Sunday, January 19, 2025
ಸುದ್ದಿ

Breaking News : ಹಾಡು ಹಗಲಲ್ಲೇ ಉಡುಪಿಯ ಪಬ್’ನಲ್ಲಿ ಭೀಕರ ಕೊಲೆ ; ಶಾಸಕ ರಘುಪತಿ ಭಟ್ ಸಂಬಂಧಿ ಗುರುಪ್ರಸಾದ್ ಭಟ್ ಹತ್ಯೆ – ಕಹಳೆ ನ್ಯೂಸ್

ಉಡುಪಿ, ಜುಲೈ 29 : ಉಡುಪಿಯಲ್ಲಿ ಪಬ್ ನಡೆಸುತ್ತಿದ್ದ ಉದ್ಯಮಿಯೊಬ್ಬರನ್ನು ಬರ್ಬರವಾಗಿ  ಹಾಡುಹಗಲೇ ಹತ್ಯೆಗೈಯಲಾಗಿದೆ.

Exclusive ದೃಶ್ಯಾವಳಿ ‌ಕಹಳೆ ನ್ಯೂಸ್ ನಲ್ಲಿ ಮಾತ್ರ!

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/2f-KUc_2PWQ

ಜಾಹೀರಾತು
ಜಾಹೀರಾತು
ಜಾಹೀರಾತು

 

 

 

ಈ ದುರ್ಘಟನೆಯು ಉಡುಪಿಯ ಪೆರಂಪಳ್ಳಿ  ಎಂಬಲ್ಲಿ ನಡೆದಿದೆ. ಹತ್ಯೆಯಾದ ಉದ್ಯಮಿಯನ್ನು ಶಾಸಕ ರಘುಪತಿ ಭಟ್ ದೂರದ ಸಂಬಂಧಿಯಾಗಿದ್ದು,  ಗುರುಪ್ರಸಾದ್ ಭಟ್ (46) ಎಂದು ಗುರುತಿಸಲಾಗಿದೆ.

ಮಧ್ಯಾಹ್ನ ಪಬ್ ನುಗ್ಗಿದ ಮೂರು ಜನ ದುಷ್ಕರ್ಮಿಗಳಿಂದ  ಚಾಕುವಿನಿಂದ ಇರಿದು ಈ ಹತ್ಯೆ ನಡೆದಿದ್ದು, ಹಳೆಯ ದ್ವೇಷವೇ ಕಾರಣ ಎನ್ನಲಾಗಿದ್ದು, ಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬರಬೇಕಿದೆ. ಉಡುಪಿಯ ಮಣಿಪಾಲ ಪೋಲಿಸ್  ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲಿಸಿದ್ದು, ಪ್ರಕರಣನ್ನು ದಾಖಲಿಸಿಕೊಂಡಿದ್ದಾರೆ.