Tuesday, January 21, 2025
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನ ಎನ್‌ ಸಿ ಸಿ ಘಟಕದ ವತಿಯಿಂದ ಆನಂದಾಶ್ರಮದಲ್ಲಿ ಗಿಡನೆಡುವ ಕಾರ್ಯಕ್ರಮ –ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಎನ್‌ ಸಿ ಸಿ ಘಟಕ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಆನಂದಾಶ್ರಮ ಸೇವಾ ಟ್ರಸ್ಟ್‌ ಇವುಗಳ ಸಹಯೋಗದೊಂದಿಗೆ ಎನ್‌ ಸಿ ಸಿ ದಿನಾಚರಣೆಯ ಪ್ರಯುಕ್ತ ಆನಂದಾಶ್ರಮದಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಎನ್‌ ಸಿ ಸಿ ಘಟಕ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಆನಂದಾಶ್ರಮ ಸೇವಾ ಟ್ರಸ್ಟ್‌ ಇವುಗಳ ಸಹಯೋಗದೊಂದಿಗೆ ಎನ್‌ ಸಿ ಸಿ ದಿನಾಚರಣೆಯ ಪ್ರಯುಕ್ತ ಆನಂದಾಶ್ರಮದಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆನಂದಾಶ್ರಮ ಸೇವಾ ಟ್ರಸ್ಟ್‌ನ ಮುಖ್ಯ ಟ್ರಸ್ಟಿಯಾದ ಡಾ| ಗೌರಿ ಪೈಯವರು ಮಾತನಾಡಿ “ಗಿಡ ನೆಡುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸಿಲ್ಲಿ ದೇಶ ಸಮೃದ್ಧವಾಗುವುದು. ಯುವ ಜನರಲ್ಲಿ ಪರಿಸರ ಪ್ರೇಮ ಮೂಡಿಸುವ ಕೆಲಸವನ್ನು ಎನ್‌ ಸಿ ಸಿ ಮಾಡುತ್ತಿದೆ. ಪರಿಸರ ಪ್ರೇಮ ಮಾತ್ರವಲ್ಲದೆ ಹೆತ್ತವರನ್ನು ಅವರ ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಂಡು ತಮ್ಮ
ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದಾಗ ಮಾತ್ರವೇ ನಾವು ಉತ್ತಮ ಪ್ರಜೆಗಳಾಗುತ್ತೇವೆ. ವೃತ್ತಿಜೀವನ ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುವುದು ಬಹಳ ಮುಖ್ಯವಾಗಿದೆ” ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆ| ಜಾನ್ಸನ್‌ ಡೇವಿಡ್‌ ಸಿಕ್ವೆರಾರವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ೭೫ನೇ ಎನ್‌.ಸಿ.ಸಿ ದಿನದ ಮಹತ್ವವನ್ನು ತಿಳಿಸಿದರು. ಸುಮಾರು 50 ಕ್ಕೂ ಹೆಚ್ಚಿನ ವಿವಿಧ ಹಣ್ಣುಗಳ ಗಿಡಗಳನ್ನು ಆನಂದಾಶ್ರಮ ಪರಿಸರದಲ್ಲಿ ನೆಡಲಾಯಿತು. ಕಾಲೇಜಿನ ಎನ್‌.ಸಿ.ಸಿ ಘಟಕಗಳ ವತಿಯಿಂದ ಆಶ್ರಮ ನಿವಾಸಿಗಳಿಗೆ ಅಕ್ಕಿ ಹಾಗೂ ಹಣ್ಣುಹಂಪಲುಗಳನ್ನು ನೀಡಲಾಯಿತು.
ಸೀನಿಯರ್‌ ಕೆಡೆಟ್‌ ಅಂಡರ್‌ ಆಫೀಸರ್‌ ಸಾತ್ವಿಕ್‌ ಡಿ ಎನ್‌ ಸ್ವಾಗತಿಸಿ ಜ್ಯೂನಿಯರ್‌ ಅಂಡರ್‌ ಆಫೀಸರ್‌ ಕೆಲ್ವಿನ್‌ ಆಂಟನಿ ವಂದಿಸಿದರು. ಕೃತಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್‌.ಸಿ.ಸಿ ಘಟಕಗಳ 105 ಕೆಡೆಟ್ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.