Tuesday, January 21, 2025
ಉಡುಪಿಸುದ್ದಿ

ಆರೈಕೆ ಮಾಡುತ್ತಿದ್ದ ವೃದ್ದೆಯ ಕುತ್ತಿಗೆಯ ಚಿನ್ನದ ಸರಕ್ಕೆ ಕೈ ಹಾಕಿದ್ದ ಹೋಂ ನರ್ಸ್ ಅರೆಸ್ಟ್ – ಕಹಳೆ ನ್ಯೂಸ್

ಉಡುಪಿ : ಆರೈಕೆ ಮಾಡುತ್ತಿದ್ದ ವೃದ್ದೆಯ ಕುತ್ತಿಗೆಗೆ ಕೈ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನದ ಸರ ಕದ್ದ ಹೋಂ ನರ್ಸನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ರೇಖಾ ಹೆಬ್ಬಾಳ್ಳಿ ಬಂಧಿತ ಆರೋಪಿಯಾಗಿದ್ದಾಳೆ. ಉಡುಪಿ ಉಷಾ ಮ್ಯಾರೇಜ್ ಬ್ಯುರೋ & ಜಾಬ್ ಲಿಂಕ್ಸ್ ಏಜೆನ್ಸಿ ಮುಖಾಂತರ ಹೋಂ ನರ್ಸ್ ಕೆಲಸಕ್ಕೆ ರೇಖಾ ಹೆಬ್ಬಾಳ್ಳಿ ಎಂಬವಳನ್ನು ಚೆನ್ನಿಬೆಟ್ಟು ಮದಗದ ನಿವಾಸಿ ವಯೋ ವೃದ್ದೇ ಸರಸ್ವತಿ(98) ರವರ ಆರೈಕೆಯನ್ನು ನೋಡಿಕೊಳ್ಳಲು ಹೋಂ ನರ್ಸ್ ಆಗಿ ನೇಮಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ದಿನಗಳವರೆಗೆ ಕೆಲಸ ಮಾಡಿದ ರೇಖಾ ನವೆಂಬರ್ 21 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಸರಸ್ವತಿರವರ ಕುತ್ತಿಗೆಯಲ್ಲಿದ್ದ ಸುಮಾರು 1, 45,000 ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಳು.
ಈ ಬಗ್ಗೆ ವೃದ್ದೆ ಸರಸ್ವತಿ ರವರ ಮಗ ವಸಂತ ಶೆಟ್ಟಿ ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ಅದೇ ದಿನ ಉಡುಪಿಯಲ್ಲಿ ರೇಖಾ ಹೆಬ್ಬಳ್ಳಿ ಬಾಗಲಕೋಟೆ ಎಂಬವಳನ್ನು ವಶಕ್ಕೆ ಪಡೆದು ಕಳವು ಮಾಡಿದ್ದ ಚಿನ್ನವನ್ನು ಸ್ವಾಧೀನ ಪಡಿಸಿಕೊಳ್ಳಲು ಯಶಸ್ವಿಯಾಗಿದ್ದರು.
ಆರೋಪಿ ರೇಖಾಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ನರ್ಸಿಂಗ್ ಏಜೆನ್ಸಿಗಳು ಕೆಲಸಕ್ಕೆ ಜನರನ್ನು ನೇಮಿಸುವರ ಬಗ್ಗೆ ಯಾವುದೇ ಪೂರ್ವಪರ ಮಾಹಿತಿಯನ್ನು ಪಡೆಯದೇ ನಿರ್ಲಕ್ಷ್ಯತನದಿಂದ ನೇಮಿಸುವುರಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿದ್ದು ಈ ಬಗ್ಗೆ ಗಮನ ಹರಿಸಲು ಪೊಲೀಸರು ಮನವಿ ಮಾಡಿದ್ದಾರೆ.
ಉಡುಪಿ ಎಸ್ ಪಿ ಹಾಕೆ ಅಕ್ಷಯ ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗ DYSPಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್‌ಐ ಅನಿಲ್ ಬಿ ಎಮ್, ಸಿಬ್ಬಂದಿಗಳಾದ ಎಎಸ್‌ಐ ಜಯಂತ, ಸುಂದರ್,ಎಚ್.ಸಿ. ದಯಾನಂದ ಪ್ರಭು, ರಘು, ರಾಘವೇಂದ್ರ, ಕಾಮತ್, ಪಿ.ಸಿ.ಆದರ್ಶ, ಭೀಮಪ್ಪ,ನಿತಿನ್,ನಬಿ,ಕಾರ್ತಿಕ ರಾಜೇಶ್ವರಿ, ಸುರೇಖಾ, ಜ್ಯೋತಿ ನಾಗರತ್ನಾ, ಸುಮಲತಾ, ಜಯಲಕ್ಷ್ಮೀರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ.