Thursday, January 23, 2025
ಸುದ್ದಿ

“ನನಗೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜಾ.. ಇಷ್ಟು ಕೀಳುಮಟ್ಟಕ್ಕೆ ಇಳಿಯೊದಿಲ್ಲ..!” : ವಿದ್ಯಾಭರಣ್‌ – – ಕಹಳೆ ನ್ಯೂಸ್

ಬೆಂಗಳೂರು : ನನ್ನ ಹಾಗೂ ನನ್ನ ಕುಟುಂಬದ ವರ್ಚಸ್ಸನ್ನು ಹಾಳು ಮಾಡಲು ಹಿತಶತ್ರುಗಳು ಮುಂದಾಗಿದ್ದಾರೆ. ನಾನು ಯಾವುದೇ ಹುಡುಗಿಯ ಜೊತೆ ತಪ್ಪಾಗಿ ನಡೆದುಕೊಂಡಿಲ್ಲ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ನಟಿ ವೈಷ್ಣವಿ ಗೌಡ ಅವರ ಜೊತೆ ನಿಶ್ಚಿತಾರ್ಥ ಆಯ್ತು ಎನ್ನಲಾದ ನಟ ವಿದ್ಯಾಭರಣ್‌ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲಿಗೆ ವೈರಲ್‌ ಆದ ಫೋಟೋ ವಿಚಾರವಾಗಿ ಮಾತನಾಡಿದ ವಿದ್ಯಾಭರಣ್‌, ನಟಿ ವೈಷ್ಣವಿಗೌಡ ಕುಟುಂಬ ಹಾಗೂ ನಮ್ಮ ಕುಟುಂಬದ ಮಧ್ಯ ಬರೀ ಮಾತುಕತೆಯಾಗಿದೆ ಅಷ್ಟೇ. ನಿಶ್ಚಿತಾರ್ಥ ನಡೆದಿಲ್ಲ. ಎರಡು ಕುಟುಂಬದ ನಡುವೆ ಕೇವಲ ಮಾತುಕತೆಯಾಗಿ 10 ದಿನವಾಗಿದೆ. ಅದ್ರೆ ಈ ಫೋಟೋ ಎಲ್ಲಿಂದ ವೈರಲ್ ಅಗಿದೆ ಅನ್ನೋದು ಗೊತ್ತಿಲ್ಲ. ನಮ್ಮ ಕುಟುಂಬದ ವರ್ಚಸ್ಸನ್ನ ಹಾಳು ಮಾಡಲು ಹಿತಶತ್ರುಗಳು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೈರಲ್‌ ಆಗಿರುವ ಆಡಿಯೋ ಕುರಿತು ಮಾತನಾಡಿ, ನಾನು ಯಾವುದೇ ಹುಡುಗಿಯರೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ. ನನಗೆ ಈ ಹಿಂದೆ ಗರ್ಲ್ ಫ್ರೆಂಡ್ ಇದ್ದಿದ್ದು ನಿಜಾ, ನನ್ನ ಫ್ರೆಂಡ್ ಸರ್ಕಲ್‌ಗೂ ಅದು ಗೊತ್ತಿತ್ತು. ಆದರೆ ಅವರೆಲ್ಲಾ ಇಷ್ಟು ಕೀಳುಮಟ್ಟಕ್ಕೆ ಇಳಿಯೊದಿಲ್ಲ. ಅಕೆ ನೇರವಾಗಿ ಬಂದು ಆರೋಪವನ್ನ ಮಾಡಬಹುದಿತ್ತು. ನನ್ನ ಮೊದಲ ಫಿಲ್ಮ್ ಬಂದಾಗಲೇ ಇವರು ಆರೋಪ ಮಾಡಬಹುದಿತ್ತು. ಹೆಸರು ಹೇಳಲು ಧೈರ್ಯವಿಲ್ಲದಿರುವ ಅಕೆ ಆರೋಪ ಮಾಡುತ್ತಿದ್ದಾಳೆ. ನಾಳೆ ಕಮೀಪನರ್ ಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.

ನನ್ನ ಮೇಲೆ ಇಷ್ಟೆಲ್ಲ ಆರೋಪ ಮಾಡೋ ಬದಲು ಆಕೆಯೇ ಕಂಪ್ಲೈಂಟ್ ಕೊಡಬಹುದಿತ್ತು. ನಮ್ಮ ಏಳಿಗೆಯನ್ನ ಸಹಿಸಲು ಸಾಧ್ಯವಾಗದೇ ಇರೋ ಹಿತ ಶತ್ರುಗಳು ಮಾಡ್ತಿದ್ದಾರೆ. ನಾನು ಇನ್‌ಸ್ಟಾಗ್ರಾಮ್‌ ಅನ್ನ ಮೊದಲೇ ಡಿಲೀಟ್ ಮಾಡಿದ್ದೇನೆ. ನನ್ನ ಇನ್‌ಸ್ಟಾಗ್ರಾಮ್‌ ಹ್ಯಾಕ್ ಅಗಿತ್ತು, ತುಂಬಾ ಹಿಂದೆಯೇ ಡಿಲೀಟ್ ಅಗಿದೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ಇವತ್ತು ಬುದ್ಧಿ ಕಲಿಸಿಲ್ಲ ಅಂದ್ರೆ ನಾಳೆ ಇದೇ ರೀತಿ ಸಾಕಷ್ಟು ಜನರಿಗೆ ಅಗುತ್ತೆ ಎಂದರು.

ಅಪ್ಪ ನನಗೆ ಇದೆಲ್ಲಾ ಕಾಮನ್ ಕಣೋ ಏನೂ ಆಗಲ್ಲ ನಾನಿದ್ದೀನಿ ಬಿಡು ಅಂದ್ರು. ವೈಷ್ಣವಿಗೆ ಮಾಧ್ಯಮದ ಮೂಲಕ ಹೇಳಲು ಇಚ್ಚೆ ಪಡ್ತೀನಿ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ನಾವು ಮುಂದೆ ಮದುವೆ ಆಗ್ತೀವೋ ಇಲ್ವೋ ಗೊತ್ತಿಲ್ಲ. ಕಾಣದ ಹಿತ ಶತ್ರುಗಳು ಈ ರೀತಿ ಮಾಡಿದ್ದಾರೆ ಇದರಿಂದ ಹೊರ ಬರ್ತೀನಿ ಎಂದು ತಮ್ಮ ಮೇಲಿನ ಆರೋಪದ ಬಗ್ಗೆ ವಿದ್ಯಾಭರಣ್ ಸ್ಪಷ್ಟನೆ ನೀಡಿದರು.