Sunday, November 24, 2024
ಕ್ರೈಮ್ದಕ್ಷಿಣ ಕನ್ನಡರಾಜ್ಯರಾಷ್ಟ್ರೀಯಸುದ್ದಿ

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ; ISIS ಉಗ್ರ ಪರ ಗೋಡೆ ಬರಹ ಬರೆದಿದ್ದ ಆರೋಪಿಯಿಂದ ಕೃತ್ಯ – ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೈ ಅಲರ್ಟ್ – ಕಹಳೆ ನ್ಯೂಸ್

ಉಗ್ರರ ಬೆಂಬಲಿಸಲು ಕಡಲ ನಗರಿಯಲ್ಲೇ ಬಾಂಬ್ ಬ್ಲಾಸ್ಟ್ ಗೆ ಪ್ಲಾನ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು: ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ (Cooker Blast) ಕರಾವಳಿಯನ್ನು ಬೆಚ್ಚಿ ಬೀಳಿಸಿದೆ. ಶಂಕಿತ ಉಗ್ರ ನಡೆಸಿದ ಪ್ರೀ ಪ್ಲಾನ್ ಫ್ಲಾಪ್ ಆಗಿ ಆತನಿಗೇ ಮಾರಕವಾಗಿ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮೈಸೂರಿನಿಂದ ಹೊರಟ ಶಂಕಿತ ಉಗ್ರ ಮಂಗಳೂರಿನಲ್ಲೇ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದ. ಹಾಗಾದ್ರೆ ಆತ ಯಾಕೆ ಮಂಗಳೂರಿನಲ್ಲೇ ಬಾಂಬ್ ಬ್ಲಾಸ್ಟ್ ಗೆ ತಯಾರಿ ನಡೆಸಿದ್ದ ಅನ್ನೋ ಡಿಟೈಲ್ ಸ್ಟೋರಿ ಇಲ್ಲಿದೆ.

ಕುಕ್ಕರ್ ಬಾಂಬ್ ಸ್ಟೋಟ ಮಾಡಲು ಶಂಕಿತ ಉಗ್ರ ಮಂಗಳೂರ (Mangaluru) ನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದ ಅನ್ನೋ ಸಾಕಷ್ಟು ಅನುಮಾನ ಮೂಡಿದೆ. ಈ ಹಿಂದೆ ಮಂಗಳೂರಿನ ಎರಡು ಕಡೆಗಳಲ್ಲಿ ಐಸಿಸಿ (ISIS) ಜಿಂದಾಬಾದ್ ಎಂದು ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಿವಮೊಗ್ಗದ ತೀರ್ಥಹಳ್ಳಿ ನಿವಾಸಿ ಶಾರಿಕ್, ಈ ಬಾಂಬ್ ಬ್ಲಾಸ್ಟ್ ಗೆ ಪ್ಲಾನ್ ಮಾಡಿದ್ದ. ಶಾರಿಕ್ (Sharik) ಹಾಗೂ ಆತನ ಸ್ನೇಹಿತ ಮಾಝ್ ಮನೀರ್ ಅಹಮ್ಮದ್ ಮಂಗಳೂರಿನ ದೇರಳಕಟ್ಟೆ (Deralakatte) ಯ ಪಿ ಎ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದಾಗಲೇ ಈ ಗೋಡೆ ಬರಹ ಬರೆದಿದ್ದರು. ಪೊಲೀಸರು ಅಂದು ಇಬ್ಬರೂ ವಿದ್ಯಾರ್ಥಿಗಳು ಎಂದು ಸಣ್ಣಪುಟ್ಟ ಕೇಸ್ ಜಡಿದು ಕೆಲವೇ ದಿನಗಳಲ್ಲಿ ಜಾಮೀನು ಸಿಗುವಂತೆ ಮಾಡಿದ್ದರು. ಆ ಬಳಿಕವೂ ಈ ಇಬ್ಬರೂ ಉಗ್ರ ಚಟುವಟಿಕೆಯಲ್ಲೇ ಇದ್ರೂ ಪೊಲೀಸರು ಮಾತ್ರ ಕ್ಯಾರೇ ಅನ್ನಲಿಲ್ಲ. ಇದರ ಪರಿಣಾಮವೇ ಇಂದಿನ ಬಾಂಬ್ ಬ್ಲಾಸ್ಟ್ ಪ್ರಕರಣ.

