ಪುತ್ತೂರಿನಲ್ಲಿ 2 ದಿನಗಳ ಕಾಲ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಧಿವೇಶನ ಸಂಪನ್ನ- ಕಹಳೆ ನ್ಯೂಸ್
ಪುತ್ತೂರಿನಲ್ಲಿ 2 ದಿನಗಳ ಕಾಲ ನಡೆದ ದಕ್ಷಿಣ ಕನ್ನಡ ಜಿಲ್ಲಾ ಅಧಿವೇಶನವು ಉತ್ಸಾಹಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು.
“ಹಿಂದೂ ಸಂಸ್ಕೃತಿಯ ರಕ್ಷಣೆ ಹಿಂದೂಗಳ ಕರ್ತವ್ಯವಾಗಿದೆ”
-ನವೀನ್ ಬೆಂಜನಪದವು. ಉಪತಹಶೀಲ್ದಾರರು, ಬಂಟ್ವಾಳ
ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಹಿಂದೂ ಧರ್ಮದ ಹದಿನಾರು ಸಂಸ್ಕಾರಗಳು ಮನುಷ್ಯನ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯನ್ನು ಮಾಡುವುದರ ಜೊತೆಗೆ ಉತ್ತಮ ಸಮಾಜದ ನಿರ್ಮಾಣ ಮಾಡುತ್ತದೆ.
ಹಿಂದೂ ಧರ್ಮದಲ್ಲಿನ ಸಂಸ್ಕಾರಗಳು ಬೇರೆ ಯಾವುದೇ ವಿಶ್ವವಿದ್ಯಾನಿಯಲದಲ್ಲಿ ಸಿಗಲಾರವು.ಸನಾತನ ಸಂಸ್ಥೆಯು ಸಮಾಜದಲ್ಲಿ ಸಂಸ್ಕಾರ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.
ಛತ್ರಪತಿ ಶಿವಾಜಿ ಮಹಾರಾಜರು ಆದರ್ಶವನ್ನಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಗೆ ಕಠಿಬಧ್ಧರಾಗಿರಿ !
- ಶ್ರೀ.ಚಂದ್ರಮೊಗೇರ್, ಸಮನ್ವಯಕರು ಹಿಂದೂ ಜನಜಾಗೃತಿ ಸಮಿತಿ
ಹಿಂದೂ ರಾಷ್ಟ್ರ ಸ್ಥಾಪನೆಯ ವಿಚಾರ ಮಾಡುವಾಗ ಪಾಂಡವರ ವಿಚಾರ ಮಾಡಬೇಕು ಸಂಖ್ಯಾಬಲಕ್ಕಿಂತ ಆತ್ಮಬಲ ಮುಖ್ಯವಾದದ್ದು.ಪ್ರಸ್ತುತ ಕಾಲವು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿದೆ.ಮುಂಬರುವ ಆಪತ್ಕಾಲವನ್ನು ಎದುರಿಸಲು ಭಗವಂತನ ಭಕ್ತರಾಗಬೇಕಾಗಿದೆ.ಛತ್ರಪತಿ ಶಿವಾಜಿ ಮಹಾರಾಜರು ಭವಾನಿದೇವಿಯ ಆರ್ಶೀವಾದದಿಂದ ಹಿಂಧವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಅದೇ ರೀತಿ ನಾವು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಠಿಬಧ್ಧರಾಗಬೇಕು.ಎಂದು ಕರೆ ನೀಡಿದರು.
“ಹಿಂದೂ ಧರ್ಮದ ವಿಡಂಬಣೆಯನ್ನು ಕಾನೂನಾತ್ಮವಾಗಿ ವಿರೋಧಿಸಿ”
- ಶ್ರೀ.ದಿನೇಶ್ ಎಂ.ಪಿ, ಉದ್ಯಮಿಗಳು.
ಇತ್ತೀಚೆಗೆ ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳ ವಿಡಂಬನೆಯಾಗುತ್ತಿದೆ.ಇವುಗಳನ್ನು ಕಾನೂನಿನ ಮೂಲಕ ವಿರೋಧಿಸಬೇಕು. ಇದಕ್ಕಾಗಿ ಹಿಂದೂಗಳಲ್ಲಿ ಧರ್ಮರಕ್ಷಣೆಯ ಬಗ್ಗೆ ಕೃತಿಶೀಲರಾಗಲು ಧರ್ಮಶಿಕ್ಷಣ ನೀಡಬೇಕು.
ಸಭೆಯ ಸಮಾರೋಪ ಸಮಾರಂಭದ ಕೊನೆಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಕಲ್ಪ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ಪ್ರತಿಜ್ಞೆ ಮಾಡಲಾಯಿತು.