ತೀವ್ರಗೊಂಡ ತನಿಖೆ, ಹಲವು ಸ್ಫೋಟಕ ಮಾಹಿತಿ ಬಹಿರಂಗ : ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್..!? ; ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್ – ಕಹಳೆ ನ್ಯೂಸ್
ಮಂಗಳೂರು: ನಗರದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣದ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ (Mangaluru) ಆತನ ಪೋಷಕರನ್ನು ಪೊಲೀಸರು ಕರೆತಂದಿದ್ದಾರೆ. ತನಿಖೆ ತೀವ್ರಗೊಂಡಿದ್ದು, ಹಲವು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Blast) ಮಾಡಿದವರು ಯಾರು, ಏಕೆ? ಮಂಗಳೂರು ಟಾರ್ಗೆಟ್‌ಗೆ ಕಾರಣವೇನು? ಪೊಲೀಸ್ (Police) ವಶದಲ್ಲಿ ಇರೋ ಶಂಕಿತರ ಬಾಯ್ಬಿಟ್ಟ ಸತ್ಯವೇನು? ಮಂಗಳೂರಿನಲ್ಲಿ ಭಯ ಹುಟ್ಟಿಸಬೇಕು ಅನ್ನೋ ಮುಖ್ಯ ಅಜೆಂಡಾವಾಗಿತ್ತಾ? ಅನ್ನೋ ಹಲವು ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ.
ನಿಷೇಧಿತ ಪಿಎಫ್‌ಐ ಸಂಘಟನೆ ಈ ಬ್ಲಾಸ್ಟ್ ರೂವಾರಿಗಳಾಗಿದ್ದು, ಬ್ಲಾಸ್ಟ್ ಮೂಲಕ ಜನರಿಗೆ ಭಯ ಹುಟ್ಟಿಸಬೇಕು ಅನ್ನೋ ಸಂಚು ರೋಪಿಸಿತ್ತು ಎನ್ನಲಾಗಿದೆ.
ನಮ್ಮ ಸಹವಾಸಕ್ಕೆ ಯಾರೂ ಬರಬಾರದು ಅನ್ನೋದು ಮುಖ್ಯ ಅಜೆಂಡಾವಾಗಿತ್ತು. ಪಿಎಫ್‌ಐ ಬ್ಯಾನ್ ಮಾಡಿದ ಕೋಪವೂ ಇತ್ತು ಶಂಕಿತರಿಗೆ ಇತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ಹುನ್ನಾರ ಇತ್ತೆಂದು ಹೇಳಲಾಗುತ್ತಿದೆ. ಇದಕ್ಕೆ ಮೂಲ ಕಾರಣಗಳನ್ನು ಪತ್ತಹೆಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.