Monday, January 20, 2025
ಉಡುಪಿದಕ್ಷಿಣ ಕನ್ನಡಸಿನಿಮಾಸುದ್ದಿ

‘ಕಾಂತಾರ’ ಯಶಸ್ಸಿನ ಬಳಿಕ ತೆರೆಮೇಲೆ ಮೂಡಲಿದೆ ಕೊರಗಜ್ಜನ ಮಹಿಮೆ? ಸಿನಿಮಾ ಮಾಡ್ತಿರೋದ್ಯಾರು.?ಕೊರಗಜ್ಜನ ಸಿನಿಮಾದಲ್ಲಿ ನಟಿಸೋದ್ಯಾರು? – ಕಹಳೆ ನ್ಯೂಸ್

‘ಕಾಂತಾರ’ ಬಾಕ್ಸಾಫೀಸ್‌ನಲ್ಲಿ ಮೆಗಾ ಬ್ಲಾಕ್‌ ಬಸ್ಟರ್ ಅಂತ ಸಾಬೀತಾಗಿದ್ದು ಬೇರೆ ಮಾತು. ಆದರೆ, ಈ ಸಿನಿಮಾ ಕೇವಲ ಜನರಿಗೆ ಮನರಂಜನೆಯನ್ನಷ್ಟೇ ನೀಡಿಲ್ಲ. ಬದಲಾಗಿ, ಕರಾವಳಿ ಭಾಗದ ಆಚಾರ-ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ಸಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಪಂಜುರ್ಲಿ’ ಹಾಗೂ ‘ಗುಳಿಗ’ ಕರಾವಳಿ ಭಾಗದ ದೈವಗಳನ್ನು ತೆರೆಮೇಲೆ ತರುವಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದಾರೆ. ಇಡೀ ಸಿನಿಮಾ ಬಗ್ಗೆ ಒಂದಾದ್ರ, ಸಿನಿಮಾದ ಕೊನೆಯಲ್ಲಿ ಬರೋ 20 ನಿಮಿಷದ ಕ್ಲೈಮ್ಯಾಕ್ಸ್ ಇನ್ನೊಂದು. ಇಲ್ಲಿ ಪಂಜುರ್ಲಿ ಹಾಗೂ ಗುಳಿಗ ಈ ಎರಡು ದೈವಗಳನ್ನು ಎಫೆಕ್ಟಿವ್ ಆಗಿ ತೋರಿಸಲಾಗಿದೆ.

ಕರ್ನಾಟಕ ಅಷ್ಟೇ ಅಲ್ಲ. ಹಿಂದಿ ಬೆಲ್ಟ್, ತೆಲುಗು, ತಮಿಳು ಸೇರಿದಂತೆ ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಮೆಚ್ಚುಗೆ ಗಳಿಸಿದೆ. ಪಂಜುರ್ಲಿ, ಗಳಿಗ, ಕೋಲಾ ದೈವಗಳ ಬಗ್ಗೆ ಜನರು ಮಾತಾಡುವಂತಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಕರಾವಳಿಯಲ್ಲಿ ನಂಬುವ ಮತ್ತೊಂದು ದೈವ ಕೊರಗಜ್ಜನ ಮಹಿಮೆಯನ್ನು ತೆರೆಮೇಲೆ ತರಲು ತಂಡವೊಂದು ಸಜ್ಜಾಗಿದೆ.
‘ಕಾಂತಾರ’ದಲ್ಲಿ ಪಂಜುರ್ಲಿ-ಗುಳಿಗ ಮಹಿಮೆ

‘ಕಾಂತಾರ’ ಅಪ್ಪಟ ಕರ್ನಾಟಕದ ಕಥೆ. ಕರಾವಳಿ ಭಾಗದ ಜನರು ನಂಬುವ ದೈವದ ಕಥೆ. ‘ಪಂಜುರ್ಲಿ’ ಹಾಗೂ ‘ಗುಳಿಗ’ ಎಂಬ ಎರಡು ಪವರ್‌ಫುಲ್ ದೈವಗಳನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟ ಸಿನಿಮಾವಿದು. ‘ಕಾಂತಾರ’ ರಿಲೀಸ್ ಆದಲ್ಲಿಂದ ಈ ಎರಡು ದೈವಗಳ ಬಗ್ಗೆ ಜನರು ಮಾತಾಡುವಂತಾಗಿದೆ. ಇಡೀ ದೇಶವೇ ಪಂಜುರ್ಲಿ, ಗಳಿಗ ಹಾಗೂ ಕೋಲದ ಬಗ್ಗೆ ಚರ್ಚೆ ಮಾಡುತ್ತಿದೆ. ಈ ಯಶಸ್ಸಿನ ಬಳಿಕ ಮತ್ತೊಂದು ತಂಡ ಕರಾವಳಿ ದೈವವ ಹಿನ್ನಲೆ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಮಂದಾಗಿದೆ.

ತೆರೆಮೇಲೆ ಕೊರಗಜ್ಜನ ಮಹಿಮೆ?

ಇತ್ತೀಚೆಗೆ ಕರಾವಳಿಯಲ್ಲಿ ಸಿನಿಮಾವೊಂದು ಸೆಟ್ಟೇರಿದೆ. ಅದುವೇ ‘ಕರಿ ಹೈದ.. ಕರಿ ಅಜ್ಜ’. ಈ ಸಿನಿಮಾ ಕೊರಗಜ್ಜನ ಮಹಿಮೆಯನ್ನು ಹೊತ್ತುಬರಲಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಂದ್ಹಾಗೆ ಸುಧೀರ್ ಅತ್ತಾವರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕೊರಗಜ್ಜನ ಮಹಿಮೆ ಮತ್ತು ಕಾರ್ಣಿಕವನ್ನು ತೆರೆಯ ಮೇಲೆ ತರಬೇಕೆಂದು ಹಲವರು ಯತ್ನಿಸುತ್ತಲೇ ಇದ್ದರು. ಆದ್ರೀಗ ಸುಧೀರ್ ಅತ್ತಾವರ್ ಕೊರಗಜ್ಜನ ಜೀವನದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ, 12ನೇ ಶತಮಾನದಲ್ಲಿದ್ದ ಕೊರಗಜ್ಜನ ನೈಜ ಬದುಕಿನ ಬಗ್ಗೆ ಯಾರಿಗೂ ತಿಳಿಯದ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲು ಮುಂದಾಗಿದ್ದಾರೆ.

ಯಾರೀ ಕೊರಗಜ್ಜ?

ಕರಾವಳಿ ಜನರು ಕೊರಗಜ್ಜನನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಕೊರಗಜ್ಜನ ನೆನೆದು ತಮ್ಮ ಕಷ್ಟಗಳನ್ನು ಹೇಳಿಕೊಂಡರೆ, ಅದನ್ನು ಪರಿಸುತ್ತಾನೆ ಎಂಬ ನಂಬಿಕೆಯಿದೆ. ಅಲ್ಲದೆ ಕೆಲವು ಪವಾಡಗಳು ಕಣ್ಮುಂದೆಯೇ ನಡೆದಿದೆ. ಹೀಗಾಗಿ ಕರಾವಳಿಯಲ್ಲಿ ಕೊರಗಜ್ಜನ ಹಲವು ದೇವಾಲಯಗಳನ್ನು ನೋಡಬಹುದು. ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳ ಮಗನೇ ತನಿಯ ಕೊರಗ. ಚಿಕ್ಕಂದಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾನೆ. ಆಗ ಬೈದರೆ ಜನಾಂಗದ ಮೈರಕ್ಕ ಬೈದರೆ ಎಂಬ ಮಹಿಳೆ ಈತನನ್ನು ಸಾಕುತ್ತಾಳೆ. ಈಕೆಯ ಕುಲಕಸುಬು ಸೇಂದಿ ತಯಾರಿಕೆ. ಸಾಮಾನ್ಯ ವ್ಯಕ್ತಿ ಎನಿಸಿಕೊಳ್ಳದ ತನಿಯ ಕರಗನ ಬಗ್ಗೆ ಶಕ್ತಿ ಸಾಮರ್ಥ್ಯದ ಬಗ್ಗೆ ಹಲವಾರು ಕಥೆಗಳಿವೆ. ಹೀಗೊಮ್ಮೆ ಕೊರಗ ಸೇಂದ್ರಿ ತಯಾರಿಕೆಗೆ ಹಣ್ಣಗಳನ್ನು ತರಲು ಹೋದಾಗ ಅದೃಶ್ಯನಾದ ಎಂಬ ನಂಬಿಕೆ ಕರಾವಳಿ ಪ್ರದೇಶದಲ್ಲಿದೆ. ಇಲ್ಲಿಂದ ಕರಾವಳಿ ಮಂದಿಗೆ ಕೊರಗಜ್ಜ ದೈವವಾಗಿ ಕಾಣುತ್ತಿದ್ದಾನೆ.

ಕೊರಗಜ್ಜನ ಸಿನಿಮಾದಲ್ಲಿ ನಟಿಸೋದ್ಯಾರು?

ಸುಧೀರ್ ಅತ್ತಾವರ್ ನಿರ್ದೇಶಿಸುತ್ತಿರುವ ‘ಕರಿ ಹೈದ.. ಕರಿ ಅಜ್ಜ’ ಸಿನಿಮಾದಲ್ಲಿ ದಿಗ್ಗಜರು ನಟಿಸುತ್ತಿದ್ದಾರೆ. ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗದ ಹಿರಿಯ ನಟ ಕಬೀರ್ ಬೇಡಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ನಟಿ ಭವ್ಯಾ, ಶ್ರುತಿ ಕೂಡ ನಟಿಸುತ್ತಿದ್ದಾರೆ. ಭರತ್ ಸೂರ್ಯ ಅನ್ನೋ ಹೊಸ ಕಲಾವಿದ ಈ ಸಿನಿಮಾ ಮೂಲಕ ಪರಿಚಯವಾಗುತ್ತಿದ್ದಾನೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಈ ಸಿನಿಮಾ ಕೊರಗಜ್ಜನ ಕಥೆಯ ಸಿನಿಮಾ ಎನ್ನುತ್ತಿದೆ. ಇನ್ನು ಚಿತ್ರತಂಡ ಅಧಿಕೃತವಾಗಿ ಸಿನಿಮಾ ಬಗ್ಗೆ ಮಾಹಿತಿ ನೀಡಿಬೇಕಿದೆ.