Wednesday, January 22, 2025
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳಿಂದ ಮಹಿಳಾ ದೌರ್ಜನ್ಯದ ಅರಿವು ಮೂಡಿಸಲು ಜಾಥಾ– ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಕೋಶ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಯುತ್‌ ರೆಡ್‌ ಕ್ರಾಸ್‌ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಜಾಥಾವನ್ನು ಆಯೋಜಿಸಲಾಯಿತು. ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಕೋಶದ ಸಂಚಾಲಕಿಯಾದ ನೋವೆಲಿನ್‌ ಫೆರ್ನಾಂಡಿಸ್‌ ರವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೊ ರವರು ವಿದ್ಯಾರ್ಥಿಗೆ ಘೋಷಣಾಫಲಕವನ್ನು ಹಸ್ತಾಂತರಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಈ ರೀತಿಯ ಜಾಥಾಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಡಿಸಬೇಕು. ವಿದ್ಯಾವಂತರೆನಿಸಿಕೊಂಡಿರುವ ನಾವು ಜನರಿಗೆ ಅರಿವು ಮೂಡಿಸುವುದು ಅತಿ ಅಗತ್ಯ. ಈ ನಿಟ್ಟಿನಲ್ಲಿ ಸಂಘಟಕರ ಶ್ರಮ ಪ್ರಶಂಸನೀಯ” ಎಂದು ಹೇಳಿದರು. ಕಾಲೇಜಿನ ಉಪ ಪ್ರಾಂಶುಪಾಲರುಗಳಾದ ಪ್ರೊ| ಗಣೇಶ್‌ ಭಟ್‌ ಹಾಗೂ ಡಾ| ಎ. ಪಿ ರಾಧಾಕೃಷ್ಣ ಮತ್ತು ಆಡಳಿತ ಕಛೇರಿಯ ಮುಖ್ಯಸ್ಥರಾದ ಜೋನ್‌ ಮೊಂತೆರೊ ರವರು ಉಪಸ್ಥಿತರಿದ್ದರು.

ಕಾಲೇಜಿನಿಂದ ಪ್ರಾರಂಭಗೊಂಡ ಜಾಥಾವು ಕಾವೇರಿ ಕಟ್ಟೆ ಮಾರ್ಗವಾಗಿ ಸಂಚರಿಸಿ ದರ್ಬೆ ವೃತ್ತದ ಮೂಲಕ ಹಾದು ಕಾಲೇಜಿನ ಮುಖ್ಯ ದ್ವಾರದ ಎದುರು ಮುಕ್ತಾಯಗೊಂಡಿತು. ಅತ್ಯುತ್ತಮ ಘೋಷವಾಕ್ಯ ಹಾಗೂ ಘೋಷಣಾ ಫಲಕಕ್ಕೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು. ಜಾಥಾದ ಸಂದರ್ಭದಲ್ಲಿ ಪೋಲೀಸರು ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಕೋಶ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಯುತ್‌ ರೆಡ್‌ ಕ್ರಾಸ್‌ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದೌರ್ಜನ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಜಾಥಾವನ್ನು ಆಯೋಜಿಸಲಾಯಿತು. ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಕೋಶದ ಸಂಚಾಲಕಿಯಾದ ನೋವೆಲಿನ್‌ ಫೆರ್ನಾಂಡಿಸ್‌ ರವರು ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೊ ರವರು ವಿದ್ಯಾರ್ಥಿಗೆ ಘೋಷಣಾಫಲಕವನ್ನು ಹಸ್ತಾಂತರಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು “ಈ ರೀತಿಯ ಜಾಥಾಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಡಿಸಬೇಕು. ವಿದ್ಯಾವಂತರೆನಿಸಿಕೊಂಡಿರುವ ನಾವು ಜನರಿಗೆ ಅರಿವು ಮೂಡಿಸುವುದು ಅತಿ ಅಗತ್ಯ. ಈ ನಿಟ್ಟಿನಲ್ಲಿ ಸಂಘಟಕರ ಶ್ರಮ ಪ್ರಶಂಸನೀಯ” ಎಂದು ಹೇಳಿದರು. ಕಾಲೇಜಿನ ಉಪ ಪ್ರಾಂಶುಪಾಲರುಗಳಾದ ಪ್ರೊ| ಗಣೇಶ್‌ ಭಟ್‌ ಹಾಗೂ ಡಾ| ಎ. ಪಿ ರಾಧಾಕೃಷ್ಣ ಮತ್ತು ಆಡಳಿತ ಕಛೇರಿಯ ಮುಖ್ಯಸ್ಥರಾದ ಜೋನ್‌ ಮೊಂತೆರೊ ರವರು ಉಪಸ್ಥಿತರಿದ್ದರು.

ಕಾಲೇಜಿನಿಂದ ಪ್ರಾರಂಭಗೊಂಡ ಜಾಥಾವು ಕಾವೇರಿ ಕಟ್ಟೆ ಮಾರ್ಗವಾಗಿ ಸಂಚರಿಸಿ ದರ್ಬೆ ವೃತ್ತದ ಮೂಲಕ ಹಾದು ಕಾಲೇಜಿನ ಮುಖ್ಯ ದ್ವಾರದ ಎದುರು ಮುಕ್ತಾಯಗೊಂಡಿತು. ಅತ್ಯುತ್ತಮ ಘೋಷವಾಕ್ಯ ಹಾಗೂ ಘೋಷಣಾ
ಫಲಕಕ್ಕೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು. ಜಾಥಾದ ಸಂದರ್ಭದಲ್ಲಿ ಪೋಲೀಸರು ಸುಗಮ
ಸಂಚಾರಕ್ಕೆ ಅನುವುಮಾಡಿಕೊಟ್ಟರು.