Sunday, September 8, 2024
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ 2022-23 ವರ್ಷದ ರಾಷ್ಟ್ರೀಯ ಸೇವಾಯೋಜನೆಯ ಚಟುವಟಿಕೆಗಳ ಉದ್ಘಾಟನೆ: “ ರಾಷ್ಟ್ರೀಯ ಸೇವಾಯೋಜನೆಯು ಸಮಗ್ರ ವ್ಯಕ್ತಿತ್ವ ನಿರ್ಮಾಣದ ಬುನಾದಿ” ವಂ| ಡಾ ಆಂಟನಿ ಪ್ರಕಾಶ್‌ ಮೊಂತೆರೊ -ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಘಟಕಗಳ ಪ್ರಸಕ್ತ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವನ್ನು ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಸಲಾಯಿತು. ಉದ್ಘಾಟಕರಾಗಿ ಭಾಗವಹಿಸಿದ ಕಾಲೇಕಿನ ಪ್ರಾಂಶುಪಾಲರಾದ ವಂ| ಡಾ ಆಂಟನಿ ಪ್ರಕಾಶ್‌ ಮೊಂತೆರೊರವರು “ನನಗಲ್ಲ ನಿನಗೆ ಎಂಬ ಧ್ಯೇಯವಾಕ್ಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಸೇವಾಯೋಜನೆಯು ವಿದ್ಯಾರ್ಥಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ನಾಯಕತ್ವಗುಣ ಹಾಗೂ ಸೇವಾ ಮನೋಭಾವಗಳನ್ನು ಉದ್ದೀಪನಗೊಳಿಸುವಲ್ಲಿ ಸಹಕಾರಿಯಾಗಿದೆ. ಪ್ರತಿಯೊಬ್ಬ ಸ್ವಯಂಸೇವಕನೂ ತನ್ನ ಜವಾಬ್ದಾರಿಯನ್ನರಿತು ಕಾರ್ಯ ನಿರ್ವಹಿಸಬೇಕು. ಕಾಲೇಜಿನ ಪ್ರತಿಯೊಂದು ಚಟುವಟಿಕೆಯಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ಹಲವಾರು ಸಮಾಜಮುಖೀ ಕಾರ್ಯಕ್ರಮಗಳಲ್ಲೂ ಭಾಗಿಯಾಗಬೇಕು. ಜನರಿಗೆ ದುರ್ವ್ಯಸನಗಳ ದುಷ್ಪರಿಣಾಮಗಳ ಬಗ್ಗೆ ಹಾಗೂ ಸಮಾಜದಲ್ಲಿನ ಹಲವಾರು ಪಿಡುಗುಗಳ ಬಗ್ಗೆ ಅರಿವು ಮೂಡಿಸಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕು” ಎಂದು ಹೇಳಿದರು.

ಹರ್ಷಿತಾ ಪ್ರಾರ್ಥಿಸಿದರು. ಯೋಜನಾಧಿಕಾರಿಯಾದ ಪ್ರೊ| ವಾಸುದೇವ ಸ್ವಾಗತಿಸಿ ಪ್ರಾಸ್ತಾವವನೆಗೈದರು. ನಿರೀಕ್ಚಾ
ವಂದಿಸಿದರು. ಕಾರ್ಯಕ್ರಮ ವೈಷ್ಣವಿ ನಿರೂಪಿಸಿದರು. ಯಕ್ಷಗುರುಗಳಾದ ಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಯೋಜನಾಧಿಕಾರಿಯಾದ ಶ್ರೀಮತಿ ಪುಷ್ಪಾ ಉಪಸ್ಥಿತರಿದ್ದರು. ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ 2 ಘಟಕಗಳ 200 ಮಂದಿ ಸ್ವಯಂಸೇವಕರು ಭಾಗವಹಿಸಿದರು.