Saturday, January 25, 2025
ಸುದ್ದಿ

ಅಂಬಿಕಾ ಮಹಾವಿದ್ಯಾಲಯದಿಂದ ಐಕ್ಯು ಪರೀಕ್ಷೆಗೆ ಉಚಿತ ಅವಕಾಶ ಹಾಗೂ ಸ್ಪರ್ಧೆ- ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಮಹಾವಿದ್ಯಾಲಯದ ವತಿಯಿಂದ ಹತ್ತನೆಯ ತರಗತಿ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ Psy-Fi ಅನ್ನುವ ವಿಶೇಷ ಬುದ್ಧಿಮತ್ತೆಯ ಮಟ್ಟ ಗುರುತಿಸುವ ಕಾರ್ಯಕ್ರಮವನ್ನು ನವೆಂಬರ್ 26 ರಂದು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಆತನ ಐಕ್ಯು ಮಟ್ಟವನ್ನು ಪರೀಕ್ಷಿಸಿಕೊಳ್ಳುವ ಮತ್ತು ತನ್ನ ಐಕ್ಯುಗೆ ನೂರರಲ್ಲಿ ಎಷ್ಟು ಅಂಕ ದೊರಕುತ್ತದೆ ಎಂಬುದನ್ನು ಪರಿಶೀಲಿಸುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮನುಷ್ಯನ ಎಲ್ಲಾ ಚಟುವಟಿಕೆ ಹಾಗೂ ಕಾರ್ಯಗಳ ಉತ್ಕೃಷ್ಟತೆ ಆತನ ಐಕ್ಯು ಮಟ್ಟವನ್ನು ಆಧರಿಸಿರುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ನಾನಾ ಬಗೆಯ ಶೈಕ್ಷಣಿಕ ಪರೀಕ್ಷೆಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವುದರಿಂದ ತಮ್ಮ ಐಕ್ಯು ಎಷ್ಟಿದೆ, ಅದನ್ನು ಮತ್ತಷ್ಟು ಪರಿಣಾಮಕಾರಿ ಮಾಡುವುದು ಹೇಗೆ ಎಂಬುದರ ಅಗತ್ಯವಿರುತ್ತದೆ. ಈ ನೆಲೆಯಲ್ಲಿ ಈ ಕಾಐಕ್ರಮವನ್ನು ಆಯೋಜಿಸಲಾಗುತ್ತಿದೆ.

ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯ ಐಕ್ಯು ಮಟ್ಟವನ್ನು ನುರಿತ ಮನಃಶಾಸ್ತ್ರಜ್ಞರು ಗುರುತಿಸುತ್ತಾರೆ. ತದನಂತರ ಆತನ ಐಕ್ಯು ಅಂಕಗಳನ್ನು ಖಾಸಗಿಯಾಗಿ ಆತನಿಗೆ ಒದಗಿಸಿಕೊಡಲಾಗುತ್ತದೆ. ಜತೆಗೆ ವಿದ್ಯಾರ್ಥಿಗಳು ತಮ್ಮ ಐಕ್ಯುವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಗೆ ರೂಪಿಸಿಕೊಳ್ಳಬಹುದೆಂಬ ಮಾಹಿತಿಯನ್ನು ಮನಃಶಾಸ್ತ್ರಜ್ಞರು ಒದಗಿಸಿಕೊಡಲಿದ್ದಾರೆ. ಅದಕ್ಕೆ ಅನುಸರಿಸಬೇಕಾದ ವಿಧಾನಗಳೇನು ಎಂಬುದರ ಬಗೆಗೆ ಮಾಹಿತಿ ನೀಡಲಿದ್ದಾರೆ.

ಎಗ್ಸಾಂ ಫೋಬಿಯಾ:
ಎಗ್ಸಾಂ ಫೋಬಿಯಾ ಎಂಬುದು ಅನೇಕ ಮಕ್ಕಳನ್ನು ಕಾಡುತ್ತಿರುವ ಸಮಸ್ಯೆ. ಚೆನ್ನಾಗಿ ಓದಿಕೊಂಡಿದ್ದರೂ ಪರೀಕ್ಷೆಯ ಸಂದರ್ಭದಲ್ಲಿ ಮರೆತುಹೋಗುವುದು, ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸಿಕ್ಕಾಗ ಮೈಬಿಸಿಯಾಗುವುದು, ಬೆವರುವುದು ಇತ್ಯಾದಿಗಳು ಅನೇಕ ವಿದ್ಯಾರ್ಥಿಗಳಿಗೆ ಸವಾಲಾಗಿ ಪರಿಣಮಿಸುತ್ತದೆ. ಜತೆಗೆ ಪರೀಕ್ಷಾ ದಿನಗಳಲ್ಲಿ ನಿದ್ರಾಹೀನತೆ, ಒತ್ತಡಗಳು ಕೂಡ ಕಂಡುಬರುವುದಿದೆ. ಈ ನೆಲೆಯಲ್ಲಿಯೂ ವಿದ್ಯಾಥಿಗಳಿಗೆ ಸಹಾಯವಾಗುವ ಮಾರ್ಗದರ್ಶನವನ್ನು ಈ ಕಾರ್ಯಕ್ರಮದಲ್ಲಿ ಆಯೋಜಿಸಲಾಗುತ್ತಿದೆ.

ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯ ಐಕ್ಯು ಮಟ್ಟವನ್ನು ನುರಿತ ಮನಃಶಾಸ್ತ್ರಜ್ಞರು ಗುರುತಿಸುತ್ತಾರೆ. ತದನಂತರ ಆತನ ಐಕ್ಯು ಅಂಕಗಳನ್ನು ಖಾಸಗಿಯಾಗಿ ಆತನಿಗೆ ಒದಗಿಸಿಕೊಡಲಾಗುತ್ತದೆ. ಜತೆಗೆ ವಿದ್ಯಾರ್ಥಿಗಳು ತಮ್ಮ ಐಕ್ಯುವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಗೆ ರೂಪಿಸಿಕೊಳ್ಳಬಹುದೆಂಬ ಮಾಹಿತಿಯನ್ನು ಮನಃಶಾಸ್ತ್ರಜ್ಞರು ಒದಗಿಸಿಕೊಡಲಿದ್ದಾರೆ. ಅದಕ್ಕೆ ಅನುಸರಿಸಬೇಕಾದ ವಿಧಾನಗಳೇನು ಎಂಬುದರ ಬಗೆಗೆ ಮಾಹಿತಿ ನೀಡಲಿದ್ದಾರೆ.

ಸ್ಪರ್ಧಾ ಕಾರ್ಯಕ್ರಮ:

ಐಕ್ಯು ಪರೀಕ್ಷೆಯನ್ನು ಕೇವಲ ಒಂದು ಕಾರ್ಯಕ್ರಮವಾಗಿ ಅಷ್ಟೇ ಆಯೋಜಿಸುತ್ತಿರುವುದಲ್ಲ. ಬದಲಾಗಿ ಸ್ಪರ್ಧೆಯ ರೂಪದಲ್ಲಿ ಅದನ್ನು ಪ್ರಸ್ತುತಪಡಿಸಲಾಗುತ್ತಿದೆ. ನವೆಂಬರ್ 26ರಂದು ಅತ್ಯಧಿಕ ಐಕ್ಯು ಹೊಂದಿರುವ ತಲಾ 25 ಮಂದಿ ವಿದ್ಯಾರ್ಥಿಗಳನ್ನು ಹತ್ತನೆಯ ತರಗತಿ ಹಾಗೂ ಪಿಯು ತರಗತಿಗಳಿಂದ ಗುರುತಿಸಲಾಗುತ್ತದೆ ಹಾಗೂ 25 ಮಂದಿಗಳಲ್ಲಿ ಮೊದಲ ಹತ್ತು ಮಂದಿಗೆ ಡಿಸೆಂಬರ್ 3ರಂದು ಮುಂದಿನ ಸುತ್ತಿನ ಸ್ಪರ್ಧೆ ನಡೆಸಿ ಅದರಲ್ಲಿ ಅತ್ಯಧಿಕ ಅಂಕ ದಾಖಲಿಸುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ.

ಪುತ್ತೂರಿನಲ್ಲಿ ಮೊದಲ ಬಾರಿಗೆ ಐಕ್ಯು ಪರೀಕ್ಷಾ ಕಾರ್ಯಕ್ರಮ:

ಪುತ್ತೂರು ತಾಲೂಕಿನಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಐಕ್ಯು ಪರೀಕ್ಷಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ತಾವಾಗಿಯೇ ಬಂದು ತಮ್ಮ ಐಕ್ಯು ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು. ಶಾಲಾ, ಕಾಲೇಜುಗಳ ಗುರುತಿ ಪತ್ರ ಹೊಂದಿರುವ ಯಾವುದೇ ವಿದ್ಯಾರ್ಥಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಇರುತ್ತದೆ. ಈ ಕಾರ್ಯಕ್ರಮದಲ್ಲಿ ಹೆತ್ತವರು, ಶಿಕ್ಷಕರು ಕೂಡ ತಮ್ಮ ಮಕ್ಕಳೊಂದಿಗೆ ಭಾಗವಹಿಸಬಹುದು.

