Monday, January 20, 2025
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಳ್ಯ

ಸುಳ್ಯದಲ್ಲಿ ಅಮಾನುಷ ಕೃತ್ಯ ; ಪತ್ನಿ ಕೊಂದು ಚೀಲದಲ್ಲಿ ತುಂಬಿಸಿ ಪತಿ ಇಮ್ರಾನ್​ ಪರಾರಿ!? ಮೃತ ಮಹಿಳೆಯ ಹೆಸರು, ಆಕೆ ಯಾವ ಧರ್ಮದವಳು ಎಂಬ ಮಾಹಿತಿ ಪೊಲೀಸರಿಗೂ ಲಭಿಸಿಲ್ಲ..! –  ಕಹಳೆ ನ್ಯೂಸ್

ಸುಳ್ಯ(ದಕ್ಷಿಣ ಕನ್ನಡ): ಪಟ್ಟಣದ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದ್ದು, ಆಕೆಯ ಪತಿ ನಾಪತ್ತೆಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆತನೇ ಪತ್ನಿಯನ್ನು ಕೊಲೆಗೈದು ಚೀಲದಲ್ಲಿ ತುಂಬಿಸಿಟ್ಟಿರುವ ಸಂಶಯ ವ್ಯಕ್ತವಾಗಿದೆ. ಪಶ್ಚಿಮ ಬಂಗಾಲ ಮೂಲದ ಇಮ್ರಾನ್​ ಎಂಬಾತ ಓಡಬಾಯಿ ಬಳಿ ಹೋಟೆಲೊಂದರಲ್ಲಿ ಆರು ತಿಂಗಳಿನಿಂದ ಕೆಲಸಕ್ಕಿದ್ದ.

ಅಲ್ಲೇ ಸನಿಹದ ಬೀರಮಂಗಲದಲ್ಲಿ ಪತ್ನಿ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಎರಡು ದಿನಗಳ ಹಿಂದಷ್ಟೇ ಊರಿಗೆ ಹೋಗುತ್ತೇನೆಂದು ಇಮ್ರಾನ್​ ರಜೆ ಮಾಡಿ ತೆರಳಿದ್ದ. ಆದರೆ ಹೋಗುವಾಗ ಹೆಂಡತಿಯನ್ನು ಕರೆದುಕೊಂಡು ಹೋಗಿರಲಿಲ್ಲ ಎನ್ನಲಾಗಿದೆ.

ಸ್ಥಳೀಯರು ಸಂಶಯಗೊಂಡು ಹೋಟೆಲ್​​ ಮಾಲೀಕರಿಗೆ ತಿಳಿಸಿದ್ದರು. ಬಳಿಕ ಪೊಲೀಸರ ಸಹಾಯದೊಂದಿಗೆ ಮಂಗಳವಾರ ಮನೆ ಪರಿಶೀಲಿಸಿದಾಗ ಪತ್ನಿಯ ಮೃತದೇಹ ಗೋಣಿಚೀಲದಲ್ಲಿ ತುಂಬಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಹೆಸರು, ಆಕೆ ಯಾವ ಧರ್ಮದವಳು ಎಂಬ ಮಾಹಿತಿ ಪೊಲೀಸರಿಗೂ ಲಭಿಸಿಲ್ಲ. ಆಕೆ ಹಿಂದಿ ಮಾತನಾಡುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ.