Sunday, January 19, 2025
ಕಾಸರಗೋಡುಕ್ರೈಮ್ಸುದ್ದಿ

ಹನಿಟ್ರ್ಯಾಪ್​ ಪ್ರಕರಣ ; ಕಿಲಾಡಿ ಲೇಡಿ ರಶೀದಾ ಮೋಹದ ಜಾಲಕ್ಕೆ ಬಿದ್ದ ವೃದ್ಧ ಕಳೆದುಕೊಂಡ ಹಣದ ಮೊತ್ತ ಕೇಳಿದ್ರೆ ಹುಬ್ಬೇರಿಸ್ತೀರಾ..! – ಕಹಳೆ ನ್ಯೂಸ್

ಮಲಪ್ಪುರಂ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್​​ ಮಾಡುವ ವ್ಲಾಗರ್​ ಮತ್ತು ಆಕೆಯ ಪತಿ, ಹನಿಟ್ರ್ಯಾಪ್​ ಪ್ರಕರಣದಡಿ ಕೇರಳದ ಕಲ್ಪಕಂಚೇರಿ ಪೊಲೀಸರಿಂದ ಬಂಧನವಾಗಿದ್ದಾರೆ. 68 ವರ್ಷದ ವ್ಯಕ್ತಿಯನ್ನು ಹನಿಟ್ರ್ಯಾಪ್​ ಬಲಗೆ ಬೀಳಿಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವ್ಲಾಗರ್​ ರಶೀದಾ (28) ಮತ್ತು ಆಕೆಯ ಪತಿ ನಿಶಾದ್​ ಬಂಧಿತ ಆರೋಪಿಗಳು. ಇಬ್ಬರು ಕೂಡ ತ್ರಿಸ್ಸೂರ್​ನ ಕುನ್ನಮಕುಲಮ್​ ಮೂಲದವರು. ವ್ಲಾಗರ್​ ಆಗಿರುವ ರಶೀದಾ ಕಣ್ಣುಕುಕ್ಕುವಂತಹ ಉಡುಗೆ ತೊಟ್ಟು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಡುತ್ತಿದ್ದಳು. ಈಕೆಯ ವಿಡಿಯೋ ನೋಡಿಯೇ ಆಕೆಯ ಹನಿಟ್ರ್ಯಾಪ್​ ಬಲೆಗೆ 68 ವರ್ಷದ ವೃದ್ಧ ಬಿದ್ದಿದ್ದ. ಆತನಿಗೆ 23 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ದಂಪತಿ ವಿರುದ್ಧದ ಪ್ರಕರಣ ದಾಖಲಾಗಿತ್ತು.

ಕಿಲಾಡಿ ಲೇಡಿ ರಶೀದಾ ಕಲ್ಪಕಂಚೇರಿಯಲ್ಲಿ ಅತ್ಯಂತ ಪ್ರಭಾವಿ ಸ್ಥಳೀಯರೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದಳು. ಪ್ರೀತಿಯ ನೆಪ ಮಾಡಿ ಒಮ್ಮೊಮ್ಮೆ ಮನೆಗೆ ಕರೆಸಿ ಹತ್ತಿರವಾಗುತ್ತಿದ್ದಳು. ಆಕೆಯ ವಿಡಿಯೋ ನೋಡಿದವರು ಸುಲಭವಾಗಿ ಆಕೆಯ ಬಲೆಗೆ ಬೀಳುತ್ತಿದ್ದರು. ಹನಿಟ್ರ್ಯಾಪ್​ ಮಾಡಲು ಆಕೆಯ ಪತಿ ನಿಶಾದ್ ಎಲ್ಲ ವ್ಯವಸ್ಥೆಯನ್ನು ಮಾಡುತ್ತಿದ್ದ. 68 ವರ್ಷದ ಸಂತ್ರಸ್ತನನ್ನು ಪರಿಚಯಿಸಿಕೊಂಡಿದ್ದ ರಶೀದಾ, ಆಗಾಗ ತನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಒಂದು ದಿನ ಪತಿಗೆ ಬಿಸಿನೆಸ್​ ಮಾಡಲು ಹಣ ಬೇಕು ಎಂದು ಕೇಳಿದ್ದಳು.

ರಶೀದಾ ಮಾತು ನಂಬಿ ಸಂತ್ರಸ್ತ ಆಕೆಗೆ ಹಣ ನೀಡಿದ್ದನು. ಕೆಲವು ದಿನಗಳ ಬಳಿಕ ಹಣ ವಾಪಸ್​ ಕೇಳಿದಾಗ ತಮ್ಮಿಬ್ಬರ ನಡುವಿನ ಸಂಬಂಧವನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಳು. ಯಾವಾಗ ಸಂತ್ರಸ್ತನ ಮನೆಯವರಿಗೆ ಹನಿಟ್ರ್ಯಾಪ್​ನಿಂದ ಹಣ ಕಳೆದುಕೊಂಡಿರುವ ವಿಚಾರ ಗೊತ್ತಾಯಿತೋ ಅವರು ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ರಶೀದಾ ಮತ್ತು ಆಕೆಯ ಗಂಡನನ್ನು ಕಲ್ಪಕಂಚೇರಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)