Recent Posts

Monday, January 20, 2025
ಸುದ್ದಿ

ನಾಳೆ ( ನ.24 ) ತೆಂಕುತ್ತಿಟ್ಟಿನ ಗಜ ಮೇಳದ ದಿಗ್ವಿಜಯ ; ಹನುಮಗಿರಿಯಲ್ಲಿ ಪ್ರಥಮ ಸೇವೆ – ಜ್ವಾಲಾ ಜಾಹ್ನವಿ, ಅಶ್ವಮೇಧ : ಯಕ್ಷಾಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದೆ ಈ ವರ್ಷದ ನೂತನ ಕಥಾ ಪ್ರಸಂಗ ” ಭಾರತ ಜನನಿ ” – ಕಹಳೆ ನ್ಯೂಸ್

ಪುತ್ತೂರು / ಮಂಗಳೂರು : ತೆಂಕುತ್ತಿಟ್ಟು ಯಕ್ಷಗಾನ ರಂಗದ ಗಜ ಮೇಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿಶ್ರೀ ಹನುಮಗಿರಿ ಮೇಳ ” ದ ಪ್ರಸಕ್ತ ವರ್ಷದ ತಿರುಗಾಟವು ನಾಳೆ ನವೆಂಬರ್ 24 ರಂದು ಸಂಜೆ 5.30 ರಿಂದ ಶ್ರೀಕ್ಷೇತ್ರದಿಂದ ಸೇವೆಯಾಟದ ಮೂಲಕ ಆರಂಭವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಎಡನೀರು ಮಠದ ಶ್ರೀ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಚನ ಮತ್ತು ಉಪಸ್ಥಿತಿಯಲ್ಲಿ ಮಂಗಳೂರಿನ ಇಸ್ಕಾನ್ ಶ್ರೀಕೃಷ್ಣ ಬಲರಾಮ ಮಂದಿರದ ಶ್ರೀ ಸನಂದನ ದಾಸ ಪ್ರಭು ಜೀಯವರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಥಮ ಸೇವೆಯಾಟವಾಗಿ ಜ್ವಾಲಾ ಜಾಹ್ನವಿ, ಅಶ್ವಮೇಧ ಎಂಬ ಕಥಾಭಾಗವನ್ನು ಕಲಾವಿದರು ಆಡಿತೋರಿಸಲಿದ್ದಾರೆ.

ಯಕ್ಷಾಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದೆ ಈ ವರ್ಷದ ನೂತನ ಕಥಾ ಪ್ರಸಂಗ ” ಭಾರತ ಜನನಿ ” :

ಹನುಮಗಿರಿ ಮೇಳವು ಶುಕ್ರನಂದನೆ, ಆತ್ಮಾಂಜಲಿ ಹೀಗೆ ಸೂಪರ್ ಹಿಟ್ ಪ್ರದರ್ಶನದ ಹಿನ್ನೆಲೆ ಹೊಂದಿರುವುದರಿಂದ ಈ ಭಾರಿ ಸಹಜವಾಗಿಯೇ ತನ್ನ ಆಕರ್ಷಕವಾದ ಪೋಸ್ಟರ್ ಮೂಲಕವೇ ಅಖಂಡ ಭಾರತದ ಸಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಯಕ್ಷರಸಿಕರ ಮನಸೂರೆಗೊಳಿಸಿದ್ದು, ಖ್ಯಾತ ಮಿಮರ್ಷಕರೂಗಳೂ ಈ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿರುವುದು ಗಮನಾರ್ಹ ಸಂಗತಿ. ಇನ್ನೂ ಒಂದಷ್ಟು ಯಕ್ಷಾಭಿಮಾನಿ ಯುವಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೆಚ್ಚುಗೆ ದ್ಯೋತಕವಾಗಿ ಉತ್ತಮ ಸಾಹಿತ್ಯ ಸ್ಪಷ್ಟತೆಯುಳ್ಳ ಲೇಖನಗಳನ್ನು, ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆ ಕಾರಣದಿಂದ ಈ ಭಾರಿ ನಿರೀಕ್ಷೆ ಹೆಚ್ಚಿದೆ‌. ಭಾರತ ಜನನಿ ಪ್ರಸಂಗದ ಮೊದಲ ಪ್ರದರ್ಶನ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ನವೆಂಬರ್ 26 ರಂದು ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ.

ಸಂಪದ್ಭರಿತ ಕಲಾವಿದರು..!

ಹೌದು, ಗಜ ಮೇಳ ಎಂದ ಖ್ಯಾತಿ ಬರುಲು ಇದುವೇ ಪ್ರಮುಖ ಕಾರಣ. ತೆಂಕು ಯಕ್ಷಗಾನ ರಂಗದ ಎ ಗ್ರೇಡ್ ಕಲಾವಿದರುಗಳ ದೊಡ್ಡಗುಂಪು ಹನುಮಗಿರಿ ಮೇಳದ ದೊಡ್ಡ ಶಕ್ತಿಯಾಗಿದೆ.

ಭಾಗವತರು : ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ
ಚೆಂಡೆ / ಮದ್ದಳೆ : ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಶ್ರೀಧರ ವಿಟ್ಲ, ಲವ ಕುಮಾರ್ ಐಲ
ಚಕ್ರತಾಳ : ನಿಶ್ವತ್ ಜೋಗಿ, ಜೋಡುಕಲ್ಲು
ವಿದೂಷಕರು : ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮ ಕುಮಾರ್ ಕಟೀಲು
ಸ್ತ್ರೀ ಪಾತ್ರ : ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ, ಪೃಥ್ವಿಶ್ ಪರ್ಕಳ, ಸತೀಶ್ ಎಡಮೊಗೆ
ಪ್ರಧಾನ ಭೂಮಿಕೆಯಲ್ಲಿ : ವಾಸುದೇವ ರಂಗ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಜಗದಾಭಿರಾಮ ಪಡುಬಿದ್ರೆ, ಸದಾಶಿವ ಕುಲಾಲ್ ವೇಣೂರು, ದಿವಾಕರ್ ರೈ ಸಂಪಾಜೆ, ಪೆರ್ಲ ಜಗನಾಥ ಶೆಟ್ಟಿ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ರವಿಭಟ್ ನೆಲ್ಯಾಡಿ, ಪ್ರಸಾದ್ ಸವಣೂರು, ಶಿವರಾಜ್ ಬಜಕೂಡ್ಲು, ಮುಖೇಶ್ ದೇವಧಾರ್ ನಿಡ್ಲೆ, ವಿಶ್ವನಾಥ ಎಡನೀರು, ಕೀರ್ತನ್ ಕಾರ್ಕಳ, ಅಜಿತ್ ಪುತ್ತಿಗೆ, ರೂಪೇಶ್ ಆಚಾರ್ಯ, ದತ್ತೇಶ್ ಮಾವಿನಕಟ್ಟೆ, ಅಮೃತ್ ಪುತ್ತಿಗೆ
ಅತಿಥಿ ಕಲಾವಿದರು : ಉಬರಡ್ಕ ಉಮೇಶ್ ಶೆಟ್ಟಿ