Thursday, January 23, 2025
ಸುದ್ದಿ

ಕೊನೆಗೂ ಗೆದ್ದ ದಂತಕಥೆ : ಕಾಂತರ ಸಿನಿಮಾ ಹಾಡಿಗಿದ್ದ ತಡೆಯಾಜ್ಞೆ ತೆರವು : ಥಿಯೆಟರ್ ನಲ್ಲಿ ಮಾತ್ರವಲ್ಲದೇ ಕೋರ್ಟ್ ನಲ್ಲಿಯೂ ಗೆದ್ದ ಕಾಂತರ –

ಕೇರಳ: ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳ ಸ್ಥಳೀಯ ಕೋರ್ಟ್ ತೆರುವು ಮಾಡಿದ್ದು ಹಾಡು ಬಳಕೆಗೆ ಅನುಮತಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವರಾಹ ರೂಪಂ ಹಾಡನ್ನು ಬಳಸದಂತೆ ತಾತ್ಕಾಲಿಕ  ತಡೆಯಾಜ್ಞೆ ನೀಡಿದ್ದ ಕೋಯಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು ತೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನೇ ವಜಾ ಮಾಡಿದೆ.

ವಿವಾದದಲ್ಲಿ ಹೊಂಬಾಳೆ ಫಿಲ್ಮ್ಸ್‌ಗೆ ಮೊದಲ ಯಶಸ್ಸು ಸಿಕ್ಕಿದ್ದು, ಈ ಹಿಂದಿನಂತೆಯೇ ವರಾಹರೂಪಂ ಹಾಡು ಬಳಕೆಗೆ ಅನುಮತಿ ಸಿಕ್ಕಿದೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ ವರಾಹರೂಪಂ ಹಾಡಿನ ಬರಹಗಾರ ಶಶಿಧರ್‌ ಕಾವೂರು, ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದೆ ಮತ್ತು ವರಾಹರೂಪಂ ಹಾಡಿಗೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವು ಮಾಡಿದೆ. ನ್ಯಾಯ ಗೆದ್ದಿತು. ಜೈ ತುಳುನಾಡು ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು: ಕಾಂತಾರ ಸಿನಿಮಾ ತಂಡಕ್ಕೆ ಕೊನೆಗೂ ಭರ್ಜರಿ ಗೆಲುವು ಸಿಕ್ಕಿದೆ. ವರಾಹ ರೂಪಂ ಹಾಡಿಗೆ ನೀಡಿದ್ದ ತಡೆಯಾಜ್ಞೆಯನ್ನು ಕೇರಳ ಸ್ಥಳಿಯ ಕೋರ್ಟ್ ತೆರುವು ಮಾಡಿದ್ದು, ಹಾಡು ಬಳಕೆಗೆ ಅನುಮತಿ ನೀಡಿದೆ. ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಭಾರಿ ಹಿನ್ನಡೆಯಾಗಿದ್ರೆ, ಕಾಂತಾರ ತಂಡ ಗೆದ್ದು ಬೀಗಿದೆ.

ವರಾಹ ರೂಪಂ ಹಾಡನ್ನು ಬಳಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದ ಕೋಯಿಕ್ಕೋಡ್ ನ್ಯಾಯಾಲಯ ವಿವಾದದ ಬಗ್ಗೆ ಅಂತಿಮ ಆದೇಶ ಹೊರಡಿಸಿದ್ದು ತೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನೇ ವಜಾ ಮಾಡಿದೆ.