Tuesday, January 21, 2025
ದಕ್ಷಿಣ ಕನ್ನಡರಾಜಕೀಯಸುದ್ದಿಸುಳ್ಯ

ವಿಧಾನಸಭಾ ಚುನಾವಣೆ : ಸುಳ್ಯ ಕ್ಷೇತ್ರದಿಂದ ಕೈ ನಾಯಕ ಕೆ. ಶರಚ್ಚಂದ್ರವರಿಗೆ ಟಿಕೆಟ್ ಪಕ್ಕಾ..? ಬಿಜೆಪಿಯ ಭದ್ರಕೋಟೆ ಸುಳ್ಯದಲ್ಲಿ ಕೈ ನಾಯಕರಿಗೆ ಸಿಗುತ್ತಾ ಗೆಲುವು..? – ಕಹಳೆ ನ್ಯೂಸ್

ವಿಧಾನಸಭಾ ಚುನಾವಣೆಗೆ ಆಯಾ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಸಿದ್ದತೆ ನಡೆಯುತ್ತಿದೆ. ಪೈಪೋಟಿಯಲ್ಲಿ ಮತದಾರರು ಮಾತ್ರ ಮೌನವಾಗಿ ಎಲ್ಲವನ್ನೂ ಅವಲೋಕಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕೇಸರಿ ಕೋಟೆ ಎಂದೇ ಖ್ಯಾತಿ ಗಳಿಸಿರುವ ದಕ್ಷಿಣ ಕನ್ನಡದತ್ತ ಜನ ನಾಯಕರು ಹಾಗೂ ಇಡೀ ರಾಜ್ಯದ ಚಿತ್ತ ಹೊರಳಿದೆ.
ಚುನಾವಣೆ ಸಮೀಪಿಸುವ ಸಂದರ್ಭದಲ್ಲಿ ಜನರ ಈ ಕುತೂಹಲಕ್ಕೆ ಕಾರಣವಾಗಿದ್ದು ಇಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳು ಹಾಗೂ ಗಲಭೆಗಳೇ ಎಂದರೆ ತಪ್ಪಾಗದು. ಹೀಗಿರುವಾಗ ಒಟ್ಟು ಎಂಟು ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆಯ ಸುಳ್ಯ ಕ್ಷೇತ್ರದ ರಾಜಕೀಯ ಚಿತ್ರಣ ಹೇಗಿದೆ? ಅಭ್ಯರ್ಥಿಗಳು ಯಾರು ಎನ್ನುವುದು ಈ ಬಾರಿಯ ಕುತೂಹಲವಾಗಿದೆ.
ಮೀಸಲು ಕ್ಷೇತ್ರದಲ್ಲಿ ಕೇಸರಿ ಪಡೆ ನಿರಂತರವಾಗಿ ಜಯ ದಾಖಲಿಸಿಕೊಳ್ಳುತ್ತಿದ್ದರೂ, ಇತ್ತ ಕಾಂಗ್ರೆಸ್ ಸೋಲಿಲ್ಲದ ಸರದಾರ ಅಂಗಾರರನ್ನು ಸೋಲಿಸಲು ತುದಿಗಾಲಿನಲ್ಲ ನಿಂತಿದೆ. ಈ ನಿಟ್ಟಿನಲ್ಲಿ ವಿರೋಧ ಪಕ್ಷವೂ ಈ ಕ್ಷೇತ್ರದಲ್ಲಿ ಬಲೆ ಹೆಣೆಯಲಾರಂಭಿಸಿದ್ದು, ಜನ ಸಾಮಾನ್ಯರ ಗಮನ ಸೆಳೆಯಲು ಪ್ಲಾನ್ ಮಾಡಿದೆ.
ಇನ್ನು ಬಿಜೆಪಿಯ ಭದ್ರ ಅಡಿಪಾಯವಾದ ಶಾಸಕ ಎಸ್.ಅಂಗಾರ ಅವರನ್ನ ಅಲುಗಾಡಿಸಲು ಕಾಂಗೇಸ್ ಪಾಳಯ ಮುಂದಾಗಿದ್ದು, ಹಲವು ಆರೋಪಗಳನ್ನ ಅಂಗಾರರ ಮುಂದಿಟ್ಟಿದೆ. ಸತತ ಆರು ಬಾರಿ ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಶಾಸಕ ಎಸ್. ಅಂಗಾರ ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ. ಆದರೆ ಅಂಗಾರ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನದ ಹೊಗೆಯಾಡುತ್ತಿದೆ ಎನ್ನೋದು ಕೈ ನಾಯಕರ ಮಾತು. ಇನ್ನು ಸುಳ್ಯ-ಕಡಬದ ಭೌಗೋಳಿಕ ಸ್ಥಿತಿಗತಿ, ಜನಜೀವನದ ನಾಡಿಮಿಡಿತವೇ ತಿಳಿಯದ ಶಾಸಕ ಅಂಗಾರ ತಮ್ಮ 28 ವರ್ಷಗಳ ಶಾಸಕತ್ವದ ಈ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಒಂದು ಯೋಜನೆಯನ್ನೂ ಹಾಕಿಕೊಂಡಿಲ್ಲ ಎಂಬ ಅಸಮಾಧಾನ ಕಾಂಗ್ರೇಸ್ ಪಾಳಯದಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವ ರಣತಂತ್ರ ಕಾಂಗ್ರೆಸ್ ಪಕ್ಷದ ವರಿಷ್ಠರು ಮಾಡುತ್ತಿರುವ ಸುದ್ದಿಗಳು ಹರಿದಾಡುತ್ತಿವೆ. ಇಂತಹದರಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸುದ್ದಿಯಿಲ್ಲದೆ ಸೇವೆ ಮಾಡುತ್ತಿರುವ ಮೂಲ ಕಾಂಗ್ರೆಸಿಗರಾದ ಶರಚ್ಛಂದ್ರರವರಿಗೆ ಟಿಕೆಟ್ ಪಕ್ಕಾ ಎನ್ನುವ ವಿಚಾರ ಬಹುತೇಕ ಖಚಿತವಾಗಿದೆ.

ಯಾರಿದು ಶರಚ್ಛಂದ್ರ?
ಸ್ವಾತ೦ತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರಿಂದ ಪ್ರೇರಣೆ ಪಡೆದು ಸತ್ಯಾಗ್ರಹದಲ್ಲಿ ಸೆರೆಮನೆ ವಾಸ ಅನುಭವಿಸಿ 1937ರಲ್ಲಿ ಭಾರತೀಯ ರಾಷ್ಟ್ರೀಯ  ಕಾಂಗ್ರೆಸ್ ಅಭ್ಯರ್ಥಿಯಾಗಿ 20 ವರ್ಷ ಕುಂದಾಪುರ ಕ್ಷೇತ್ರದಿಂದ ಮದ್ರಾಸು ಶಾಸನ ಸಭೆಗೆ ಚುನಾಯಿತರಾಗಿದ್ದ ಈಶ್ವರರವರ ಸುಪುತ್ರ. ಕೆ.ಶರಚ್ಚಂದ್ರ ನಂತೂರು ಸಮಾಜಿಕ,ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ. ತಂದೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ನಿಷ್ಠೆ ಇರುವ ಕೆ. ಶರಚ್ಚಂದ್ರವರಿಗೆ ಬಹುತೇಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಕ್ಕಾ ಆಗಿದೆ ಎಂಬ ಸುದ್ದಿಗಳು ಹೊರಬರುತ್ತಿದೆ.