ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಎನ್. ಸಿ. ಸಿ ಘಟಕಗಳ ವತಿಯಿಂದ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ ನ ಸಹಯೋಗದೊಂದಿಗೆ ಎನ್.ಸಿ.ಸಿ. ದಿನದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ನಲ್ಲಿ ಆಯೋಜಿಸಲಾಯಿತು . ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ನ ವೈದ್ಯಾಧಿಕಾರಿಯಾದ ಡಾ| ರಾಮಚಂದ್ರ ಭಟ್ರವರು “ರಕ್ತದಾನವು ಸಕಲ ದಾನಗಳಿಗಿಂತಲೂ ಶ್ರೇಷ್ಠವಾದುದು ಯಾಕೆಂದರೆ ರಕ್ತವನ್ನು ಬೇರೆ ಯಾವುದೇ ಕೃತಕರೀತಿಯಲ್ಲಿ ತಯಾರಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯವಂತ ವ್ಯಕ್ತಿಯು ದಾನಮಾಡುವ ಮೂಲಕ ಮಾತ್ರವೇ ರಕ್ತವನ್ನು ಪಡೆಯಬಹುದಾಗಿದೆ. ಅಪಘಾತ, ಶಸ್ತ್ರಕ್ರಿಯೆ ಹಾಗೂ ಜ್ವರ ಮುಂತಾದ ಆನಾರೋಗ್ಯಗಳ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. 18 ವರ್ಷಗಳಿಗೆ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ” ಎಂದು ಹೇಳಿದರು. ಕಾಲೇಜಿನ ಎನ್. ಸಿ. ಸಿ. ಭೂ ದಳದ ಅಧಿಕಾರಿ ಲೆ| ಜೋನ್ಸನ್ ಡೇವಿಡ್ ಸಿಕ್ವೆರಾ ಹಾಗೂ ನೌಕಾದಳದ ಅಧಿಕಾರಿ ತೇಜಸ್ವಿ ಭಟ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. 50 ಕೆಡೆಟ್ ಗಳು ರಕ್ತದಾನ ಮಾಡುವ ಮೂಲಕ ತಮಗಿರುವ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.
You Might Also Like
ಮಗಳ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದ ಉದ್ಯಮಿ ಲ| ಗಣೇಶ್ ಪೂಜಾರಿ-ಕಹಳೆ ನ್ಯೂಸ್
ಬಂಟ್ವಾಳ : ಹುಟ್ಟು ಹಬ್ಬದ ಆಚರಣೆಯಲ್ಲೂ ಪಾಶ್ಚ್ಯಾತ್ಯ ಸಂಸ್ಕೃತಿಯು ಆವರಿಸಿಕೊಂಡಿರುವ ಕಾಲಘಟ್ಟ ವಿದು. ಆಪ್ತೇಷ್ಟರನ್ನು ಕರೆದು ವೈಭವೋಪೇತವಾಗಿ ಹುಟ್ಟು ಹಬ್ಬವನ್ನು ಆಚರಿಸುವುದು ಎಲ್ಲಾ ಕಡೆಯೂ ಪ್ರಚಲಿತದಲ್ಲಿದೆ. ಆದರೆ...
ಮಲ್ಪೆ ಬೀಚ್ ನಲ್ಲಿ ಸಿರಿ ದಾನ್ಯಗಳ ಮಹತ್ವ ಮತ್ತು ಅಗತ್ಯ ಕಾಲ್ನಡಿಗೆ ಕಾರ್ಯಕ್ರಮ -ಕಹಳೆ ನ್ಯೂಸ್
ಮಲ್ಪೆ : ಮನುಕುಲದ ಪ್ರಾರಂಭ ಬೆಳೆ ಬಿತ್ತಿ ಬೆಳೆದ ಸಿರಿ ದಾನ್ಯ ಎಂಬ ಇತಿಹಾಸ ವಿದೆ, ಋಗ್ವೇದ ದಲ್ಲಿ ಯು ಸಿರಿದಾನ್ಯ ದ ಉಲ್ಲೇಖ ವಿದೆ, ಸಾದು...
ಜ್ಞಾನಸುಧಾದಲ್ಲಿ ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷಾ ಸಾಧಕರಿಗೆ ಸನ್ಮಾನ -ಕಹಳೆ ನ್ಯೂಸ್
ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಇನ್ ಇಂಡಿಯಾ ಅವರು ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸೆಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್)ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ...
ಬೆಂಗಳೂರಿನ ಭವಿಷ್ಯ ಸಿನೆಮಾಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಚಲನಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ – ಕಹಳೆ ನ್ಯೂಸ್
ಬೆಂಗಳೂರು : ಬೆಂಗಳೂರಿನ ಭವಿಷ್ಯ ಸಿನೆಮಾಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹೊಸ ಚಲನಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ. ಚಲನಚಿತ್ರದ ಚಿತ್ರೀಕರಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಸುಪಾಸಿನಲ್ಲಿ ಮಾಡುತ್ತಿದ್ದು,...