Wednesday, January 22, 2025
ಸುದ್ದಿ

ಶ್ರೀ ಕ್ಷೇತ್ರದ ರಾಜಾಂಗಣ ಬಂಟಕ0ಬ ಹಾಗೂ ಪಿಲಿಚಾಮುಂಡಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಭರತ್ ಶೆಟ್ಟಿ –ಕಹಳೆ ನ್ಯೂಸ್

ತುಳುನಾಡಿನ ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಒಂದು ನ್ಯಾಯಪೀಠವಾಗಿರುವ ಶ್ರೀ ಕ್ಷೇತ್ರ ಪೆರಾರದ ಬಲವಾಂಡಿ ಪಿಲಿಚಾಮುಂಡಿ ದೈವಸ್ಥಾನದ ಬಂಟಕAಬ ರಾಜಾಂಗಣ ಅನುಜ್ಞಾವಿಧಿ ಪೂಜಾ ಕಾರ್ಯಕ್ರಮ ಜನವರಿ 15ರಿಂದ 48ದಿನಗಳವರೆಗೆ ನಡೆಯಲಿದೆ.
ಶ್ರೀ ಕ್ಷೇತ್ರದ ರಾಜಾಂಗಣ ಬಂಟಕAಬ ಹಾಗೂ ಪಿಲಿಚಾಮುಂಡಿ ದೈವಸ್ಥಾನ 1.5 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ದೈವಸ್ಥಾನಕ್ಕೆ ಶಾಸಕರಾದ ಡಾ. ಭರತ್ ಶೆಟ್ಟಿಯವರು ಭೇಟಿ ನೀಡಿ, ಪಿಲಿಚಾಮುಂಡಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಮುಖರೊಂದಿಗೆ ಜೀರ್ಣೋದ್ಧಾರ ಕಾರ್ಯಗಳ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಸಲಹೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕುಡುಪು ಕೃಷ್ಣರಾಜ ತಂತ್ರಿಯವರ ಪೌರೋಹಿತ್ಯದಲ್ಲಿ ಶಿಲಾನ್ಯಾಸ ಪೂಜಾ ವಿಧಿವಿಧಾನ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಶಾಸಕರು ಮಾತನಾಡಿ, ಅನುಜ್ಞಾವಿಧಿಗೆ ಶುದ್ಧ ಎಳ್ಳೆಣ್ಣೆ ಸೇವೆ ನೀಡುವ ಭಕ್ತರಿಗೆ ಅವಕಾಶ ಇದೆ. ಕರಸೇವೆಯ ಮೂಲಕ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿವೆ. ಈವರೆಗೆ ಸುಮಾರು 1,500 ಕರಸೇವಕರು ನಿರಂತರ ಕರಸೇವೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಸಂಘ-ಸAಸ್ಥೆಗಳು ಹಾಗೂ ಊರ ಭಕ್ತರಿಂದ ಕರಸೇವೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪೆರ್ಗಡೆಯವರಾದ ಮುಂಡಬೆಟ್ಟುಗುತ್ತು ಗಂಗಾಧರ ರೈ, ಮಧ್ಯಸ್ಥ ಬ್ರಾಣಬೆಟ್ಟುಗುತ್ತು ಪ್ರತಾಪಚಂದ್ರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆಬೈಲು, ಉಪಾಧ್ಯಕ್ಷ ಕೃಷ್ಣ ಅಮೀನ್, ಇಂಜಿನಿಯರ್ ರತೀಶ್ ದಾಸ್, 16 ಗುತ್ತುಮನೆತನದ ಪ್ರಮುಖರು, ಓಂ ಪ್ರಕಾಶ್ ಶೆಟ್ಟಿ, ಪ್ರತೋಷ್ ಮಲ್ಲಿ, ಡಾ. ಮೋಹನ್‌ದಾಸ್ ಶೆಟ್ಟಿ, ವಿದ್ಯಾ ಜೋಗಿ, ಪ್ರಕಾಶ್ ಭಂಡಾರಿ, ರಮೇಶ್ ಅಮೀನ್, ಸುರೇಶ್ ಅಂಚನ್, ರಂಗನಾಥ ಭಂಡಾರಿ, ಹರೀಶ್ ಶೆಟ್ಟಿ ನಡುಗುತ್ತು, ಮೋಹನ್ ಪೂಜಾರಿ ಕಬೆತ್ತಿಗುತ್ತು, ಶೇಖರ ಸಪಲಿಗ, ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಸಾಯೀಶ್ ಚೌಟ, ವಿವಿಧ ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು, ವಿಲೇದಾರರು, ಗ್ರಾಮಸ್ಥರು ಹಾಗೂ ಮತ್ತಿತರರು ಬಉಪಸ್ಥಿತರಿದ್ದರು