Sunday, January 19, 2025
ಸುದ್ದಿ

Supper Exclusive : ಅಮೇರಿಕಾದಲ್ಲಿ ಇತಿಹಾಸ ನಿರ್ಮಿಸಿದ ಯಕ್ಷಗಾನ ; ಪಟ್ಲ ಸತೀಶ್ ಶೆಟ್ಟಿಯವರ ಗಾಯನಕ್ಕೆ ಮನಸೋತ ದೊಡ್ಡಣ್ಣ – ಕಹಳೆ ನ್ಯೂಸ್

ಕರಾವಳಿ : ಯಕ್ಷಗಾನ ಕರಾವಳಿಯ ಗಂಡು ಕಲೆ. ಇದೊಂದು ಆರಾಧನಾ ಕಲೆ ಆದರೆ, ಈಗ ಈ ಕಲೆಗೆ ವಿಶ್ವ ಮಟ್ಟದಲ್ಲಿ ಮಾನ್ಯತೆ ಲಭಿಸಿರುವುದು ಯಕ್ಷಗಾನ ಪ್ರೇಮಿಗಳಿಗೆ ಅತೀವ ಸಂತಸ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆ, ರಾಜ್ಯ, ದೇಶೀಯ ಮಟ್ಟದಲ್ಲಲ್ಲದೆ, ದುಬಾಯಿ ಕತ್ತರ್ ಸೇರಿದಂತೆ ಅನೇಕ ವಿದೇಶಿ ರಾಷ್ಟಗಳಲ್ಲೂ ಯಕ್ಷಗಾನದ ಕಂಪು ಪಸರಿಸಿದೆ , ಪ್ರದರ್ಶನ ನಡೆದಿದೆ. ಆದರೆ, ಇದೀಗ ಅಮೇರಿಕಾದ ಇತಿಹಾಸದಲ್ಲೇ ಮೊದಲಬಾರಿಗೆ ಹ್ಯೂಸ್ಟನ್ ಕೃಷ್ಣವೃಂದವನದಲ್ಲಿ ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಯಿಂದ ಬಯಲುರಂಗ ಮಂಟಪ್ಪದಲ್ಲಿ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನವನ್ನು ನಡೆಸಿ ಭಾರತದ ಕಲಾ ಶ್ರೀಮಂತಿಕೆಯನ್ನೂ ಹಿರಿಮೆಯನ್ನೂ ಜತ್ತಿನೆದುರು ತೋರ್ಪಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಲ ಸತೀಶ್ ಶೆಟ್ಟಿಯವರ ಗಾಯನಕ್ಕೆ ಮನಸೋತ ದೊಡ್ಡಣ :

ಯಕ್ಷರಂಗದ ಧ್ರುವತಾರೆ ಪಟ್ಟ ಸತೀಶ್ ಶೆಟ್ಟಿಯವರ ಸುಶ್ರಾವ್ಯ ಭಾಗವತಿಕೆಗೆ ಅಮೇರಿಕಾದ ಮಂದಿ ಫುಲ್ ಬೋಲ್ಡ್ ಆಗಿದ್ದಾರೆ.

ದೇವಾನಂದ ಭಟ್ ಬೆಳುವಾಯಿ ನೇತೃತ್ವದ ತಂಡದಲ್ಲಿ ಪದ್ಮನಾಭ ಉಪಾಧ್ಯಾಯ, ಲಕ್ಷ್ಮೀನಾರಾಯಣ ಸಾಮಗ, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಮೋಹನ ಬೆಳ್ಳಿಪ್ಪಾಡಿ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಸೇರಿ ಸೇರಿದಂತೆ ತೆಂಕುತ್ತಿಟ್ಟಿ‌ನ ಯುವ ಅಗ್ರಮಾನ್ಯ ಕಲಾವಿದರ ತಂಡ ಅಮೇರಿಕಾದ ನೆಲದಲ್ಲಿ ಯಕ್ಷಗಾನ ಕೃಷಿಯನ್ನು ಮಾಡಿದೆ.