ಬೆಳ್ತಂಗಡಿಯ ಬೆಂದ್ರಾಳದಲ್ಲಿ ರಿಂಗಣಿಸಿದ ನಿಷೇಧಿತ ಸ್ಯಾಟಲೈಟ್ ಫೋನ್ : ಕಾಡಿನಲ್ಲಿ ನಿಗೂಢ ಶಬ್ದ ಮನೆ ಅಲುಗಾಡಿದಂತಾಯಿತು..! – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವೃದ್ಧೆ –ಕಹಳೆ ನ್ಯೂಸ್
ಬೆಳ್ತಂಗಡಿ : ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ನಿಂದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಹೋಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆ ಧರ್ಮಸ್ಥಳ ಪೊಲೀಸರು ಬೆಂದ್ರಾಳ ಪ್ರದೇಶದಲ್ಲಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಪೊಲೀಸ್ ತನಿಖೆಯಲ್ಲಿ ಹಲವು ಆತಂಕಕಾರಿ ವಿಚಾರಗಳು ಬೆಳಕಿಗೆ ಬರುತ್ತಿದೆ.
ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ಪೆಕ್ಟರ್ ಚಿಂದನಂದ್ ಮತ್ತು ತಂಡ ಶುಕ್ರವಾರ ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂದು ಮತ್ತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಆನಿಲ್ ಕುಮಾರ್ ಡಿ ಮತ್ತು ತಂಡ ತೋಟತ್ತಾಡಿ ಗ್ರಾಮದ ಬಾರೆಮನೆ ನಿವಾಸಿಗಳಾದ ರುಕ್ಮಯ ಗೌಡ ಮನೆ ಮತ್ತು ಚೆಲುವಮ್ಮ ಮನೆಯಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಬೆಂದ್ರಾಳ ಸುತ್ತಮುತ್ತಲಿನ ಸುಮಾರು ಐದು ಕಿಮೀ ಅರಣ್ಯ ಪ್ರದೇಶದೊಳಗೆ ಹುಡುಕಾಟ ನಡೆಸಿ ನಂತರ ಸ್ಯಾಟಲೈಟ್ ಕರೆ ಹೋದ ಸ್ಧಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬಾರೆಮನೆಯ ನಿವಾಸಿ ಚೆಲುವಮ್ಮ(60)ರವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಾಡಿನಲ್ಲಿ ನಿಗೂಢ ಶಬ್ದ ಕೇಳಿರುವ ಬಗ್ಗೆ ಇವರು ಮಾಹಿತಿ ನೀಡಿದ್ದಾರೆ. ಕಳೆದ ಏಂಟು ದಿನದ ಹಿಂದೆ ಎಂದು ಕೇಳದ ನಿಗೂಢ ಸ್ಟೋಟದ ಶಬ್ದ ಕೇಳಿಬಂದಿದೆ. ಮಗ ನಾನು ಮಲಗಿದ್ದೇವು. ಸುಮಾರು ರಾತ್ರಿ 11 ಗಂಟೆಗೆ ಭಾರಿ ದೊಡ್ಡ ಶಬ್ದ ಬಂತು. ಒಮ್ಮೆಲೇ ಮನೆ ಅಲುಗಾಡಿದಂತಾಯಿತು ಈ ವಿಷಯವನ್ನು ಮಗನಾದ ಮೋಹನನಿಗೆ ತಿಳಿಸಿದೆ ಅವನು ಗಾಡ ನಿದ್ರೆಯಲ್ಲಿದ್ದ. ನಮ್ಮ ಕಡೆ ಆನೆ ಜಾಸ್ತಿ ಬರುತ್ತಿದೆ. ಅದಕ್ಕೆ ಪಟಾಕಿ ಸಿಡಿಸಿ ಓಡಿಸುತ್ತಾರೆ ಆದ್ರೆ ಈ ಹಿಂದೆ ಎಂದು ಆ ರೀತಿಯ ದೊಡ್ಡ ಶಬ್ದ ಕೇಳಿಸಿಲ್ಲ ಇದುವೇ ಮೊದಲು ಇಷ್ಟು ದೊಡ್ಡದರಲ್ಲಿ ಶಬ್ದ ಕೇಳಿಸಿದ್ದು. ಮೊನ್ನೆ ಮಂಗಳೂರಲ್ಲಿ ಬಾಂಬ್ ಸ್ಪೋಟ ನಡೆದಿದೆ ಸಾಟಲೈಟ್ ಕರೆ ಹೋಗಿದೆ ಅಂತ ಮಗ ಹೇಳುತ್ತಿದ್ದ ಅದಲ್ಲದೆ ಟಿವಿಯಲ್ಲಿ ಬರುತ್ತಿದೆ. ಅದರ ಬಗ್ಗೆ ನನಗೆ ಏನೂ ಜಾಸ್ತಿ ಗೊತ್ತಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚೆಲುವಮ್ಮನ ಹೇಳಿಕೆಯಂತೆ ಧರ್ಮಸ್ಥಳ ಪೊಲೀಸರು ಸುಮಾರು ಐದು ಕಿಮೀ ರಕ್ಷಿತಾರಣ್ಯದೊಳಗೆ ಪರಿಶೀಲನೆ ನಡೆಸಿದ್ದು ಯಾವುದೇ ಸ್ಪೋಟಕಗಳು ಅಥವಾ ಕುರುಹುಗಳು ಪತ್ತೆಯಾಗಿಲ್ಲ.
ನವೆಂಬರ್ 18 ರಂದು ನಿಷೇಧಿತ ಸ್ಯಾಟಲೈಟ್ ಫೋನ್ ಕರೆ ಹೋಗಿರುವ ಬಗ್ಗೆ ಕೇಂದ್ರ RAW ಅಧಿಕಾರಿಗಳಿಗೆ ಮಾಹಿತಿ ಲಭಿಸಿದ ಕಾರಣ ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡಲು ಮಾಹಿತಿ ರವಾನಿಸಿದ್ದಾರೆ.
ಸಾಟಲೈಟ್ ಕರೆ ಹೋದ ಪ್ರದೇಶಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲ್ ಕುಮಾರ್ ಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹಮ್ಮದ್ ಅಸ್ಲಾಮ್ , ಪ್ರಶಾಂತ್ , ರಾಜೇಶ್ ತೆರಳಿ ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳೀಯರಾದ ಮೋಹನ್ ಗೌಡ, ಉಮೇಶ್.ಬಿ , ಸತೀಶ್ ಬಳ್ಳಿ , ಕಾರ್ತಿಕ್ ಪೊಲೀಸರಿಗೆ ಸಹಕರಿಸಿದ್ದಾರೆ.