Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸಿನಿಮಾಸುದ್ದಿ

ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಸಿನಿಮಾ ಶೂಟಿಂಗ್ ವೇಳೆ ಮೂಳೆ ಮುರಿತ ; ತುಳು ಸಿನಿಮಾ ರಂಗದ ಖ್ಯಾತ ನಟ ನವೀನ್ ಪಡೀಲ್ ಆಸ್ಪತ್ರೆ ದಾಖಲು – ಕಹಳೆ ನ್ಯೂಸ್

Naveen D Padil, who got best supporting actor award for movie 'Kudla Cafe'.

ತುಳು ಸಿನಿಮಾ ರಂಗದ ಖ್ಯಾತ ನಟ ನವೀನ್ ಡಿ. ಪಡೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿನಿಮಾದ ಚಿತ್ರೀಕರಣ ವೇಳೆ ಬಿದ್ದು ಏಟು ಮಾಡಿಕೊಂಡ ಪರಿಣಾಮ ಅವರ ತೊಡೆಯ ಮೂಳೆ ಮುರಿತವಾಗಿದ್ದು, ಶಸ್ತ್ರ ಚಿಕಿತ್ಸೆ ಕೂಡ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಮೂರು ತಿಂಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಸದ್ಯ ಅವರು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ನಡೆದ ಶೂಟಿಂಗ್ ನಲ್ಲಿ ಅವರು ಪಾಲ್ಗೊಂಡಿದ್ದರು. ಶೂಟಿಂಗ್ ವೇಳೆ ಬಿದ್ದ ಪರಿಣಾಮ ಬಲವಾಗಿಯೇ ತೊಡೆಗೆ ಏಟಾಗಿದೆ. ಹಾಗಾಗಿ ತೊಡೆ ಮೂಳೆ ಮುರಿತವಾಗಿದೆ. ತುಳು, ಮಲಯಾಳಂ ಹಾಗೂ ಕನ್ನಡದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದಲ್ಲಿ ನವೀನ್ ಪ್ರಮುಖ ಪಾತ್ರ ಮಾಡುತ್ತಿದ್ದರು. ಶಸ್ತ್ರ ಚಿಕಿತ್ಸೆ ನಂತರ ವಿಶ್ರಾಂತಿ ಪಡೆಯುತ್ತಿರುವ ನವೀನ್, ಮೂರು ತಿಂಗಳ ನಂತರವಷ್ಟೇ ಈ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ತುಳುವಿನಲ್ಲಿ ಸಾಕಷ್ಟು ಹೆಸರು ಮಾಡಿರುವ ನವೀನ್ ಪಡೀಲ್ ಕನ್ನಡಲ್ಲೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಮಜಾ ಟಾಕೀಸ್ ನ ಗುಂಡು ಮಾಮಾ ಎಂದೇ ಫೇಮಸ್ ಆಗಿರುವ ಇವರು, ಹಾಸ್ಯ ಕಲಾವಿದರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ರಂಗಭೂಮಿ, ಕಿರುತೆರೆ, ಹಾಗೂ ಹಿರಿತೆರೆಯಲ್ಲಿ ತಮ್ಮನ್ನು ತಾವು ಏಕಕಾಲಕ್ಕೆ ತೊಡಗಿಸಿಕೊಂಡಿದ್ದು ವಿಶೇಷ.