Tuesday, January 21, 2025
ಕ್ರೈಮ್ರಾಷ್ಟ್ರೀಯಸುದ್ದಿ

ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆ ; ಮತ್ತೊಂದು ಲವ್ ಜಿಹಾದ್…!? – ಕಹಳೆ ನ್ಯೂಸ್

ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದೆ. ದೇಹದ ಮೇಲೆ ಹಲವು ಗಾಯದ ಗುರುತುಗಳಿವೆ ಎಂದು ತಿಳಿದುಬಂದಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎದೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ವಯಸ್ಸು ಅಂದಾಜು 22 ವರ್ಷಗಳು. ಈ ಕೊಲೆ ಬೇರೆ ಕಡೆ ನಡೆದಿದ್ದು ನಂತರ ಮೃತದೇಹವನ್ನು ತಂದು ಇಲ್ಲಿ ಬಿಸಾಡಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಯುವತಿಯ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ಬಳಿಕ ವಿಧಿವಿಜ್ಞಾನ ತಂಡವನ್ನು ಕರೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.  ಎಕ್ಸ್‌ಪ್ರೆಸ್‌ವೇಯಲ್ಲಿ ರಾಯ್ ಕಟ್ ಸರ್ವಿಸ್ ರಸ್ತೆಯಲ್ಲಿ ಮಧ್ಯಾಹ್ನ, ಕೆಲವು ಕಾರ್ಮಿಕರು ಪೊದೆಗಳಲ್ಲಿ ಸೂಟ್‌ಕೇಸ್ ಬಿದ್ದಿರುವುದನ್ನು ನೋಡಿದರು. ಹೊಸ ಸೂಟ್‌ಕೇಸ್ ನೋಡಿದ ಕಾರ್ಮಿಕರು ಅದು ಕಾರಿನ ಟ್ರಂಕ್‌ನಿಂದ ಬಿದ್ದಿರಬೇಕು ಎಂದು ಭಾವಿಸಿದ್ದಾರೆ. ಆದರೆ, ಹತ್ತಿರ ಹೋದಾಗ ಸೂಟ್‌ಕೇಸ್‌ನಿಂದ ರಕ್ತ ಸೋರುತ್ತಿರುವುದು ಕಂಡಿತು. 

ರಕ್ತ ಕಂಡೊಡನೆ ಅಲ್ಲಿಂದ ಹಾದು ಹೋಗುತ್ತಿದ್ದ ಇತರೆ ವಾಹನಗಳೂ ನಿಂತವು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಸೂಟ್‌ಕೇಸ್‌ ತೆರೆದಾಗ ಅದರಲ್ಲಿ ಯುವತಿಯ ಮೃತದೇಹವಿತ್ತು. ಕೈಕಾಲುಗಳನ್ನು ವಿರೂಪಗೊಳಿಸಿದ ನಂತರ ಶವವನ್ನು ಮೊದಲು ಪಾಲಿಥಿನ್‌ನಲ್ಲಿ ಇರಿಸಿ ನಂತರ ಸೂಟ್‌ಕೇಸ್‌ನಲ್ಲಿ ಇರಿಸಲಾಗಿತ್ತು. ಬಾಲಕಿಯ ಎದೆಗೆ ಗುಂಡು ತಗುಲಿದೆ ಎಂದು ಹೇಳಲಾಗುತ್ತಿದೆ. ಗುರುತು ನೋಡಿದರೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದೆ ಎಂದು ತೋರುತ್ತದೆ. ದೇಹದ ಹಲವೆಡೆ ಗಾಯದ ಗುರುತುಗಳಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.