Wednesday, January 22, 2025
ಸುದ್ದಿ

ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನಿಂದ ವಿವಾಹಿತ ಮಹಿಳೆ ರೂಪಾ ನಾಪತ್ತೆ – ಕಹಳೆ ನ್ಯೂಸ್

26 ವರ್ಷ ಪ್ರಾಯದ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಜಪ್ಪಿನಮೊಗರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನಲ್ಲಿ ಇದ್ದ 26 ವರ್ಷ ಪ್ರಾಯದ ರೂಪ ನಾಪತ್ತೆಯಾದ ವಿವಾಹಿತ ಮಹಿಳೆ. ಹಾಸನ ಜಿಲ್ಲೆಯ ಚೆನ್ನಾರಾಯ ಪಟ್ಟಣ, ಶ್ರವಣ ಬೊಳಗೋಳ ಗ್ರಾಮದ ಎಕೆ ಕಾಲೋನಿ ಶ್ರೀ ಕಂಠನಗರದಲ್ಲಿ ವಾಸವಾಗಿದ್ದ ಪ್ರವೀಣ್ ಜೊತೆಗೆ ರೂಪಾ ಅವರಿಗೆ ವಿವಾಹವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರವೀಣ ಹಾಗೂ ರೂಪಾ ಮಂಗಳೂರಿನ ಸುರತ್ಕಲ್‍ನ ಕಾನ ಇಡ್ಯಾ ಗ್ರಾಮದ ಜಾಕೋಬ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಸಂದರ್ಭ ಒಂದು ಭಾರಿ ನಾಪತ್ತೆಯಾಗಿದ್ದ ರೂಪಾ ಅವರನ್ನ ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಸುರತ್ಕಲ್ ಪೊಲೀಸ್ ಠಾಣೆಗೆ ಕರೆ ತರಲಾಗಿತ್ತು. ಆ ಬಳಿಕ 9-10-2022 ರಂದು ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಗೆ ರೂಪಾವರನ್ನ ದಾಖಲು ಮಾಡಲಾಗಿತ್ತು. ಇದೀಗ 15-10-2022 ರಂದು ಮುಂಜಾನೆ 2 ಗಂಟೆ ಸುಮಾರಿಗೆ ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನಿಂದ ರೂಪಾ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪ್ರಜ್ಞಾ ಸ್ವಾಧಾರ ಗೃಹದ ಅದೀಕ್ಷಕರು ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

26 ವರ್ಷ ಪ್ರಾಯದ ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಜಪ್ಪಿನಮೊಗರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‍ನಲ್ಲಿ ಇದ್ದ 26 ವರ್ಷ ಪ್ರಾಯದ ರೂಪ ನಾಪತ್ತೆಯಾದ ವಿವಾಹಿತ ಮಹಿಳೆ. ಹಾಸನ ಜಿಲ್ಲೆಯ ಚೆನ್ನಾರಾಯ ಪಟ್ಟಣ, ಶ್ರವಣ ಬೊಳಗೋಳ ಗ್ರಾಮದ ಎಕೆ ಕಾಲೋನಿ ಶ್ರೀ ಕಂಠನಗರದಲ್ಲಿ ವಾಸವಾಗಿದ್ದ ಪ್ರವೀಣ್ ಜೊತೆಗೆ ರೂಪಾ ಅವರಿಗೆ ವಿವಾಹವಾಗಿತ್ತು.