ಮಂಗಳೂರಿನ ಕೋರ್ಟ್ ಆವರಣ (Mangaluru Court Road) ಹಾಗೂ ಬಿಜೈ ಎಂಬಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಬಳಿಕ ಜಾಮೀನು ಪಡೆದಿದ್ದ ಈ ಇಬ್ಬರು ಮತ್ತೆ ಸುಮ್ಮನೆ ಇರಲಿಲ್ಲ. ಇಬ್ಬರೂ ಬಾಂಬ್ ತಯಾರಿಸಿ ಹಲವೆಡೆ ಬಾಂಬ್ ಸ್ಪೋಟದ ರಿಹರ್ಸಲ್ ಮಾಡುತ್ತಿದ್ದರು. ಇದ್ಯಾವುದೂ ಪೊಲೀಸರಿಗೆ ಗೊತ್ತೇ ಆಗಿಲ್ಲ. ಇತ್ತೀಚೆಗೆ ಶಿವಮೊಗ್ಗದ ಕೋಮು ಗಲಭೆಯಲ್ಲಿ ವ್ಯಕ್ತಿಯೋರ್ವನಿಗೆ ಚೂರಿ ಹಾಕಿದ ಪ್ರಕರಣದಲ್ಲಿ ಈ ಇಬ್ಬರೂ ಭಾಗಿಯಾಗಿದ್ದರು. ಮಾಝ್ ಮುನೀರ್ ಅಹಮ್ಮದ್ ನನ್ನು ಎನ್‍ಐಎ (NIA) ಅಧಿಕಾರಿಗಳು ಬಂಧಿಸಿದ್ರೂ ಶಾರೀಕ್ ಮಾತ್ರ ಭೂಗತನಾಗಿದ್ದ. ಇದೀಗ ಅದೇ ದ್ವೇಷ ಇಟ್ಟುಕೊಂಡು ಮಂಗಳೂರಿನಲ್ಲೇ ಬಾಂಬ್ ಸ್ಫೋಟಿಸಿ ಉಗ್ರರನ್ನು ಬೆಂಬಲಿಸಲು ಪ್ಲಾನ್ ಮಾಡಿದ್ದ. ಹೀಗಾಗಿ ಈ ಹಿಂದಿನಿಂದಲೂ ಮಂಗಳೂರಿನಲ್ಲೇ ಎನ್‍ಐಎ ಘಟಕ ಸ್ಥಾಪಿಸಬೇಕೆಂಬ ಒತ್ತಾಯ ಇದ್ದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಬಾಂಬ್ ಸ್ಫೋಟ ನಡೆಸಿದ ಆರೋಪಿ ಮಂಗಳೂರಿನಲ್ಲೇ ಶಿಕ್ಷಣ ಮುಗಿಸಿದ್ದರಿಂದ ಮಂಗಳೂರಿನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ. ಜೊತೆಗೆ ಕೋಮು ಸೂಕ್ಷ್ಮ ಪ್ರದೇಶದಲ್ಲೇ ಆತಂಕ ಮೂಡಿಸಿ ಉಗ್ರರ ಗಮನ ಸೆಳೆಯಲು ಮಂಗಳೂರನ್ನೇ ಟಾರ್ಗೆಟ್ ಮಾಡಿಕೊಂಡಿರೋ ಸಾಧ್ಯತೆ ಇದೆ. ಏನೇ ಇರಲಿ ಮಂಗಳೂರಿನಲ್ಲಿ ನಡೆಯಬೇಕಿದ್ದ ದೊಡ್ಡ ದುರಂತವೊಂದು ತಪ್ಪಿರೋದು ಎಲ್ಲರನ್ನು ನಿಟ್ಟುಸಿರು ಬಿಡುವಂತೆ ಮಾಡಿದೆ.