Sunday, January 19, 2025
ಸುದ್ದಿ

ಪುತ್ತೂರಿನ ಸಾಹಿತಿ ಶಾಂತ ಕುಂಟಿನಿ ಈಗ ” ಸಾರಥಿ ನಂ. 1 ” ; ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ – ಕಹಳೆ ನ್ಯೂಸ್

ಪುತ್ತೂರು / ಬೆಂಗಳೂರು : ಖ್ಯಾತ ಸಾಹಿತಿ ಹತ್ತಾರೂ ವಿನೂತನ ಪ್ರಯೋಗ ಮತ್ತು ಪ್ರಯತ್ನಗಳ ಮೂಲಕ ಸಾರಸ್ವತ ಲೋಕಕ್ಕೆ ಹಲವಾರು ಕಾಣಿಕೆಗಳನ್ನು ನೀಡಿದ ಶಾಂತ ಕುಂಟಿನಿಯವರಿಗೆ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ನವರು ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿ ಸಾರಥಿ ನಂ.1 ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹಿಳೆಯಾಗಿದ್ದುಕೊಂಡು ಸಾಹಿತ್ಯದ ಜೊತೆಗೆ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದಲ್ಲದೆ, ಉಪ್ಪಿನಂಗಡಿಯ ಶಾಂತಾ ಸಭಾಭವನದ ಮಾಲಕರಾದ ಇವರು ಮನೆಯ ಮಕ್ಕಳ ಹಾರೈಕೆ ಲಾಲನೆ ಪಾಲನೆಯ ಜೊತೆಗೆ ಉತ್ತಮ ಚಾಲಕಿ ಕೂಡ ಹೌದು, ಇವರ ಪತಿ ರವಿ ಕುಂಟಿನಿಯವರು ಅಡುಗೆ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಹತ್ತಾರು ಬ್ರಹ್ಮಕಲಶೋತ್ಸವಗಳಲ್ಲಿ ಪಕ ಪ್ರವೀಣರಾಗಿ ಲಕ್ಷಾಂತರ ಮಂದಿಗೆ ಉಣ ಬಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುಂಬು ಕುಟುಂಬದ ಶಾಂತ ಕುಂಟಿನಿಯವರ ಸಾಧನೆಯನ್ನು ಪರಿಗಣಿಸಿ ಬೆಂಗಳೂರಿನ ವಿಧಾನ ಸೌಧದ ಬಳಿ ಇರು ಪತ್ರಕರ್ತ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಶಾಂತ ಕುಂಟಿನಿಯರಿಗೆ ಸಿಕ್ಕಿದ ಗೌರವ ಮಹಿಳಾ ಸಮುದಾಯಕ್ಕೆ ಸಂದ ಗೌರವವಾಗಿದೆ.