Recent Posts

Monday, January 20, 2025
ಬೆಂಗಳೂರುಸಿನಿಮಾಸುದ್ದಿ

‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಎಂಗೇಜ್ ಮೆಂಟ್: ಶಂಕರ್ ಬಿದರಿ ಸಾಕ್ಷಿ – ಕಹಳೆ ನ್ಯೂಸ್

ಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ, ನಿರೂಪಕಿ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇವರ ಎಂಗೇಜ್ ಮೆಂಟ್ ಗೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಸಾಕ್ಷಿಯಾಗಿದ್ದು, ಹರಿದಾಡುತ್ತಿರುವ ಫೋಟೋದಲ್ಲಿ ಶಂಕರ್ ಬಿದರಿ ಸೇರಿದಂತೆ ಹಲವರು ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿಗ್ ಬಾಸ್ ಮನೆಯಿಂದ ವೈಷ್ಣವಿ ಹೊರ ಬರುತ್ತಿದ್ದಂತೆಯೇ ಅವರ ಮದುವೆ ವಿಚಾರ ಕೂಡ ಮುನ್ನೆಲೆಗೆ ಬಂದಿತ್ತು. ಸ್ವತಃ ಅವರು ಕೂಡ ಆಫರ್ಸ್ ಬರುತ್ತಿವೆ ಎಂದು ಹೇಳಿಕೊಂಡಿದ್ದರು. ಇದೀಗ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹುಡುಗ ಯಾರು? ಯಾವ ಕ್ಷೇತ್ರದವರು? ನಿಶ್ಚಿತಾರ್ಥ ನಡೆದದ್ದು ಎಲ್ಲಿ ಎನ್ನುವ ವಿಚಾರ ಮಾತ್ರ ಗುಟ್ಟಾಗಿದೆ. 

ಇತ್ತೀಚೆಗಷ್ಟೇ ವೈಷ್ಣವಿ ಹೊಸ ಮನೆಯನ್ನು ಖರೀದಿಸಿ, ಗೃಹ ಪ್ರವೇಶ ಕೂಡ ಮಾಡಿದ್ದರು. ಬಿಗ್ ಬಾಸ್ ಮನೆಯ ಸದಸ್ಯರು ಸೇರಿದಂತೆ ಅವರ ಆಪ್ತರನ್ನು ಹೊಸ ಮನೆಗೆ ಆಹ್ವಾನಿಸಿದ್ದರು. ಹೊಸ ಮನೆ ಖರೀದಿಸಿದ ಬೆನ್ನಲ್ಲೇ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ಈವರೆಗೂ ಈ ಕುರಿತು ವೈಷ್ಣವಿ ಎಲ್ಲಿಯೂ ಬರೆದುಕೊಂಡಿಲ್ಲ. ಆದರೆ, ಫೋಟೋ ಮಾತ್ರ ಜಾಲತಾಣದಲ್ಲಿ ವೈರಲ್ ಆಗಿದೆ.