Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮುಡಿಪು ತಾಜ್ ಸೆಂಟರ್ ಹೋಟೆಲಿನಲ್ಲಿ ಗೋ ಮಾಂಸದ ಬಿರಿಯಾನಿ : ಹೋಟೆಲ್ ಮಾಲಕ ಹುಸೇನ್ ಪೊಲೀಸ್ ವಶ – ಕಹಳೆ ನ್ಯೂಸ್

ಮುಡಿಪುವಿನಲ್ಲಿ ಕಾರ್ಯಚರಿಸ್ತಾ ಇರುವ ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ಗೋ ಮಾಂಸದ ಬಿರಿಯಾನಿ ಮಾಡಿ ಬಡಿಸ್ತಾ ಇದ್ದ ಹೋಟೆಲ್ ಮಾಲಕ ಹುಸೇನ್‌ನ್ನ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹೋಟೆಲ್‌ಗೆ ಊಟಕ್ಕೆ ಬಂದವರು ಗೋ ಮಾಂಸದ ಬಿರಿಯಾನಿ ಇದೆ ಎಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಹೋಟೆಲಿಗೆ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ತೆರಳಿ ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಜೊತೆಗೆ ಹಿಂ.ಜಾ.ವೇ ಕಾರ್ಯಕರ್ತರು ದಾಳಿ ಮಾಡಿ ದನದ ಮಾಂಸದ ಬಿರಿಯಾನಿ ಮತ್ತು ತಯಾರಿ ಮಾಡಿಟ್ಟಿದ್ದ ಮಾಂಸವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಗೋಮಾಂಸವೆಂದು ದೃಢಪಟ್ಟಿದ್ದು, ಹೋಟೆಲ್ ಮಾಲಕ ಹುಸೇನ್ ಎಂಬವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.