Monday, January 20, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಕೆಲಸ ಕೊಟ್ಟ ಮಾಲೀಕನ ಜತೆ ಲವ್ವಿಡವ್ವಿ..! ಮಂಚ ಹಂಚಿಕೊಂಡ ಬಳಿಕ ಈಕೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಕಣ್ಣೀರ ಕಥೆ ಇದು – ಕಹಳೆ ನ್ಯೂಸ್

ಬೆಂಗಳೂರು: ಕೆಲಸ ಕೊಟ್ಟ ಅಂಗಡಿ ಮಾಲೀಕನನ್ನೇ ಬುಟ್ಟಿಗೆ ಬೀಳಿಸಿಕೊಂಡು ಲವ್ವಿಡವ್ವಿ ಶುರು ಮಾಡಿಕೊಂಡ ಯುವತಿ, ಮಂಚಕ್ಕೂ ಆಹ್ವಾನಿಸಿದ್ದಳು. ಸಮಸ್ಯೆ ಅಂತೇಳಿ 2 ಲಕ್ಷ ಹಣವನ್ನೂ ಪೀಕಿದ್ದಳು. ಇಬ್ಬರೂ ಒಪ್ಪಿತ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲಸದಾಕೆ ಸಿಕ್ಕಿದ ಖುಷಿಯಲ್ಲಿದ್ದ, ಪ್ರೀತಿ-ಪ್ರೇಮ-ಪ್ರಣಯ ಎಲ್ಲವೂ ಚೆನ್ನಾಗಿದೆ ಅಂದುಕೊಂಡಿದ್ದ ಮಾಲೀಕನಿಗೆ ಇದೀಗ ಬಾರೀ ಸಂಕಷ್ಟ ಎದುರಾಗಿದೆ.

ಏನಿದು ಪ್ರಕರಣ?:ನಗರದ ಬಟ್ಟೆ ವ್ಯಾಪಾರಿಯೊಬ್ಬರು ಎರಡು ವರ್ಷಗಳ ಹಿಂದೆ ಮೈತ್ರಿ ಎಂಬಾಕೆಯನ್ನು ಅಂಗಡಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕೆಲ ತಿಂಗಳ ಬಳಿಕ ಮೈತ್ರಿಯು ತನ್ನ ಸಹೋದರ ಕಿರಣ್​ಗೆ ಅಪಘಾತವಾಗಿದೆ. ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ಮಾಲೀಕನ ಬಳಿ 2 ಲಕ್ಷ ರೂ. ಪಡೆದಿದ್ದಳು. ನಂತರ ಹಣ ನೀಡದೆ ಸಮಜಾಯಿಷಿ ಹೇಳುತ್ತಿದ್ದಳು. ಈ ನಡುವೆ ಮಾಲೀಕನ ಜೊತೆ ಸಲುಗೆ ಬೆಳೆಸಿಕೊಂಡ ಯುವತಿ, ಲವ್ವಿಡವ್ವಿ ಶುರು ಮಾಡಿದ್ದಳು. ಇಬ್ಬರ ನಡುವೆ ದೈಹಿಕ ಸಂಪರ್ಕವೂ ಬೆಳೆದಿತ್ತು.

ಅಂಗಡಿ ಮಾಲೀಕನಿಗೆ ಸೆಕ್ಸ್‌ಗೆ ಸಮ್ಮತಿಸಿ ಎಲ್ಲವೂ ಮುಗಿದ ಬಳಿಕ ಯುವತಿ ವರಸೆ ಬದಲಿಸಿದ್ದಾಳೆ. ನಿನ್ನ ಬಳಿ ನನ್ನ ಅಣ್ಣ ಮಾತನಾಡಬೇಕು ಬಾ ಎಂದು ಕರೆದೊಯ್ದ ಯುವತಿ, 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಪ್ರೀತಿಯ ಗುಂಗಲ್ಲೇ ಇದ್ದ ಮಾಲೀಕನಿಗೆ ಶಾಕ್​ ಆಗಿದೆ. ತುಂಬಾ ನೊಂದುಕೊಂಡು 8 ಲಕ್ಷ ಹಣವನ್ನೂ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವತಿ ಮತ್ತು ಈಕೆಯ ಅಣ್ಣ, ಗೆಳೆಯ ಮೂವರೂ ಪದೇಪದೆ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡಿದ್ದಾರೆ.

ಪ್ರೇಮದಾಟ, ಸೆಕ್ಸ್ ಬಗ್ಗೆ ನಿನ್ನ ಕುಟುಂಬಸ್ಥರಿಗೆ ಹೇಳುವೆ ಎಂದು ಯುವತಿ ಧಮ್ಮಿ ಹಾಕಿದ್ದಾಳೆ. ಹಣ ನೀಡಿಲ್ಲ ಅಂದ್ರೆ ಎಲ್ಲ ವಿಚಾರವನ್ನೂ ನಿನ್ನ ಮನೆಗೆ ಹೇಳುತ್ತೀವಿ ಎಂದು ಈ ಗ್ಯಾಂಗ್​ ಬೆದರಿಕೆ ಹಾಕಿದೆ. ಭಯಬಿದ್ದ ಮಾಲೀಕ ಮತ್ತಷ್ಟು ಹಣ ಕೊಟ್ಟಿದ್ದಾರೆ. ಆದರೂ ಇವರ ಕಾಟ ನಿಂತಿರಲಿಲ್ಲ. ಬೇರೆ ದಾರಿ ಕಾಣದೆ ಉಪ್ಪಾರಪೇಟೆ ಪೊಲೀಸ್​ ಠಾಣೆಯಲ್ಲಿ ಮೂವರ ವಿರುದ್ಧ ಮಾಲೀಕ ದೂರು ದಾಖಲಿಸಿದ್ದಾರೆ. ಮೈತ್ರಿ (26), ಈಕೆಯ ಸಹೋದರ ಕಿರಣ್ (31) ಮತ್ತು ಸ್ನೇಹ ಸಿದ್ದು (30) ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