Monday, January 20, 2025
ಸುದ್ದಿ

ರಾಜ್ಯದ ಶಾಲೆಗಳಲ್ಲಿ ‘ಮೊಬೈಲ್ ಲೆಸ್ ಡೇ’ ನಿಯಮ ಜಾರಿಗೆ ಶಿಕ್ಷಣ ಇಲಾಖೆ ಚಿಂತನೆ : ಶಿಕ್ಷಣ ಸಚಿವ ಬಿ.ಸಿ ನಾಗೇಶ್ – ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ ಮಾಡುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಶಾಲೆಗಳಲ್ಲಿ ‘ಮೊಬೈಲ್ ಲೆಸ್ ಡೇ’ ನಿಯಮ ಜಾರಿಗೆ ತರಲು ಶಿಕ್ಷಣ ಇಲಾಖೆ ಚಿಂತಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಾಗುತ್ತಿದೆ. ಆದ್ದರಿಂದ ಶಾಲೆಗಳಲ್ಲಿ ಮೊಬೈಲ್ ಬಳಕೆ ನಿಷೇಧ ನಿಯಮ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ. ಬ್ಯಾಗ್ ಲೆಸ್ ಡೇ ಬಳಿಕ ‘ಮೊಬೈಲ್ ಲೆಸ್ ಡೇ’ ಪ್ರಯತ್ನ ಜಾರಿಗೆ ತರಲಾಗುತ್ತಿದೆ. ಪೋಷಕರ ಅಭಿಪ್ರಾಯದ ಮೇರೆಗೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದೆ. ಕೊರೊನಾ ಹಿನ್ನೆಲೆ ಶಾಲೆಗಳಲ್ಲಿ ಆನ್ ಲೈನ್ ಕ್ಲಾಸ್ ನಡೆಸಲಾಗಿತ್ತು, ಇದಕ್ಕಾಗಿ ಮಕ್ಕಳು ವಿಪರೀತವಾಗಿ ಮೊಬೈಲ್ ಬಳಕೆ ಮಾಡಿದ್ದರು. ಆದರೆ ಬರು ಬರುತ್ತಾ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಮಗುವಿನ ಭಾವನಾತ್ಮಕ ನಡವಳಿಕೆಯು ಅನೇಕ ವಿಧಗಳಲ್ಲಿ ಪರಿಣಾಮ ಬೀರುತ್ತದೆ. ಡಿಜಿಟಲ್ ಮಾಧ್ಯಮವು ಮಗುವಿನ ಕಲ್ಪನೆ ಮತ್ತು ಪ್ರೇರಣೆ ಮಟ್ಟವನ್ನು ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಕಿರಿಕಿರಿ , ಹತಾಶೆ, ಆತಂಕ ಮತ್ತು ಹಠಾತ್ ಅಸ್ವಸ್ಥತೆಗಳು ಕಾಣಿಸಿಕೊಳ್ಳುತ್ತವೆ ಎಂದರು.