Friday, November 22, 2024
ಸುದ್ದಿ

ಕುಕ್ಕರ್ ಬಾಂಬ್ ಸ್ಪೋಟಗೊಂಡ ಸ್ಥಳಕ್ಕೆ ಗೃಹ ಸಚಿವರ ಭೇಟಿ, ಪರಿಶೀಲನೆ : ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಟಿ –ಕಹಳೆ ನ್ಯೂಸ್

ಮಂಗಳೂರು ನಗರದ ನಾಗೋರಿಯಲ್ಲಿ ಇತ್ತೀಚೆಗೆ ಆಟೋದಲ್ಲಿ ಕುಕ್ಕರ್‌ಬಾಂಬ್ ಸ್ಪೋಟಗೊಂಡ ಸ್ಥಳಕ್ಕೆ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ಡಿಜಿಪಿ ಪ್ರವೀಣ್ ಸೂದ್, ಐಜಿಪಿ ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್, ಡಿಸಿಪಿ ಅನ್ಶು ಕುಮಾರ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು. ಬಳಿಕ ಮಂಗಳೂರು ಕಮಿಷನರ್ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಟಿ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಂಬ್ ಬ್ಲಾಸ್ಟ್ ಕೇಸ್ ಸಂಬAಧ ಡಿಜಿಪಿ ಜೊತೆ ಮಂಗಳೂರು ವಿಸಿಟ್ ಮಾಡಿದ್ದೇನೆ. ಅಲ್ಲದೇ ಆಸ್ಪತ್ರೆಗೆ ತೆರಳಿ ಆಟೋ ಚಾಲಕನ ಜೊತೆ ಮಾತನಾಡಿದ್ದೇನೆ. ಶಾರೀಕ್ ತೀರ್ಥಹಳ್ಳಿಯವನಾಗಿದ್ದು, ಬೆಂಗಳೂರು, ಕನ್ಯಾಕುಮಾರಿ ಸೇರಿ ಹಲವಡೆ ಸುತ್ತಾಡಿದ್ದಾನೆ. ಈ ಸಂಬAಧ ಪೊಲೀಸರು ಅನೇಕ ಸಾಕ್ಷ್ಯ ಕಲೆ ಹಾಕಿದ್ದಾರೆ. ಫಾರೆನ್ಸಿಕ್ ತಜ್ಞರು ಕೂಡ ಅನೇಕ ದಾಖಲೆ ಕಲೆ ಹಾಕಿದ್ದಾರೆ. ಇವನ ಹಿನ್ನೆಲೆ, ಫಂಡಿAಗ್ ಹಾಗೂ ಯಾರು ಬೆನ್ನ ಹಿಂದೆ ಇದ್ದಾರೆ ಅಂತ ತನಿಖೆ ಮಾಡಲಾಗ್ತಿದೆ. ಇವನಿಗೆ ಶಿಕ್ಷೆ ಆಗೋ ನಿಟ್ಟಿನಲ್ಲಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಲಾಗಿದೆ. ಸುಮಾರು ಎಂಟು ಜನ ತಜ್ಞ ವೈದ್ಯರು ಇಬ್ಬರಿಗೂ ಚಿಕಿತ್ಸೆ ಕೊಡ್ತಾ ಇದ್ದಾರೆ. ಅವನು ಮಾತನಾಡಲು ಸಾಧ್ಯ ಆದ ಮೇಲೆ ಮತ್ತಷ್ಟು ಮಾಹಿತಿ ಸಿಗುತ್ತೆ. ಸ್ಥಳೀಯವಾಗಿ ಸಿಗೋ ವಸ್ತು ಜೋಡಿಸಿ ಬಾಂಬ್ ತಯಾರಿಸೋದ್ರಲ್ಲಿ ಅವರು ಪರಿಣಿತರು. ಇದನ್ನ ಎಲ್ಲಾ ಆಯಾಮದಿಂದ ಪೊಲೀಸರು ತನಿಖೆ ಮಾಡ್ತಾರೆ. ರಕ್ತ ಹರಿಸಿ ಪ್ರಾಣ ತೆಗೆಯಲು ಹೊರಟಿರೋ ಮತಾಂಧ ಶಕ್ತಿಗಳನ್ನ ನಾವು ತಡೆಗಟ್ಟುತ್ತೇವೆ. ಕೇಂದ್ರದ ತನಿಖಾ ಸಂಸ್ಥೆಗಳು ಕೂಡ ನಮ್ಮ ಜೊತೆಗೆ ಇದ್ದಾರೆ. ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನ ನಾವು ಬಂಧಿಸ್ತೇವೆ. ಮಂಗಳೂರಿನಲ್ಲಿ ಎನ್.ಐ.ಎ ಕಚೇರಿ ಸ್ಥಾಪನೆ ಬಗ್ಗೆ ಹೇಳಿದ್ದೇವೆ. ಕೇಂದ್ರ ಸರ್ಕಾರ ಕೂಡ ಇದರ ಪಾಸಿಟಿವ್ ಒಪಿನಿಯನ್ ಇದೆ. ಈ ಪ್ರಕರಣ ಎನ್.ಐ.ಎಗೆ ವಹಿಸೋ ಬಗ್ಗೆ ಒಂದೆರೆಡು ದಿನಗಳಲ್ಲಿ ನಿರ್ಧಾರ ಮಾಡ್ತೇವೆ. ತೀರ್ಥಹಳ್ಳಿ ಒಂದು ಸುಸಂಸ್ಕೃತ ತಾಲೂಕು, ಆದರೆ ಇಂಥವರೂ ಇದಾರೆ. ಈ ಯುವಕರಿಗೆ ಮತಾಂಧ ಸಂಘಟನೆ ಲಿಂಕ್ ಇದೆ. ಕರಾವಳಿ ಮತ್ತು ಕೇರಳದ ಲಿಂಕ್ ಇದೆ. ಮಧುರೈ, ನಾಗರಕೋಯಿಲ್, ತಮಿಳುನಾಡು ಎಲ್ಲಾ ಕಡೆ ಹೋಗಿದ್ದಾನೆ.

ಇವರು ಫೋನ್‌ನಲ್ಲಿ ಮಾತನಾಡಲ್ಲ, ಬೇರೆ ತರದ ಸಂಪರ್ಕ ಸಾಧಿಸ್ತಾರೆ. ಹಿಂದೂ ಹೆಸರಿನಲ್ಲಿ, ಹಿಂದೂ ಐಡಿ ಕಾರ್ಡ್ ನಕಲಿ ಮಾಡಿ ಓಡಾಡ್ತಾ ಇದ್ದ. ಇದರಿಂದ ಅವನ ಬಗ್ಗೆ ಅನುಮಾನ ಬರ್ತಾ ಇರಲಿಲ್ಲ. ಗೋಡೆ ಬರಹ ಕೇಸ್‌ನಲ್ಲಿ ಹೈಕೋರ್ಟ್ ಎಂಟು ತಿಂಗಳಲ್ಲಿ ಬೇಲ್ ಕೊಟ್ಟಿದೆ. ಆ ಮೇಲೆ ತೀರ್ಥಹಳ್ಳಿಯ ಅಂಗಡಿಯಲ್ಲಿ ಕೆಲಸ ಮಾಡ್ತಾ ಇದ್ದವನು ನಾಪತ್ತೆಯಾದ. ಅವನು ಹೊರ ರಾಜ್ಯದಲ್ಲಿ ಆಗಾಗ್ಗೆ ಜಾಗ ಬದಲಿಸೋ ಕೆಲಸ ಮಾಡ್ತಾ ಇದ್ದ ಅವನ ಬಗ್ಗೆ ಆಳವಾಗಿ ಮತ್ತು ಗಂಭೀರವಾಗಿ ತನಿಖೆ ಮಾಡ್ತಾ ಇದೀವಿ ಎಂದಿದ್ದಾರೆ. ಇನ್ನು ಆಟೋ ಡ್ರೈವರ್‌ನ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸುತ್ತೆ. ಕುಟುಂಬಕ್ಕೆ ಆರ್ಥಿಕ ಸಹಾಯದ ಬಗ್ಗೆ ಸಿಎಂ ಜೊತೆ ಮಾತನಾಡ್ತೇನೆ ಎಂದಿದ್ದಾರೆ.