‘ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವ ಹಾಗೆ ನಾವು ಧರ್ಮವನ್ನು ಎಷ್ಟು ರಕ್ಷಿಸುತ್ತೇವೆಯೋ ಅಷ್ಟು ಧರ್ಮ ನಮ್ಮನ್ನು ರಕ್ಷಿಸುತ್ತದೆ. ಇಂತಃ ನಮ್ಮ ಧರ್ಮದ ರಕ್ಷಣೆ ಹಾಗೂ ಬೆಳವಣಿಗೆಯ ಬೆಳಗನ್ನು ಗಡಿನಾಡಿನಾಚೆ ಬೆಳಗಲು ‘ಸುಹಾಸ್ತಿ ಯುವ ಜೈನ್ ಮಿಲನ್’ ಅವರು ಜಿನ ಸಮ್ಮಿಲನ ಕಾರ್ಯಕ್ರಮವನ್ನ ದುಬೈನಲ್ಲಿ ಡಿಸೆಂಬರ್ 3 ಮತ್ತು 4 ರಂದು ನಡೆಸಿಕೊಡಲಿದ್ದಾರೆ.
ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದ ಕಾರ್ಯಕ್ರಮಗಳ ಸಂಘಟಿಸಿ ಯಶಸ್ವಿಗೊಳಿಸಲು ಕಷ್ಟವೆನಿಸುವಾಗ; ಅಂತರಾಷ್ಟ್ರೀಯ ಮಟ್ಟದಲ್ಲಿ ಒಂದು ಕಾರ್ಯಕ್ರಮ ಸಂಘಟಿಸುವುದು ಸುಲಭಸಾಧ್ಯವಲ್ಲ. ಇಂತದ್ದೊAದು ಬೃಹತ್ ಯೋಜನೆಯನ್ನ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಮತ್ತು ಜೈನ್ ಮಿಲನ್ ದುಬೈ ಇವರ ಸಹಭಾಗಿತ್ವದಲ್ಲಿ ನೆರವೆರಲಿದೆ.
ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ನಡೆಯುತ್ತಿರುವ ಜೈನ ಸಮುಯದಾಯದ ಹೆಮ್ಮೆಯ ಕಾರ್ಯಕ್ರಮದ ರೂಪು ರೇಶೆ ಹೇಗಿರಬಹುದು?. ತಿಳಿಯುವ ಕಾತರಿಕೆಯಂತೂ ಎಲ್ಲರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಕಾರ್ಯಕ್ರಮದ ಸಣ್ಣ ಜಲಕ್ ನೋಡೋಣ ಬನ್ನಿ. 3-12-2022 ಶನಿವಾರ ಸಂಜೆ ಸ್ವಸ್ತಿಶ್ರೀ ಪರಮಪೂಜ್ಯ ಲಕ್ಷ್ಮಿಸೇನಾ ಭಟ್ಟಾಚಾರ್ಯ ಮಹಾಸ್ವಾಮೀಜಿ ಎನ್ ಆರ್ ಪುರ ಇವರಿಂದ ಆಶೀರ್ವಚನ. ಉದ್ಘಾಟನೆ ಸುರೇಂದ್ರ ಕುಮಾರ್ ಧರ್ಮಸ್ಥಳ. ಅಧ್ಯಕ್ಷತೆ ನಾಡೋಜ ಹಂಪ ನಾಗರಾಜಯ್ಯ. ಮುಖ್ಯ ಅತಿಥಿಗಳು ಅನಿತಾ ಸುರೇಂದ್ರ ಕುಮಾರ್, ಪುಷ್ಪರಾಜ್ ಜೈನ್, ಪುಟ್ಟಸ್ವಾಮಿ ಜೈನ್, ಸಂದೇಶ್ ಅಂಗಡಿ ಬೆಟ್ಟು, ಪ್ರಸನ್ನ ಕುಮಾರ್ ಮೈಸೂರು, ಅಭಯಚಂದ್ರ ಜೈನ್ ಮಾಜಿ ಸಚಿವರು ಕರ್ನಾಟಕ ಸರ್ಕಾರ. ಪುಸ್ತಕ ಬಿಡುಗಡೆ ಮಾಡಲಿರುವವರು ಜಯಲಕ್ಷ್ಮಿ ಅಭಯ್ ಕುಮಾರ್, ಡಾ ಪದ್ಮಪ್ರಸಾದ್, ನೆರಂಕಿ ಪಾರ್ಶ್ವನಾಥ್. ವೆಬ್ಸೈಟ್ ಬಿಡುಗಡೆ. ದುಬೈ ಜೈನ್ ಮಿಲನ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
4-12-2022 ಭಾನುವಾರ ಬೆಳಿಗ್ಗೆ 8:30 ರಿಂದ ಡಾ ಸ್ನೇಹಶ್ರೀ ನಿರ್ಮಲ್ ಕುಮಾರ್ ಅವರಿಂದ ಭಜನೆ, ನೀವ್ ಆಗ್ತೀರ ಸಮ್ಯಕ್ ಜ್ಞಾನಿ ಕಾರ್ಯಕ್ರಮ, ಸಾಂಗ್, ಗೇಮ್, ಸಂವಾದ, ಅವಾರ್ಡ್ ಕಾರ್ಯಕ್ರಮ. ಹೀಗೆ ಹತ್ತು ಹಲವು ಕನಸುಗಳ ಹೊತ್ತುಕೊಂಡ ಬೇರೆ ಬೇರೆ ನಾಡುಗಳ ಸಂಸ್ಕೃತಿ, ಆಚಾರ, ವಿಚಾರಗಳು ದುಬೈ ಜಿನ ಸಮ್ಮಿಲನದಲ್ಲಿ ಮೇಳೈಸುತ್ತಿವೆ.
ಹಾಗಾದರೆ ನಮಗೆ ಇಂತಹ ಕಾರ್ಯಕ್ರಮದ ಒಳ ತಿರುಳು, ದ್ಯೇಯೋದ್ದೇಶಗಳು ಏನಿರಬಹುದು. ಇದರ ಅವಶ್ಯಕತೆ ಯಾಕಿದೆ? ಎಂಬಿತ್ಯಾದಿ ಪ್ರಶ್ನೆಗಳು ಅನೇಕರಲ್ಲಿ ಹಾದು ಹೋಗಿರಬಹು. ಹೌದು ನಮ್ಮ ಈ ಪ್ರಶ್ನೆಗಳಿಗೆ ಉತ್ತರ ನಮ್ಮ ಧರ್ಮ. ಇದರಾಳದಲ್ಲಿ ಭವಿಷ್ಯದ ಕನಸಿದೆ, ನಮ್ಮದೇ ಮುಂದಿನ ಪೀಳಿಗೆಗೆ ಧರ್ಮವನ್ನು ಕಾಪಿಡುವ ಜವಾಬ್ದಾರಿಯಿದೆ, ನಮ್ಮ ಜೈನ ಧರ್ಮದ ಸಾರವನ್ನ ವಿಶ್ವಮಟ್ಟದಲ್ಲಿ ಸಾರಿ, ಹರವುಗಳ ಇನ್ನಷ್ಟು ವಿಸ್ತರಿಸಬೇಕೆಂಬುದಿದೆ. ಉಳಿಸಿ ಬೆಳೆಸುವ ಅಸೀಮ ಆಸೆಯಿದೆ. ಹಾಗಾಗಿಯೇ ಸಂಕುಚಿತದ ಎಲ್ಲ ಎಲ್ಲೆಗಳ ಮೀರಿ ಒಂದಾಗಿ ಸಂಭ್ರಮ, ಸಡಗರ, ಸಂತೋಷವನ್ನು ಆಚರಿಸುತ್ತಿದ್ದೇವೆ. ಎಲ್ಲರೂ ಪಾಲ್ಗೋಳ್ಳಬೇಕಾಗಿ ವಿನಂತಿ.