Recent Posts

Tuesday, January 21, 2025
ಸುದ್ದಿ

ಮುರಿದುಬಿದ್ದ ನಟಿ ವೈಷ್ಣವಿ ಗೌಡ- ವಿದ್ಯಾಭರಣ ಮದುವೆ ಮಾತುಕತೆ : ಸ್ಪಷ್ಟನೆ ನೀಡಿದ ನಟಿ –ಕಹಳೆ ನ್ಯೂಸ್

ಬೆಂಗಳೂರು: ಕಿರಿತೆರೆ ಖ್ಯಾತ ನಟಿ ವೈಷ್ಣವಿ ಗೌಡ ಹಾಗೂ ಉದ್ಯಮಿ ವಿದ್ಯಾಭರಣ ವಿವಾಹ ಮಾತುಕತೆ ಮುರಿದು ಬಿದ್ದಿದೆ. ಈ ಬಗ್ಗೆ ನಟಿ ವೈಷ್ಣವಿ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನ. 11ರಂದು ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಮದುವೆ ಮಾತುಕತೆ ನಡೆದಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿತ್ತು. ನಟಿ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ನಿಶ್ಚಿತಾರ್ಥವಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮದುವೆ ಮಾತುಕತೆ ಮುರಿದುಬಿದ್ದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಬಗ್ಗೆ ಮಾತನಾಡಿರುವ ವೈಷ್ಣವಿ ಗೌಡ, ಇದು ನಿಶ್ಚಿತಾರ್ಥವಲ್ಲ, ಕೇವಲ ಮದುವೆ ಮಾತುಕತೆಯಾಗಿತ್ತು. ಆದರೆ ಮದುವೆ ಮಾತುಕತೆ ಮುರಿದುಬಿದ್ದಿದೆ. ಈ ಬಗ್ಗೆ ಹೆಚ್ಚಿನ ವಿಚಾರ ಬೇಡ. ಎಲ್ಲವನ್ನೂ ಇಲ್ಲೇ ಬಿಟ್ಟುಬಿಡಿ. ಇದನ್ನು ಇನ್ನೂ ಎಳೆಯಬೇಡಿ ಎಂದು ತಿಳಿಸಿದ್ದಾರೆ.

ಉದ್ಯಮಿ ವಿದ್ಯಾಭರಣ ಹಾಗೂ ವೈಷ್ಣವಿ ಗೌಡ ಮದುವೆ ಮಾತುಕತೆ ಫೋಟೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬರ ಆಡೀಯೋ ವೈರಲ್ ಆಗಿತ್ತು. ವಿದ್ಯಾಭರಣ ತನಗೆ ವಂಚಿಸಿದ್ದಾನೆ ಎಂದು ಆರೋಪಿಸಿದ್ದರು. ಇದೇ ಕಾರಣಕ್ಕೆ ವೈಷ್ಣವಿ ಗೌಡ ವಿದ್ಯಾಭರಣ ಜೊತೆ ವಿವಾಹ ವಿಚಾರದಿಂದ ದೂರ ಸರಿದಿದ್ದು, ಮದುವೆ ಮಾತುಕತೆ ಮುರಿದಿದೆ ಎಂದು ಹೇಳಲಾಗುತ್ತಿದೆ.