” ನಂತೂರು ಘಟನೆ ಕೇವಲ ಸ್ಯಾಂಪಲ್ ಮಾತ್ರ, ಇನ್ನೂ ಕೂಡ ನೀವು ಲವ್ ಜಿಹಾದ್ ನಿಲ್ಲಿಸದಿದ್ದರೆ, ನಿಮಗೆ ಮಯ್ಯತ್ತ್ (ಮೃತದೇಹ) ಶತಸಿದ್ಧ. ” – ವೈರಲ್ ಆಗುತ್ತಿದೆ ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಫೋಸ್ಟ್ – ಕಹಳೆ ನ್ಯೂಸ್
ಮಂಗಳೂರು: ಗುರುವಾರ ನಗರದ ನಂತೂರು ಬಳಿ ನಡೆದ ಲವ್ ಜಿಹಾದ್ ಘಟನೆ ನಂತರ, ನಂತೂರು ಘಟನೆ ಕೇವಲ ಸ್ಯಾಂಪಲ್ ಅಷ್ಟೇ ಎಂದು ಮಂಗಳೂರು ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಹೇಳಿದ್ದಾರೆ.
ಗುರುವಾರ ಸಂಜೆ ನಂತೂರಿನಲ್ಲಿ ನಿಟ್ಟೆ ಕಾಲೇಜಿನ ಹಿಂದೂ ಹುಡುಗಿ ಜೊತೆ ಮುಸ್ಲಿಂ ಯುವಕ ಬಸ್ ನಲ್ಲಿ ಅಶ್ಲೀಲವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಿ ಜೋಡಿಯನ್ನು ಬಸ್ ನಿಂದ ಕೆಳಗಿಳಿಸಿ ಯುವಕನಿಗೆ ಧರ್ಮದೇಟು ನೀಡಿ, ಯುವತಿಗೆ ಬುದ್ದಿಹೇಳಿದ ಘಟನೆ ವರದಿಯಾಗಿತ್ತು. ಅದನ್ನು ಒಂದಿಷ್ಟು ಮುಸ್ಲಿಂ ಸಂಘಟನೆಗಳು ಹಾಗೂ ಕೆಲ ಹೋರಾಟಗಾರರು ಅನೈತಿಕ ಪೊಲೀಸ್ ಗಿರಿ ಎಂದು ಬಿಂಬಿಸತೊಡಿದ್ದರು, ಇದೀಗ ಇದರ ಬೆನ್ನಿಗೆ ಹೇಳಿಕೆ ನೀಡಿರುವ ಪುನೀತ್ ಅತ್ತಾವರ, ಹೀಗೆ ಮುಂದುವರೆದಲ್ಲಿ ರಕ್ತಪಾತದ ಎಚ್ಚರಿಕೆ ನೀಡಿದ್ದಾರೆ.
” ಪದೇ ಪದೇ ಹೇಳುತ್ತಿದ್ದೇವೆ ಹಿಂದೂ ಹುಡುಗಿಯರ ಜೊತೆ ತಿರುಗಾಡಬೇಡಿ. ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ. ಆದರೂ ನೀವು ಕೇಳುತ್ತಿಲ್ಲ. ನಂತೂರು ಘಟನೆ ಕೇವಲ ಸ್ಯಾಂಪಲ್ ಮಾತ್ರ. ಇನ್ನೂ ಕೂಡ ನೀವು ಲವ್ ಜಿಹಾದ್ ನಿಲ್ಲಿಸದಿದ್ದರೆ ನಿಮಗೆ ಮಯ್ಯತ್ತ್ (ಮೃತದೇಹ) ಶತಸಿದ್ಧ‘‘ ಎಂದು ಪುನೀತ್ ಅತ್ತಾವರ ನೀಡಿದ್ದಾರೆ ಎನ್ನಲಾದ ಪೋಸ್ಟರ್ ವೊಂದು ವೈರಲ್ ಆಗುತ್ತಿದೆ.