Sunday, January 19, 2025
ಕಾಸರಗೋಡುಕ್ರೈಮ್ಸುದ್ದಿ

ನೆಪಕ್ಕಷ್ಟೇ ಮಾಡೆಲಿಂಗ್​! ಡ್ರಗ್ಸ್​, ಡಿಜೆ ಪಾರ್ಟಿಗಳು ಮತ್ತು ಫ್ಯಾಶನ್​ ಶೋ ನೆರಳಿನಲ್ಲಿ ಮಾಂಸ ದಂಧೆ ; ಸ್ಫೋಟಕ ಸಂಗತಿ ಬಟಾಬಯಲು – ಕಹಳೆ ನ್ಯೂಸ್

ಕೊಚ್ಚಿ: ಯುವ ಮಾಡೆಲ್​ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಕೂಡಲೇ ಕೇರಳದಲ್ಲಿ ನಡೆಯುತ್ತಿರುವ ಕರಾಳ ದಂಧೆಯಿಂದ ಬಯಲಾಗಿದೆ. ಮಾಡೆಲಿಂಗ್​ ನೆಪದಲ್ಲಿ ಯುವತಿಯರ ಕಳ್ಳಸಾಗಣೆ ಮತ್ತು ಮಾಂಸ ದಂಧೆ ನಡೆಯುತ್ತಿರುವುದ ಬಟಾಬಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಫೋಟಕ ಸಂಗತಿಗಳನ್ನು ಕೇರಳ ಪೊಲೀಸರು ಬಿಚ್ಚಿಟ್ಟಿದ್ದು, ಡ್ರಗ್ಸ್​, ಡಿಜೆ ಪಾರ್ಟಿಗಳು ಮತ್ತು ಫ್ಯಾಶನ್​ ಶೋ ನೆರಳಿನಲ್ಲಿ ಮಾಂಸ ದಂಧೆ ವೇಗವಾಗಿ ಬೆಳೆಯುತ್ತಿದೆ. ಮಾಡೆಲ್​ಗಳ ಹೆಸರಿನಲ್ಲಿ ಯುವತಿಯರನ್ನು ಕಳ್ಳ ಸಾಗಾಣೆ ಮಾಡಲಾಗುತ್ತಿದೆ. ಕೊಚ್ಚಿಯಲ್ಲಿ 19 ವರ್ಷದ ಯುವ ಮಾಡೆಲ್​ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುವಾಗ ಇಂತಹ ಖತರ್ನಾಕ್​ ಗ್ಯಾಂಗ್​ಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

ಗ್ಯಾಂಗ್​ರೇಪ್​ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳಿಗೆ ಇಂತಹ ಗ್ಯಾಂಗ್​ಗಳೊಂದಿಗೆ ಸಂಪರ್ಕ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಬಂಧಿತರ ಮೊಬೈಲ್​ನಲ್ಲಿ ಮಹತ್ವದ ಮಾಹಿತಿಗಳು ಕೂಡ ಪೊಲೀಸರಿಗೆ ಲಭ್ಯವಾಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಬಿಟ್ಟು ಕೊಟ್ಟಿಲ್ಲ.

ಸೆಕ್ಸ್ ರಾಕೆಟ್ ಗ್ಯಾಂಗ್‌ಗಳು ಮುಖ್ಯವಾಗಿ ಇತರ ರಾಜ್ಯಗಳ ಹುಡುಗಿಯರನ್ನು ಸಾಗಿಸುತ್ತಿವೆ. ಅಲ್ಲದೇ ಹೆಚ್ಚಿನ ಮಹಿಳೆಯರಿಗೆ ಆಮಿಷವೊಡ್ಡಿ ವಂಚಿಸುತ್ತಿದ್ದಾರೆ. ಮಾಡೆಲಿಂಗ್‌ನಲ್ಲಿ ದೊಡ್ಡ ದೊಡ್ಡ ಅವಕಾಶಗಳು ಇವೆ ಎಂಬ ಭರವಸೆ ನೀಡಲಾಗುತ್ತಿದ್ದು, ಅದಕ್ಕೆ ಆಕರ್ಷಿತರಾಗಿ ಬರುವ ಹುಡುಗಿಯರನ್ನು ಡ್ರಗ್ಸ್, ಡಿಜೆ ಪಾರ್ಟಿಗಳಿಗೆ ಕರೆದೊಯ್ದು ನಂತರ ಅವರನ್ನು ಬೇಕಾದವರಿಗೆ ಒಪ್ಪಿಸುತ್ತಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗಳಲ್ಲಿ ಒಬ್ಬ, ಡಿಂಪಲ್ ಲಾಂಬಾ ಅಲಿಯಾಸ್ ಡಾಲಿಯನ್ನು ಯುವತಿಯರಿಗಾಗಿ ಕರೆಸಿಕೊಂಡಿದ್ದ ಎಂಬ ಮಾಹಿತಿ ಪೊಲೀಸರಿಗೆ ಈ ಹಿಂದೆಯೇ ಸಿಕ್ಕಿತ್ತು.

ಈ ಡಿಂಪಲ್ ಲಾಂಬಾ ಕೊಚ್ಚಿಯ ವಿವಿಧೆಡೆ ಡ್ರಗ್ ಪಾರ್ಟಿ ನಡೆಸುತ್ತಿದ್ದಳು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈಕೆ ಅನೇಕ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದಳು. ಕೆಲವು ಫ್ಯಾಶನ್ ಶೋಗಳಲ್ಲಿ ಡಿಂಪಲ್ ಚಿತ್ರವನ್ನೂ ಪ್ರಚಾರ ಮಾಡಲಾಗಿದೆ. 19 ವರ್ಷದ ಯುವತಿ ಮೇಲೆ ನಡೆದ ಗ್ಯಾಂಗ್​ರೇಪ್​ ಪ್ರಕರಣದ ಆರೋಪಿಗಳಾದ ವಿವೇಕ್​ (26), ನಿತಿನ್​ (25) ಮತ್ತು ಸುಧೀಪ್​ (27) ಎಂಬುವರಿಗೆ ಡಿಂಪಲ್​ ಲಾಂಬಾ ಮೊದಲೇ ಪರಿಚಯವಿತ್ತು. ವಿವೇಕ್ ಮತ್ತು ಡಿಂಪಲ್ ಒಟ್ಟಿಗೆ ಪ್ರಯಾಣಿಸಿದ್ದಕ್ಕೆ ಸಾಕ್ಷಿಯೂ ಸಿಕ್ಕಿದೆ. ಡಿಂಪಲ್ ತನ್ನನ್ನು ಬಲವಂತವಾಗಿ ಪಾರ್ಟಿಗೆ ಕರೆದೊಯ್ದು ಪಾರ್ಟಿ ವೇಳೆ ಬಿಯರ್‌ನಲ್ಲಿ ಪೌಡರ್ ಬೆರೆಸಿದ್ದಳು ಎಂದು ಸಂತ್ರಸ್ತ ಯುವ ಮಾಡೆಲ್​ ಹೇಳಿಕೆ ನೀಡಿದ್ದಾಳೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮಾತ್ರ ಸ್ಪಷ್ಟತೆ ಸಿಗಲಿದೆ. ನಾಲ್ವರು ಆರೋಪಿಗಳನ್ನು ಕನಿಷ್ಠ ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿವರವಾಗಿ ವಿಚಾರಣೆ ನಡೆಸುವುದು ತನಿಖಾ ತಂಡದ ನಿರ್ಧಾರವಾಗಿದೆ. (ಏಜೆನ್ಸೀಸ್​)