ಆಪ್ತಸಮಾಲೋಚನೆ:
ತುಂಬಾ ಓದಿದರೂ ಅರ್ಥವಾಗುವುದಿಲ್ಲ, ಮನಸ್ಸಿನಲ್ಲಿ ಅನೇಕ ವಿಧದ ಗೊಂದಲಗಳು, ತುಮುಲಗಳು ಮೂಡಿ ಓದಿಗೆ ಅಡ್ಡಿಯಾಗುತ್ತಿದೆ, ಖಿನ್ನತೆ ಆವರಿಸಿಕೊಳ್ಳುತ್ತದೆ. ಮೊಬೈಲ್ ಚಟವಾಗಿ ಕಾಡುತ್ತಿದೆ ಇತ್ಯಾದಿ ಸಂಗತಿಗಳಿದ್ದಲ್ಲಿ ಮನಃಶಾಸ್ತ್ರಜ್ಞರೊಂದಿಗೆ ಆಪ್ತ ಸಮಾಲೋಚನೆಗೆ ಅವಕಾಶವಿದೆ. ಖಾಸಗಿಯಾಗಿ ಮನಃಶಾಸ್ತ್ರಜ್ಞರನ್ನು ಭೇಟಿಯಾಗಿ ತಮ್ಮ ಮನಸ್ಸನ್ನು ತಾವೇ ಗೆಲ್ಲುವ ಕಲೆಯನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಹೆತ್ತವರೂ ತಮ್ಮ ಮಕ್ಕಳ ಬಗೆಗೆ ಮನಃಶಾಸ್ತ್ರಜ್ಞರೊಂದಿಗೆ ಸಮಾಲೋಚಿಸುವ ಅವಕಾಶ ದೊರಕಲಿದೆ.

ಉಚಿತ ಕಾರ್ಯಕ್ರಮ, ನುರಿತ ಮನಃಶಾಸ್ತ್ರಜ್ಞರು:
ಈ ಮೇಲಿನ ಎಲ್ಲಾ ವಿಚಾರಗಳು ಉಚಿತವಾಗಿ ವಿದ್ಯಾರ್ಥಿಗಳಿಗೆ ದೊರಕಲಿವೆ. ಸ್ಪರ್ಧೆಗಾಗಲೀ, ಆಪ್ತ ಸಮಾಲೋಚನೆಗಾಗಲೀ ಅಥವ ಇನ್ನಾವುದೇ ಕಾರ್ಯಕ್ಕಾಗಲೀ ವಿದ್ಯಾರ್ಥಿಗಳು ಪ್ರವೇಶಶುಲ್ಕ ಅಥವ ಇನ್ನಾವುದೇ ಮೊತ್ತವನ್ನು ನೀಡಬೇಕಿಲ್ಲ. ಸಂಪೂರ್ಣವಾಗಿ ಉಚಿತವಾಗಿಯೇ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಅಂಬಿಕಾ ಮಹಾವಿದ್ಯಾಲಯದ ಮನಃಶಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಮನಃಶಾಸ್ತ್ರಜ್ಞ ಚಂದ್ರಕಾಂತ ಗೋರೆ. ಮನಸ್ಸಿನ ಭಾವತೀವ್ರತೆಯ ನೆಲೆಯಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಲೇಖಕ ತೀರ್ಥಾರಾಮ ವಳಲಂಬೆ ವಿದ್ಯಾರ್ಥಿಗಳ ಐಕ್ಯು ಪರೀಕ್ಷಾ ಕಾರ್ಯ ಹಾಗೂ ಮಾರ್ಗದರ್ಶನದ ನೆಲೆಯಲ್ಲಿ ಸಹಕರಿಸಲಿದ್ದಾರೆ. ಡಿಸೆಂಬರ್ 3, ಶನಿವಾರದಂದು ಅಪರಾಹ್ನ 2 ಗಂಟೆಯಿಂದ ಈ ಕಾರ್ಯಕ್ರಮ ನಡೆಯಲಿದೆ.