Recent Posts

Monday, January 20, 2025
ಉಡುಪಿಶಿಕ್ಷಣಸುದ್ದಿ

ಉಡುಪಿ: ನವೆಂಬರ್ 25 ಮತ್ತು 26ರಂದು ಉಡುಪಿ ತಾಲೂಕಿನ 13ನೇ ಕನ್ನಡ ಸಾಹಿತ್ಯ ಸಮ್ಮೇಳನ- ಕಹಳೆ ನ್ಯೂಸ್

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು 13ನೇಯ ಕನ್ನಡ ಸಾಹಿತ್ಯ ಸಮ್ಮೇಳನವು ನವಂಬರ್ 25 ಶುಕ್ರವಾರ ಹಾಗೂ 26 ಶನಿವಾರದಂದು ಶ್ರೀ ಕ್ಷೇತ್ರ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

25.11.2022 ಶುಕ್ರವಾರ ಮಧ್ಯಾಹ್ನ ಗಂಟೆ 2:30 ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶಯದಲ್ಲಿ ಚಿಗುರು ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಧರ್ಮದರ್ಶಿಗಳಾದ ಡಾ. ನಿ. ಬಿ ವಿಜಯ ಬಲ್ಲಾಳ್ ಉದ್ಘಾಟಿಸಲಿರುವರು. ಗಂಟೆ 2.45ಕ್ಕೆ ಮಕ್ಕಳ ಕವಿ ಗೋಷ್ಠಿ, ನೃತ್ಯ, ಜನಪದ ಹಾಗೂ ಶಾಸ್ತ್ರೀಯ ಸಂಗೀತ, ಏಕಪಾತ್ರ ಅಭಿನಯ, ನಾಟಕ ನಡೆಯಲಿದೆ.

ನವಂಬರ್ 26 ಶನಿವಾರದಂದು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ನೇತೃತ್ವದಲ್ಲಿ ಬೆಳಗ್ಗೆ 8:30 ರಿಂದ ಧ್ವಜಾರೋಹಣ, ಅಂಬಲಪಾಡಿ ಹೈವೆ ಬಳಿಯಿಂದ ಸಮ್ಮೇಳನ ಅಧ್ಯಕ್ಷರಾದ ಪ್ರೊಫೆಸರ್ ಎನ್ .ಟಿ ಭಟ್ ಅವರನ್ನು ಮೆರವಣಿಗೆ ಮೂಲಕ ಭವಾನಿ ಮಂಟಪಕ್ಕೆ ಕರೆತರುವುದು, ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಮಳಿಗೆಗಳ ಉದ್ಘಾಟನೆ. ನಂತರ ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಪ್ರಸಿದ್ಧ ಚಿಂತಕಿ ವೀಣಾ ಬನ್ನಂಜೆ ಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ.

ಕವಿಗೋಷ್ಠಿ, ಕಥಾ ಗೋಷ್ಠಿ, ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ ವೈವಿಧ್ಯ, ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಗೌರವ ಅಭಿನಂದನೆ ನಡೆಯಲಿದ್ದು ಸಂಜೆ 4:00 ರಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಕೋಶಾಧಿಕಾರಿ ರಾಜೇಶ್ ಪಣಿಯಾಡಿ ನರಸಿಂಹ ಮೂರ್ತಿ ರಾವ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು 13ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ನವಂಬರ್ 25 ಶುಕ್ರವಾರ ಹಾಗೂ 26 ಶನಿವಾರದಂದು ಶ್ರೀ ಕ್ಷೇತ್ರ ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.