Tuesday, January 21, 2025
ದಕ್ಷಿಣ ಕನ್ನಡಸುದ್ದಿ

ಕವಳೆ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದ ಪಡೆದ ಶಾಸಕ ಡಾ.ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಗೌಡ ಸಾರಸ್ವತ್ ಬ್ರಾಹ್ಮಣ ಸಮುದಾಯದ ಪ್ರಮುಖ ಪೀಠಗಳಲ್ಲಿ ಒಂದಾಗಿರುವ 2700 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕವಳೆ ಮಠದ ಶಾಖಾ ಮಠ ಮಂಗಳೂರು ನಗರ ಉತ್ತರ ಕ್ಷೇತ್ರದ ಕೊಟ್ಟಾರ ಪ್ಲೈಒವರ್ ಬಳಿಯಲ್ಲಿ ನಿರ್ಮಾಣವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕವಳೆ ಮಠದ ಶಾಖಾ ಮಠದ ಶಂಕುಸ್ಥಾಪನೆಗೈದ ಕವಳೆ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರನ್ನ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಫಲಮಂತ್ರಾಕ್ಷತೆಯೊಂದಿಗೆ ತಮಗೆ ಹಾಕಿದ ಹಾರವನ್ನು ಪ್ರಸಾದ ರೂಪದಲ್ಲಿ ಶಾಸಕ ಡಾ.ವೈ ಭರತ್ ಶೆಟ್ಟಿಯವರಿಗೆ ನೀಡಿ ಆರ್ಶೀವದಿಸಿದರು. ಈ ಸಂದರ್ಭದಲ್ಲಿ ಕವಳೆ ಮಠದ ಪ್ರಮುಖರು, ಭಕ್ತರು, ಗಣ್ಯರು ಉಪಸ್ಥಿತರಿದ್ದರು.