Thursday, November 28, 2024
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ : “ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ಮಾನವರಿಂದ ಮಾತ್ರ ಸಾಧ್ಯ” ಡಾ. ಹೆಚ್‌ ಮಾಧವ ಭಟ್‌ –ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಶಾಸ್ತ್ರ, ಇನೊವೇಶನ್‌ ಕೌನ್ಸಿಲ್‌ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ ಆಂಟನಿ ಪ್ರಕಾಶ್‌ ಮೊಂತೆರೊ ರವರು ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು “ ನಾವು ಕೇವಲ ಓದು ಬರಹ ಕಲಿತಾಗ ವಿದ್ಯಾವಂತರೆನಿಸುವುದಿಲ್ಲ, ಪ್ರತಿಯೊಬ್ಬನ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಮುಖ್ಯ ಉದ್ದೇಶ. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿದಿನವೂ ಶಿಕ್ಷಣ ದಿನವಾಗಿರುತ್ತದೆ “ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಜಿರೆಯ ಯಸ್‌ ಡಿ ಯಂ ಕಾಲೇಜಿನ ಪ್ರಾ‍ಧ್ಯಾಪಕರಾದ ಡಾ| ಹೆಚ್‌ ಮಾಧವ ಭಟ್‌ ರವರು “ಮಾನವ ಸಂಪನ್ಮೂಲವು ಎಲ್ಲಾ ಸಂಪತ್ತುಗಳಿಗೂ ಮಿಗಿಲಾದುದು. ತಾನು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಹಂಚಲು ಮಾನವನಿಂದ ಮಾತ್ರ ಸಾಧ್ಯ. ಪ್ರಸಕ್ತ ತಂತ್ರಜ್ಞಾನದ ಯುಗದಲ್ಲಿ ಜ್ಞಾನವು ಯಾರ ಸೊತ್ತೂ ಅಲ್ಲ. ಅದು ನಮ್ಮೆಲ್ಲರ ಬೆರಳ ತುದಿಯಲ್ಲೇ ಇದೆ. ನಮಗೆ ಕಲಿಯಬೇಕೆಂಬ ಅದಮ್ಯ ತುಡಿತವಿದ್ದರೆ ಮಾತ್ರ ಸಾಧನೆ ಸಾಧ್ಯ“ ಎಂದು ಹೇಳಿದರು.

ಹಿತಶ್ರೀ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಇನೊವೇಶನ್‌ ಕೌನ್ಸಿಲ್‌ನ ಅಧ್ಯಕ್ಷರಾದ ಗೀತಾ ಪೂರ್ಣಿಮಾ ಸ್ವಾಗತಿಸಿದರು. ಮಾನವಿಕ ಶಾಸ್ತ್ರದ ಡೀನ್‌ ಪ್ರೊ| ಸುಬೇರ್‌ ವಂದಿಸಿದರು. ವಿದ್ಯಾರ್ಥಿನಿ ವಿನ್ಯಾ ಕಾರ್ಯಕ್ರಮ ನಿರೂಪಿಸಿದರು.