ ಎಂಬ ವಿಷಯದ ಕುರಿತಾದ ಕಾರ್ಯಗಾರವನ್ನು ಆನ್‌ ಲೈನ್‌ ಮೂಲಕ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಉಜಿರೆಯ ಸಂಧ್ಯಾ ಫ್ರೆಶ್‌ ಸಂಸ್ಥೆಯ ಮಾಲಕಿಯಾದ ಶ್ರೀಮತಿ ಅರ್ಚನಾ ಆರ್‌ ಪೈ ಉದ್ಯಮಶೀಲತೆಯ ಬಗ್ಗೆ ವಿವರಿಸಿದರು, ಕಾರ್ಯಗಾರದ ಬಳಿಕ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಉದ್ಯಮಶೀಲತೆಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.

ಹರ್ಶಿತಾ ಮತ್ತು ಬಳಗ ಪ್ರಾರ್ಥಿಸಿದರು. ನಿರ್ವಹಣಾ ಸಂಘದ ಅಧ್ಯಕ್ಷ ಭವಿತ್‌ ಸ್ವಾಗತಿಸಿದರು. ನಿರ್ವಹಣಾ ಸಂಘದ ಸಂಯೋಜಕ ಪ್ರಶಾಂತ್‌ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರೀಕ್ಷಾ ಮತ್ತು ಮನೋಜ್‌ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು, ಮಹಮ್ಮದ್‌ ಸುಹೈಲ್‌ ವಂದಿಸಿದರು. ದೇವಿಕಾ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡ
ಹಾಗೂ ಇನ್ಸ್ಟಿಟ್ಯೂಶನ್‌ ಇನೊವೇಶನ್‌ ಕೌನ್ಸಿಲ್‌ನ ಸಂಯೋಜಕರಾದ ಅಭಿಷೇಕ್‌ ಸುವರ್ಣ ಉಪಸ್ಥಿತರಿದ್ದರು.