ಮತ್ತೆ ಕ್ರೂಸ್ ಪ್ರವಾಸೋದ್ಯಮಕ್ಕೆ ಕಳೆ : 271 ಪ್ರವಾಸಿಗರನ್ನು ಹೊತ್ತ ಹಡಗು ಮಂಗಳೂರಿಗೆ ; ಯಕ್ಷಗಾನ, ಚೆಂಡೆ ವಾದನಗಳೊಂದಿಗೆ ಪ್ರವಾಸಿಗರ ಸ್ವಾಗತ – ಕಹಳೆ ನ್ಯೂಸ್
ಪಣಂಬೂರು: ಎರಡು ವರ್ಷ ಕೊರೊನಾ ಹೊಡೆತದಿಂದ ನಲುಗಿದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಗರಿಗೆದರುವ ಲಕ್ಷಣ ಕಂಡು ಬಂದಿದೆ. ಸೋಮವಾರ ನವಮಂಗಳೂರು ಬಂದರಿಗೆ 271 ಪ್ರವಾಸಿಗರು ಮತ್ತು 373 ಮಂದಿ ಸಿಬಂದಿಯನ್ನು ಹೊತ್ತ ಎಂಎಸ್ ಯುರೋಪಾ 2 ಆಗಮಿಸಿತು.
ಯಕ್ಷಗಾನ, ಚೆಂಡೆ ವಾದನಗಳೊಂದಿಗೆ ಪ್ರವಾಸಿಗರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಬಸ್ ಹಾಗೂ ಖಾಸಗೀ ಪ್ರವಾಸಿ ಕಾರು ಗಳಲ್ಲಿ ಪ್ರವಾಸಿಗರನ್ನು ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಮಂಗಳೂರಿನ ಸೈಂಟ್ ಅಲೋಶಿಯಸ್ ಚಾಪೆಲ್, ಕದ್ರಿ ದೇವಸ್ಥಾನ, ಮಂಗಳೂರು ಮಾರ್ಕೆಟ್, ಕುದ್ರೋಳಿ ದೇವಸ್ಥಾನ ಸಹಿತ ಆಕರ್ಷಕ ಪ್ರವಾಸಿ ಸ್ಥಳಗಳಿಗೆ ಕರೆದೊಯ್ಯ ಲಾಯಿತು. ಬಳಿಕ ಪ್ರವಾಸಿ ಹಡಗು ಕೊಚ್ಚಿಗೆ ತೆರಳಿತು.