Monday, January 20, 2025
ಸುದ್ದಿ

ಒಂದೇ ಕುಟುಂಬದ ನಾಲ್ವರ ಹತ್ಯೆ- ಮನೆ ಮಗನಿಂದಲೇ ಕೃತ್ಯ-ಕಹಳೆ ನ್ಯೂಸ್

ದೆಹಲಿಯ ಪಾಲಂನಲ್ಲಿ ಕುಟುಂಬದ ನಾಲ್ವರನ್ನು ಇರಿದು ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಆರೋಪಿ ಕೇಶವ್ ಎಂಬಾತನೇ ಮನೆಯಲ್ಲಿ ಮಲಗಿದ್ದ ತಂದೆ, ಅಜ್ಜಿ, ಇಬ್ಬರು ಸಹೋದರಿಯರು ಸೇರಿ ಒಟ್ಟು ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಮನೆಯ ಇಬ್ಬರು ಸದಸ್ಯರು ಸ್ನಾನಗೃಹದಲ್ಲಿ ಕೊಲೆಯಾಗಿದ್ದಾರೆ. ಮೃತದೇಹಗಳು ಮನೆಯ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಕೇಶವನನ್ನು ವಶಕ್ಕೆ ಪಡೆದಿದ್ದಾರೆ. ಕೇಶವ ಮಾದಕ ವ್ಯಸನಿಯಾಗಿದ್ದ ಎಂದು ಹೇಳಲಾಗಿದ್ದು, ಆರೋಪಿಗೆ ಸ್ಥಿರವಾದ ಕೆಲಸ ಇಲ್ಲದ ಕಾರಣ ಕುಟುಂಬ ಸದಸ್ಯರ ನಡುವಿನ ಜಗಳವೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು