Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಡಿ.17 ರಂದು ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿದ ಶಾಸಕ ಹರೀಶ್ ಪೂಂಜ -ಕಹಳೆ ನ್ಯೂಸ್

ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್ ,ಬಜರಂಗದಳ ರೆಖ್ಯ ಘಟಕದ ನೇತೃತ್ವದಲ್ಲಿ ಡಿ.17 ರಂದು ನಡೆಯಲಿರುವ 2 ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಹರೀಶ್ ಪೂಂಜ ಅವರು ಅನಾವರಣ ಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೆಳ್ತಂಗಡಿ ಪ್ರಖಂಡದ ಮುಖಂಡರಾದ ಶ್ರೀ ಅಖಿಲ್ ರೆಖ್ಯ, ಅರಸಿನಮಕ್ಕಿ ಗ್ರಾ. ಪಂ ಅಧ್ಯಕ್ಷರಾದ ಶ್ರೀ ನವೀನ್ ರೆಖ್ಯ , ರೆಖ್ಯ ಘಟಕದ ಕಾರ್ಯದರ್ಶಿ ಯೋಗಿಶ್ ಪಿಲತ್ತಡಿ, ಕಾರ್ಯಕರ್ತರಾದ, ಜಗದೀಶ್ ನಾಗಂಡ, ಚೇತನ್ ಕೆರೆಜಾಲು ಮತ್ತು ಮತ್ತಿತರರು ಉಪಸ್ಥಿತರಿದ್ದರು.